ಕೋವಿನ್‌ ಸರ್ಟಿಫಿಕೇಟ್‌ನಿಂದ ಮಾಯವಾದ ಮೋದಿ ಫೋಟೋ!

masthmagaa.com:

ಕೋವಿಡ್‌ ಲಿಸಿಕೆ ಕೋವಿಶೀಲ್ಡ್‌ನ ಸೈಡ್‌ ಇಫೆಕ್ಟ್ಸ್‌ ಬಗ್ಗೆ ಒಂದೊಂದೇ ಆರೋಪಗಳು ಬರ್ತಿರೋ ನಡುವೆಯೇ ಕೋವಿನ್‌ ಸರ್ಟಿಫಿಕೇಟ್‌ನಿಂದ ಪ್ರಧಾನಿ ನರೇಂದ್ರ ಮೋದಿಯವ್ರ ಫೋಟೋ ರಿಮೂವ್‌ ಮಾಡಲಾಗಿದೆ. ಕೋವಿಡ್‌-19 ಲಸಿಕೆ ಪಡೆದವ್ರಿಗೆ ನೀಡೋ CoWIN ಸರ್ಟಿಫಿಕೇಟ್‌ನ್ನ ಕೇಂದ್ರ ಆರೋಗ್ಯ ಇಲಾಖೆ ಅಪ್‌ಡೇಟ್‌ ಮಾಡಿದ್ದು…ಮೋದಿಯವ್ರ ಫೋಟೋ ತೆಗೆದುಹಾಕಿದೆ. ಈ ಅಪ್‌ಡೇಟೆಡ್‌ ಸರ್ಟಿಫಿಕೇಟ್‌ನ್ನ ಚೆಕ್‌ ಮಾಡಿ ಬಹಳಷ್ಟು ಮಂದಿ ಸೋಶಿಯಲ್‌ ಮೀಡಿಯಾದಲ್ಲಿ ಪ್ರತಿಕ್ರಿಯೆ ನೀಡಿದ್ದಾರೆ. ಆದ್ರೆ ಈ ಅಪ್ಡೇಷನ್‌ಗೆ ಕಾರಣ ಕೊಟ್ಟಿರೋ ಕೇಂದ್ರ ಆರೋಗ್ಯ ಸಚವಾಲಯ, ʻಲೋಕಸಭಾ ಚುನಾಚವಣೆಯಿಂದಾಗಿ ಸದ್ಯ ದೇಶದಲ್ಲಿ ಮಾದರಿ ನೀತಿ ಸಂಹಿತೆ ಜಾರಿ ಇರೋದ್ರಿಂದ ಮೋದಿಯವ್ರ ಫೋಟೋವನ್ನ ತೆಗೆದ್ವಿʼ ಅಂತೇಳಿದೆ.

ಇನ್ನೊಂದ್ಕಡೆ ಕೋವಿಶೀಲ್ಡ್‌ ಲಸಿಕೆ ಪಡೆದ ಬಳಿಕ ಮೃತಪಟ್ಟ ಯುವತಿಯೋರ್ವಳ ಪೋಷಕರು ಇದೀಗ ಸೀರಮ್‌ ಇನ್ಸ್ಟಿಟ್ಯುಟ್‌ ಆಫ್‌ ಇಂಡಿಯಾ (SII) ಕಂಪನಿ ವಿರುದ್ದ ಕೇಸ್‌ ಹಾಕೋ ಬಗ್ಗೆ ಬಹಳ ಡೀಪ್‌ ಆಗಿ ಯೋಚಿಸ್ತಿದ್ದಾರೆ ಅಂಗ ಗೊತ್ತಾಗಿದೆ. ಬ್ರಿಟನ್‌ನ AstraZeneca ಕಂಪನಿಯಲ್ಲಿ ಅಭಿವೃದ್ದಿಪಡಿಸಿರುವಂತಹ ಕೋವಿಶೀಲ್ಡ್‌ನ್ನ ಈ ಭಾರತದ ಈ SIIನಲ್ಲಿ ತಯಾರಿಸಲಾಗ್ತಿತ್ತು. ಅಂದ್ಹಾಗೆ ಈ ಪೋಷಕರು ತಮ್ಮ ಮಗಳನ್ನ ಕೋವಿಶೀಲ್ಡ್‌ ಲಸಿಕೆ ತಗೊಂಡ ನಂತ್ರ 2021ರ ಜುಲೈನಲ್ಲಿ ಕಳೆದುಕೊಂಡಿದ್ರು. ಅಂದು ಕೇಂದ್ರ ಸರ್ಕಾರ ರಚಿಸಿರೋ ರಾಷ್ಟ್ರೀಯ ಸಮಿತಿ ಮಾತ್ರ, ಯುವತಿಯ ಸಾವಿಗೂ… ಲಸಿಕೆಗೂ ಸಂಬಂಧವಿದೆ ಅನ್ನೋಕೆ ಯಾವ್ದೇ ರೀತಿ ಎವಿಡೆನ್ಸ್‌ ಇಲ್ಲ ಅಂತೇಳಿತ್ತು. ಆದ್ರೆ ಇದೀಗ AstraZeneca, ʻಹೌದು ಕೋವಿಡ್‌ ಲಸಿಕೆಯಲ್ಲಿ ಸೈಡ್‌ ಇಫೆಕ್ಟ್ಸ್‌ ಇದೆʼ ಅಂತ ರಿವೀಲ್‌ ಮಾಡಿದ ನಂತ್ರ… ಮೃತ ಯುವತಿಯ ಪೋಷಕರು SII ವಿರುದ್ಧ ಕೇಸ್‌ ದಾಖಲಿಸಲು ಚಿಂತಿಸ್ತಿದ್ಧಾರೆ.

-masthmagaa.com

Contact Us for Advertisement

Leave a Reply