ಆಸ್ಪತ್ರೆಗೆ ತೆರಳಿ ತಾಯಿಯ ಆರೋಗ್ಯ ವಿಚಾರಿಸಿದ ಪ್ರಧಾನಿ ಮೋದಿ!

masthmagaa.com:

ಪ್ರಧಾನಿ ಮೋದಿ ಅವರ ತಾಯಿ ಶತಾಯುಷಿ ಹೀರಾಬೆನ್‌ ಮೋದಿ ಅವ್ರ ಆರೋಗ್ಯದಲ್ಲಿ ಇಂದು ಏರುಪೇರಾಗಿದೆ. ಅಹಮದಾಬಾದ್‌ನ ಯುಎನ್‌ ಮೆಹ್ತಾ ಆಸ್ಪತ್ರೆಯಲ್ಲಿ ಅವ್ರು ಚಿಕಿತ್ಸೆ ಪಡೆಯುತ್ತಿದ್ದು, ಆರೋಗ್ಯ ಸ್ಟೇಬಲ್‌ ಆಗಿದೆ ಅಂತ ವೈದ್ಯರು ತಿಳಿಸಿದ್ದಾರೆ. ಇತ್ತ ತಾಯಿಯನ್ನ ನೋಡಲು ಮೋದಿ ಅಹಮದಾಬಾದ್‌ಗೆ ಬಂದು ಸುಮಾರು ಒಂದೂವರೆ ಗಂಟೆಗಳವರೆಗೆ ಅವ್ರ ಜೊತೆಗೆ ಸಮಯ ಕಳೆದಿದ್ದಾರೆ. ತಾಯಿಯ ಆರೋಗ್ಯದಲ್ಲಿ ಸುಧಾರಣೆ ಕಂಡು ಬಂದ ನಂತ್ರ ದೆಹಲಿಗೆ ತೆರಳಿದ್ದಾರೆ. ಇತ್ತ ಮೋದಿ ತಾಯಿಯ ಅನಾರೋಗ್ಯದ ಸುದ್ದಿ ತಿಳಿದ ಬೆನ್ನಲ್ಲೇ ಗುಜರಾತ್​​ನ ಅನೇಕ ಶಾಸಕರು ಆಸ್ಪತ್ರೆಗೆ ಭೇಟಿ ನೀಡಿ ಆರೋಗ್ಯದ ಬಗ್ಗೆ ವಿಚಾರಿಸಿದ್ದಾರೆ. ಇನ್ನು ಮೋದಿ ತಾಯಿ ಅವರ ಆರೋಗ್ಯದ ಕುರಿತು ಕಾಂಗ್ರೆಸ್‌ ನಾಯಕ ರಾಹುಲ್‌ ಗಾಂಧಿ ಟ್ವೀಟ್‌ ಮಾಡಿದ್ದಾರೆ. ತಾಯಿ ಮತ್ತು ಮಗನ ನಡುವಿನ ಪ್ರೀತಿ ಶಾಶ್ವತ ಮತ್ತು ಅಮೂಲ್ಯವಾದದ್ದು. ಮೋದಿಜೀ ಈ ಕಷ್ಟದ ಸಮಯದಲ್ಲಿ ನನ್ನ ಪ್ರೀತಿ ಹಾಗೂ ಬೆಂಬಲ ನಿಮ್ಮೊಂದಿಗಿದೆ. ನಿಮ್ಮ ತಾಯಿ ಬೇಗನೇ ಗುಣಮುಖರಾಗಲಿ ಅಂತ ಹಾರೈಸುತ್ತೇನೆ ಅಂತ ಹೇಳಿದ್ದಾರೆ. ಮೋದಿ ಅವರ ಸಹೋದರ ಪ್ರಹ್ಲಾದ್ ಮೋದಿ, ಅವರ ಪುತ್ರಿ ಹಾಗೂ ಅಳಿಯ ಇಂದು ಮೈಸೂರಿನ ಚಾಮುಂಡೇಶ್ವರಿ ದೇವಾಲಯಕ್ಕೆ ಭೇಟಿ ನೀಡಿ ಪ್ರಾರ್ಥನೆ ಸಲ್ಲಿಸಿದ್ದಾರೆ. ಅಂದ್ಹಾಗೆ ನೆನ್ನೆ ಮೋದಿ ಅವರ ಸಹೋದರ ಹಾಗೂ ಕುಟುಂಬದವರು ಹೋಗ್ತಿದ್ದ ಕಾರು ಮೈಸೂರಿನ ಬಳಿ ಅಪಘಾತಕ್ಕೀಡಾಗಿತ್ತು. ಅದರ ಬೆನ್ನಲ್ಲೇ ತಾಯಿಯ ಆರೋಗ್ಯ ಹದಗೆಟ್ಟಿದೆ.

-masthmagaa.com

Contact Us for Advertisement

Leave a Reply