ಕಾಂಗ್ರೆಸ್‌ ಸಾಯ್ತಿದೆ, ಪಾಕಿಸ್ತಾನ ಅಳ್ತಿದೆ: ಪ್ರಧಾನಿ ನರೇಂದ್ರ ಮೋದಿ

masthmagaa.com:

ಕಾಂಗ್ರೆಸ್‌ ಮತ್ತು ಪಾಕಿಸ್ತಾನ್‌ ಇಬ್ರೂ ಪಾರ್ಟ್‌ನರ್ಸ್‌ ಅಂತ ಪ್ರದಾನಿ ಮೋದಿ ತೀವ್ರ ವಾಗ್ದಾಳಿ ಮಾಡಿದ್ದಾರೆ. ʻದುರ್ಬಲವಾಗಿದ್ದ ಹಿಂದಿನ ಕಾಂಗ್ರೆಸ್‌ ಸರ್ಕಾರ ಭಯೋತ್ಪಾದನೆಗೆ ಸಹಾಯವಾಗುವಂತೆ ದೇಶಕ್ಕೆ ಸಂಬಂಧಿಸಿದ ಇಂಪಾರ್ಟೆಂಟ್‌ ದಾಖಲೆಗಳನ್ನ ಉಗ್ರರಿಗೆ ನೀಡ್ತಿತ್ತು. ಆದ್ರೆ ಮೋದಿ ಸರ್ಕಾರ ಈ ಮಣ್ಣಿನಲ್ಲಿ ಭಯೋತ್ಪಾದನೆ ಕಿತ್ತಾಗ್ತಿದೆ. ಕೋಇನ್ಸಿಡೆನ್ಸ್‌ ಏನಂದ್ರೆ… ಭಾರತದಲ್ಲೀಗ ಕಾಂಗ್ರೆಸ್‌ ದುರ್ಬಲವಾಗ್ತಿದೆ. ಕಾಂಗ್ರೆಸ್‌ ಸಾಯ್ತಿದೆ…. ಆ ಕಡೆ ಪಾಕಿಸ್ತಾನ ಅಳ್ತಿದೆ. ಕಾಂಗ್ರೆಸ್‌ಗಾಗಿ ಪಾಕಿಸ್ತಾನಿ ನಾಯಕರು ದೇವ್ರಲ್ಲಿ ಪ್ರಾರ್ಥನೆ ಮಾಡ್ಕೊಳ್ತಿದ್ದಾರೆ. ʻಶೆಹಜಾದಾʼ ಅಂದ್ರೆ ರಾಹುಲ್‌ ಗಾಂಧಿಯವ್ರನ್ನ ಭಾರತದ ಪ್ರಧಾನಿ ಮಾಡಲು ಪಾಕಿಸ್ತಾನ ತುದಿಗಾಲಿನಲ್ಲಿ ನಿಂತ್ಕೊಂಡಿದೆ…ಈ ಕಾಂಗ್ರೆಸ್‌ ಪಾಕಿಸ್ತಾನದ ದೊಡ್ಡ ಫ್ಯಾನ್‌. ಪಾಕಿಸ್ತಾನ ಮತ್ತು ಕಾಂಗ್ರೆಸ್‌ನ ಈ ಪಾರ್ಟನರ್‌ಶಿಪ್‌…ಸಂಬಂಧ, ಇದೀಗ ಕೊನೆಗೂ ಎಕ್ಸ್‌ಪೋಸ್‌ ಆಗಿದೆʼ ಅಂತೇಳಿದ್ದಾರೆ. ಜೊತೆಗ, ʻಕಾಂಗ್ರೆಸ್‌ ಮೊಹಬತ್‌ ಕೀ ದುಖಾನ್‌ ಅಂದ್ರೆ ಪ್ರೀತಿಯ ಅಂಗಡಿ ಅಂತೇಳ್ತಾ ಬರೀ ಸುಳ್ಳು ಹೇಳ್ತಿದೆ. ಅದು ನಕಲಿ ವಸ್ತುಗಳಿರೋ ಫ್ಯಾಕ್ಟರಿʼ ಅಂತ ಟೀಕಿಸಿದ್ದಾರೆ.

-masthmagaa.com

Contact Us for Advertisement

Leave a Reply