ಭಾರತದಲ್ಲಿ ಜಪಾನ್‌ ಪ್ರಧಾನಿ!

masthmagaa.com:

ಆಸ್ಟ್ರೇಲಿಯಾ ಪ್ರಧಾನಿ ಆಂಥೋನಿ ಅಲ್ಬನೀಸ್ ಭೇಟಿ ಬಳಿಕ ಇದೀಗ ಜಪಾನ್ ಪ್ರಧಾನಿ ಫ್ಯುಮಿಯೋ ಕಿಶಿದಾ ಭಾರತಕ್ಕೆ ಭೇಟಿ ನೀಡಿದ್ದಾರೆ. ಕಿಶಿದಾ ಅವ್ರನ್ನ ದಿಲ್ಲಿ ವಿಮಾನ ನಿಲ್ದಾಣದಲ್ಲಿ ಕೇಂದ್ರ ಸಚಿವ ರಾಜೀವ್‌ ಚಂದ್ರಶೇಖರ್‌ ಸ್ವಾಗತಿಸಿದ್ದಾರೆ. ಬಳಿಕ ಪ್ರಧಾನಿ ಮೋದಿಯನ್ನ ಮೀಟ್‌ ಮಾಡಿದ್ದಾರೆ. ಎರಡು ದಿನಗಳ ಕಾಲ ಭಾರತದಲ್ಲಿರುವ ಕಿಶಿದಾ, ಜಪಾನ್-ಇಂಡಿಯಾ ಪೆಸಿಫಿಕ್‌ ಸ್ಟ್ರಾಟಜಿ ಬಗ್ಗೆ ಮಾತನಾಡಲಿದ್ದಾರೆ. ಇದೇ ವೇಳೆ ಇಂಡೋ-ಪೆಸಿಫಿಕ್‌ ಪ್ರದೇಶದಲ್ಲಿ ಶಾಂತಿ ಕಾಪಾಡಲು ಪ್ಲ್ಯಾನ್‌ ಒಂದನ್ನ ರಿವೀಲ್‌ ಮಾಡಲಿದ್ದಾರೆ. ಈ ಪ್ಲ್ಯಾನ್‌ನಲ್ಲಿ ಇಂಡೋ-ಪೆಸಿಫಿಕ್‌ ಪ್ರದೇಶದ ಬಗ್ಗೆ ಜಾಪನ್‌ನ ನೀತಿ ಹಾಗೂ ಭಾರತದ ಪ್ರಾಮುಖ್ಯತೆಯ ಬಗ್ಗೆ ಕಿಶಿದಾ ವಿವರಗಳನ್ನ ನೀಡಲಿದ್ದಾರೆ ಅಂತ ನಿರೀಕ್ಷಿಸಲಾಗಿದೆ. ಜೊತೆಗೆ ಜಪಾನ್‌ ಹಾಗೂ ಭಾರತದ ದ್ವಿಪಕ್ಷೀಯ ಸಹಕಾರ ಸೇರಿದಂತೆ ಹಲವು ವಿಷಯಗಳ ಕುರಿತು ಚರ್ಚೆ ನಡೆಸಲಿದ್ದಾರೆ. ಉಭಯ ದೇಶಗಳು 2006ರಿಂದಲೂ ಪ್ರತಿ ವರ್ಷ ಶೃಂಗಸಭೆ ನಡೆಸುತ್ತಿವೆ. ಕಳೆದ ವರ್ಷ ಮಾರ್ಚ್‌ನಲ್ಲಿ ದಿಲ್ಲಿಯಲ್ಲೇ ಭಾರತ-ಜಪಾನ್‌ ಶೃಂಗಸಭೆ ನಡೆದಿತ್ತು. ಅಂದ್ಹಾಗೆ 15 ವರ್ಷಗಳ ಹಿಂದೆ ದಿಲ್ಲಿಗೆ ಭೇಟಿ ನೀಡಿದ್ದ ಜಪಾನ್ ಪ್ರಧಾನಿ ಶಿಂಜೋ ಅಬೆ ಮೊದಲ ಬಾರಿಗೆ ಇಂಡೋ-ಫೆಸಿಪಿಕ್ ಸಹಕಾರ ಕುರಿತು ಮಾತನಾಡಿದ್ದರು.

-masthmagaa.com

Contact Us for Advertisement

Leave a Reply