ಈಶಾನ್ಯದಲ್ಲಿ ಪಿಎಂ ಮೋದಿ: ಶೌರ್ಯದ ಪ್ರತಿಮೆ ಉದ್ಘಾಟನೆ

masthmagaa.com:

ಪ್ರಧಾನಿ ನರೇಂದ್ರ ಮೋದಿ ಈಶಾನ್ಯ ರಾಜಗಳ ಪ್ರವಾಸದಲ್ಲಿದ್ದಾರೆ. ಅರುಣಾಚಲ ಪ್ರದೇಶದಲ್ಲಿ ಪಿಎಂ ಮೋದಿ ಸೇಲಾ ಟನೆಲ್‌ ಲೋಕಾರ್ಪಣೆ ಮಾಡಿದ್ದನ್ನ ಸುತ್ತು ಜಗತ್ತಲ್ಲಿ ನೋಡಿದ್ವಿ. ಅದಕ್ಕೂ ಮುಂಚೆ ಮೋದಿ ಅಸ್ಸಾಂಗೆ ಭೇಟಿ ನೀಡಿ, ಶನಿವಾರ ಬೆಳಿಗೆ ಕಾಜಿರಂಗ ಫಾರೆಸ್ಟ್‌ನಲ್ಲಿ ಆನೆ ಮೇಲೆ ಕೂತು ಸಫಾರಿ ಮುಗಿಸಿ, ಅರುಣಾಚಲ ಪ್ರದೇಶಕ್ಕೆ ಹೋದ್ರು. ರಾಜಧಾನಿ ಇಟಾನಗರ್‌ನಲ್ಲಿ ವಿಕಸಿತ ಭಾರತ, ವಿಕಸಿತ ಈಶಾನ್ಯ ಕಾರ್ಯಕ್ರಮದಲ್ಲಿ ಪಾಲ್ಗೊಂಡ್ರು.

ನಂತರ ಸೇಲಾ ಟನೆಲ್‌ ಉದ್ಘಾಟನೆ ನೆರವೇರಿಸಿದ್ರು. ಜೊತೆಗೆ 10 ಸಾವಿರ ಕೋಟಿ ರೂಪಾಯಿ ವೆಚ್ಚದ ಉನ್ನತಿ ಸ್ಕೀಮನ್ನ, ಮಣಿಪುರ, ಮೆಘಾಲಯ, ನಾಗಾಲ್ಯಾಂಡ್‌, ಸಿಕ್ಕಿಂ ತ್ರಿಪುರಗಳಿಗೆ ಸಂಬಂಧಿಸಿದ ಹಲವು ಸಭಿವೃದ್ಧಿ ಕೆಲಸಗಳನ್ನ ಲಾಂಚ್‌ ಮಾಡಿದ್ರು. ಕೊನೆಗೆ ಅಸ್ಸಾಂಗೆ ವಾಪಸ್‌ ಬಂದು ಅಲ್ಲಿನ ಜೋರ್‌ಹತ್‌ನಲ್ಲಿ 125ಅಡಿ ಎತ್ತರದ ಅಹೋಮ್‌ ಸಾಮ್ರಾಜ್ಯದ ಸೇನಾಧಿಪತಿ ಲಚಿತ್‌ ಬೋರ್ಪುಕನ್‌ ಪ್ರತಿಮೆಯನ್ನ ಅನಾವರಣಗೊಳಿಸಿದ್ದಾರೆ. ಈ ಕಂಚಿನ ಪ್ರತಿಮೆಯನ್ನ ದ ʻಸ್ಟ್ಯಾಚ್ಯೂ ಆಫ್‌ ವಾಲೋರ್‌ʼ ಅಂದ್ರೆ ಶೌರ್ಯದ ಪ್ರತಿಮೆ ಅಂತ ಕರೆಯಲಾಗ್ತಿದೆ. ಸೇನಾಧಿಪತಿ ಲಚಿತ್‌ ಈಶಾನ್ಯದಲ್ಲಿ ಮುಘಲರನ್ನ ಹಿಮ್ಮೆಟ್ಟಿಸಿದ್ರು. ಇನ್ನು ಇದರ ಜೊತೆಗೆ ಪಿಎಂ ಮೋದಿ ಸುಮಾರು 18 ಸಾವಿರ ಕೋಟಿ ವೆಚ್ಚದ ಅಭಿವೃದ್ಧಿ ಕೆಲಸಗಳ, ಶಂಕುಸ್ಥಾಪನೆ, ಉದ್ಘಾಟನೆ ಮಾಡಿದ್ದಾರೆ. ಇನ್ನು ನಾಳೆ ಪಿಎಂ ಮೋದಿ ಪಶ್ಚಿಮ ಬಂಗಾಳ ಹಾಗೂ ಉತ್ತರಪ್ರದೇಶಗಳಿಗೆ ಭೇಟಿ ನೀಡಲಿದ್ದಾರೆ.

-masthmagaa.com

Contact Us for Advertisement

Leave a Reply