ಚೀತಾಗಳ ಮೇಲೆ ಬೇಟೆಗಾರರ ಕಣ್ಣು! 4 ಜನ ಅರೆಸ್ಟ್‌!

masthmagaa.com:

ಒಂದು ತಿಂಗಳ ಅವಧಿಯಲ್ಲಿ ನಮೀಬಿಯಾ ಹಾಗೂ ದಕ್ಷಿಣ ಆಫ್ರಿಕಾದಿಂದ ತಂದಿದ್ದ 2 ಚೀತಾಗಳು ಮೃತಪಟ್ಟಿದ್ದವು. ಇದೀಗ ಚೀತಾಗಳ ಮೇಲೆ ಬೇಟೆಗಾರರ ಕಣ್ಣು ಬಿದ್ದಿರೋದು ತಿಳಿದು ಬಂದಿದೆ. ಮಧ್ಯ ಪ್ರದೇಶದ ಕುನೋ ನ್ಯಾಷನಲ್‌ ಪಾರ್ಕ್‌ನಲ್ಲಿ ವ್ಯಕ್ತಿಯೊಬ್ಬನನ್ನ ಬಂಧಿಸಲಾಗಿದೆ ಅಂತ ಅಧಿಕಾರಿಗಳು ತಿಳಿಸಿದ್ದಾರೆ. ಅಲ್ದೇ ಈ ವ್ಯಕ್ತಿಯಿಂದ ಬಂದೂಕನ್ನ ವಶಪಡಿಸಿಕೊಳ್ಳಲಾಗಿದ್ದು, ಚೀತಾಗಳನ್ನು ಬೇಟೆಯಾಡಲು ಪ್ರಯತ್ನಿಸಿದ್ದಾನೆ ಅಂತ ಅಧಿಕಾರಿಗಳು ಆರೋಪಿಸಿದ್ದಾರೆ. ಈತನನ್ನ ಆಲಂ ಮೊಂಗಿಯಾ ಅಂತ ಗುರುತಿಸಲಾಗಿದ್ದು, ಈತ ಬೇಟೆಗಾರಿಕೆಯ ಇತಿಹಾಸವನ್ನ ಹೊಂದಿದ್ದಾನೆ ಅಂತ ತಿಳಿದು ಬಂದಿದೆ. ಇದರೊಂದಿಗೆ ಚೀತಾಗಳನ್ನ ಕುನೋ ಪಾರ್ಕ್‌ನಲ್ಲಿ ಬಿಟ್ಟಾಗಿನಿಂದ ಅರೆಸ್ಟ್‌ ಮಾಡಲಾಗಿರುವ 4ನೇ ಬೇಟೆಗಾರನಾಗಿದ್ದಾನೆ ಅಂತ ಡಿವಿಸನಲ್‌ ಫಾರೆಸ್ಟ್‌ ಆಫೀಸರ್‌ ಪಿಕೆ ವರ್ಮಾ ಹೇಳಿದ್ದಾರೆ.

-masthmagaa.com

Contact Us for Advertisement

Leave a Reply