ಬಾಡಿಗೆ ಅಧಿಕಾರಿಗಳನ್ನ ನೇಮಿಸೋಕೆ ತೀರ್ಮಾನಿಸಿದ ಪಾಕ್‌!

masthmagaa.com:

ದುಡ್ಡಿಲ್ಲದೇ ಭಿಕ್ಷೆ ಬೇಡ್ತಿರೋ ಪಾಕ್‌ನಲ್ಲೀಗ ಟ್ಯಾಲೆಂಟ್‌ಗೂ ಬರ ಬಂದಿದೆ. ತನ್ನ ಅಧಿಕಾರಿಗಳು ಕೆಲಸಕ್ಕೆ ಬಾರದವ್ರು ಅಂತ ತೀರ್ಮಾನಿಸಿರೋ ಪಾಕ್‌ ಈಗ ವಿದೇಶಗಳಿಂದ ಬಾಡಿಗೆ ಅಧಿಕಾರಿಗಳನ್ನ ನೇಮಿಸಿಕೊಳ್ಳೋಕೆ ತೀರ್ಮಾನಿಸಿದೆ. ಹೌದು ಅರಬ್‌ ಮತ್ತಿತರೆ ದೇಶಗಳಿಂದ ವಿದೇಶಿ ಹೂಡಿಕೆಯನ್ನ ಸೆಳೆಯೋಕೆ ಪಾಕ್‌ ಸರ್ಕಾರ ಕಳೆದ ವರ್ಷ Special Investment Facilitation Council (SIFC) ಅನ್ನೋ ಒಂದು ಹೊಸ ಬಾಡಿಯನ್ನ ರಚಿಸಿತ್ತು. ಇದ್ರಲ್ಲಿ ಸಿವಿಲ್‌-ಮಿಲಿಟರಿ ಎರಡರ ಪ್ರತಿನಿಧಿಗಳು ಇರ್ತಾರೆ. ಆದ್ರೆ ಇಷ್ಟು ದಿನಗಳ ಕಾಲ ಪಾಕ್‌ ಅಧಿಕಾರಿಗಳು ಫಾರಿನ್‌ ಇನ್ವೆಸ್ಟ್‌ಮೆಂಟ್‌ಗೆ ಸರಿಯಾಗಿ ಪ್ಲಾನ್‌ ಮಾಡದೇ ಹಲವಾರು ಪ್ರಾಜೆಕ್ಟ್‌ ನೆನೆಗುದಿಗೆ ಬಿದ್ದಿವೆ. ಹೀಗಾಗಿ ಈ SIFCನ ಬಲಪಡಿಸಲು ವಿದೇಶಿ ಅಧಿಕಾರಿಗಳನ್ನ ನೇಮಿಸಿಕೊಳ್ಳೋಕೆ ಮುಂದಾಗಿದೆ. ಅದಕ್ಕಾಗಿ ಪಾಕ್‌ ಕ್ಯಾಬಿನೆಟ್‌ ವಿದೇಶಿ ಎಕ್ಸ್‌ಪರ್ಟ್‌ಗಳನ್ನ ಹೈರ್‌ ಮಾಡಿಕೊಳ್ಳಲು ನೇಮಕಾತಿ ನಿಯಮಗಳಲ್ಲಿ ವಿನಾಯಿತಿ ನೀಡಿದೆ. ಪಾಕ್‌ ಬ್ಯೂರೋಕ್ರಾಟ್ಸ್‌ಗೆ ಬದಲಾಗಿ ಐದು ವರ್ಷಗಳ ಕಾಲ ಫಾರಿನ್‌ ಕನ್ಸಲ್ಟೆನ್ಸಿಗಳು ಕೆಲಸ ಮಾಡಲಿವೆ. ಇತ್ತೀಚೆಗೆ ಸೌದಿ ಪಾಕ್‌ನಲ್ಲಿ 5 ಬಿಲಿಯನ್‌ ಡಾಲರ್‌ ಅಂದ್ರೆ 41.5 ಸಾವಿರ ಕೋಟಿ ಇನ್ವೆಸ್ಟ್‌ ಮಾಡ್ತೀನಿ ಅಂದಿತ್ತು. ಅದ್ರ ಬೆನ್ನಲ್ಲೇ ಈ ಬೆಳವಣಿಗೆ ಆಗಿದೆ… ಈ ಮೂಲಕ ಪಾಕ್‌ ಆರ್ಥಿಕ ದಿವಾಳಿತನ ಅಷ್ಟೇ ಅಲ್ಲದೇ ತಮ್ಮಲ್ಲಿ ಬೌದ್ಧಿಕ ದಿವಾಳಿತನ ಕೂಡ ಆಗಿದೆ ಅಂತ ಜಗಜ್ಜಾಹೀರು ಮಾಡಿದೆ…

-masthmagaa.com

Contact Us for Advertisement

Leave a Reply