ಅಮೆರಿಕ ಯೂನಿವರ್ಸಿಟಿಗಳಲ್ಲಿ ಗಲಾಟೆ! ಆ್ಯಕ್ಷನ್‌ಗೆ ಇಳಿದ ಪೊಲೀಸರು!

masthmagaa.com:

ಅಮೆರಿಕದ ನಾನಾ ಪ್ರತಿಷ್ಠಿತ ಯುನಿವರ್ಸಿಟಿಗಳಲ್ಲಿ ಪ್ಯಾಲೆಸ್ತೀನ್‌ ಪರ ಪ್ರತಿಭಟನೆಗಳು ಜೋರಾಗ್ತಿದ್ದು, ನೂರಾರು ಮಂದಿ ಅರೆಸ್ಟ್‌ ಆಗಿದ್ದಾರೆ. ಯುನಿವರ್ಸಿಟಿಗಳಲ್ಲಿ ವಿದ್ಯೆ ಕಳೆಗುಂದಿ, ಸಂಘರ್ಷದ ಕಿಡಿ ಹೊತ್ಕೊಂಡಿದೆ. ಅದ್ರಲ್ಲೂ ಕೊಲಂಬಿಯಾ ಯುನಿವರ್ಸಿಟಿ ಸಂಘರ್ಷದ ಕೇಂದ್ರಬಿಂದು ಆಗಿದೆ. ಸಾವಿರಾರು ಪ್ಯಾಲೆಸ್ತೇನಿ ಪರ ಪ್ರತಿಭಟನಾಕಾರರು ಯೂನಿವರ್ಸಿಟಿಯಲ್ಲಿ ಬೀಡುಬಿಟ್ಟಿದ್ದು ಒಂದೊಂದೇ ಕಟ್ಟಡಗಳನ್ನ ವಶಕ್ಕೆ ತಗೊತಿದ್ದಾರೆ. ಇದ್ರಿಂದ ಯೂನಿವರ್ಸಿಟಿ ಪೋಲಿಸ್‌ ಮೊರೆ ಹೋಗಿದೆ. ಹೀಗಾಗಿ ಮಧ್ಯರಾತ್ರಿ NYPD ಪೋಲಿಸರು ಏಣಿಗಳ ಮೂಲಕ ಕಟ್ಟಡಗಳನ್ನ ಹತ್ತಿ, ಕಿಟಕಿಗಳನ್ನ ಮುರಿದು ಯೂನಿರ್ವಟಿ ಒಳಗೆ ನುಗ್ಗಿದ್ದಾರೆ. ಬಳಿಕ ಪ್ರೊಟೆಸ್ಟ್‌ ಮಾಡ್ತಿದ್ದ ಹಲವಾರು ಪ್ರತಿಭಟನಾಕಾರರನ್ನ ಅರೆಸ್ಟ್‌ ಮಾಡಿದ್ದಾರೆ.

ಇನ್ನು ಅಮೆರಿಕದ ಯುನಿವರ್ಸಿಟಿಗಳಲ್ಲಿ ಈ ಕಿಡಿ ಹಚ್ಚಿದ್ದು ಅಮೆರಿಕಕ್ಕೆ ಬಹಳ ಕ್ಲೋಸ್‌ ಆಗಿರೋ ಕತಾರ್‌ ಅನ್ನೋ ಆರೋಪ ಕೇಳಿಬಂದಿರೋದು ಅಚ್ಚರಿ ಉಂಟುಮಾಡಿದೆ. ಅಮೆರಿಕ ಜೊತೆ ಬೆಸ್ಟ್‌ ಫ್ರೆಂಡ್‌ ಆಗಿರೋ ಕತಾರ್‌ ಇದೀಗ ಅಮೆರಿಕದ ಬೆನ್ನಹಿಂದೆ ಕತ್ತಿಮಸೀತಿದೆ. ಅಮೆರಿಕದ ಯುವಜನರನ್ನ ಇಸ್ರೇಲ್‌ ವಿರುದ್ದ ಎತ್ತಿಕಟ್ಟಿ, ಹಮಾಸ್‌ಗೆ ಬೆಂಬಲ ಸೂಚಿಸೋಕೆ ಕತಾರ್‌ ಬೀಜ ಬಿತ್ತಿದೆ ಅಂತ ಹೇಳಲಾಗ್ತಿದೆ. ಕತಾರ್‌ ಈ ಯುನಿವರ್ಸಿಟಿಗಳಿಗೆ ಫಂಡಿಂಗ್‌ ಮಾಡ್ತಿದೆ ಅಂತ ಈಗ ವರದಿಯಾಗಿದೆ. ಆದ್ರೆ ತನ್ನ ಮೇಲೆ ಮಾಡಲಾಗಿರೋ ಆಪಾದನೆಗೆ ಅಮೆರಿಕದಲ್ಲಿರೋ ಕತಾರ್‌ ರಾಯಭಾರಿ ಪ್ರತಿಕ್ರಿಯೆ ನೀಡಿ ನಿರಾಕರಿಸಿದ್ದಾರೆ. ʻಅಮೆರಿಕದ ಯುನಿವರ್ಸಿಟಿಗಳಲ್ಲಿ ಇತ್ತೀಚೆಗೆ ನಡೀತಿರೋ ಪ್ರತಿಭಟನೆಗೆ ಮತ್ತೆ ಕತಾರ್‌ಗೆ ಲಿಂಕ್‌ ಇದೆ ಅಂತ ರಿಪೋರ್ಟ್‌ ಮಾಡಿರೋ ಮೀಡಿಯಾಗಳು ಸರಿಯಾಗಿ ಫ್ಯಾಕ್ಟ್‌ ಚೆಕ್‌ ಮಾಡ್ಬೇಕು. ಅಮೆರಿಕದ ಯುನಿವರ್ಸಿಟಿಗಳಿಗೆ ಕತಾರ್‌ ದೊಡ್ಡ ಡೋನರ್‌ ಅಲ್ಲ. ಅಮೆರಿಕದ ಕೇವಲ ಆರು ಯುನಿವರ್ಸಿಟಿಗಳ ಖರ್ಚನ್ನ ಮಾತ್ರ ಕತಾರ್‌ ಭರಿಸುತ್ತೆ. ಅಲ್ಲಿನ ಅಧ್ಯಾಪಕರ ನಿರ್ವಹಣೆ ಮತ್ತು ಕತಾರ್‌ನಲಿರೋ ಅಮೆರಿಕದ ಕ್ಯಾಂಪಸ್‌ ನಿರ್ವಹಣೆ, ಕತಾರ್‌ ವಿದ್ಯಾರ್ಥಿಗಳಿಗೆ ವಿದ್ಯಾಭ್ಯಾಸ ಒದಗಿಸೋಕೆ ಫಂಡಿಂಗ್‌ ಮಾಡಲಾಗುತ್ತೆ ಅಷ್ಟೇ. ಇದು ದಾನವಲ್ಲ. ನಮಗೂ ಮತ್ತು ಅಮೆರಿಕದಲ್ಲಿರೋ ಯುನಿವರ್ಸಿಟಿಗಳಲ್ಲಿ ನಡೀತಿರೋ ಗಲಭೆಗೂ ಯಾವ್ದೇ ನಂಟಿಲ್ಲʼ ಅಂದಿದ್ದಾರೆ. ಅಂದ್ಹಾಗೆ ಅಮೆರಿಕದ ಯುನಿವರ್ಸಿಟಿಗಳಿಗೆ ಫಂಡಿಂಗ್‌ ಮಾಡ್ತಿದೆ ಅನ್ನೋ ಆರೋಪ ಇದೇನು ಮೊದಲಲ್ಲ. ಈ ಹಿಂದೆ ಸಾಕಷ್ಟು ಬಾರಿ ವರದಿಯಾಗಿತ್ತು. ಅಮೆರಿಕದ ಯುನಿವರ್ಸಿಟಿಗಳಿಗೆ ಕತಾರ್‌ ಫಂಡಿಂಗ್‌ ಮಾಡ್ತಿದೆ ಅಂತ ಒಮ್ಮೆ ಸೌದಿ ಅರೇಬಿಯಾದಲ್ಲಿ ರಿಪೋರ್ಟ್‌ ಮಾಡಲಾಗಿತ್ತು. ಇನ್ನು ಇಸ್ಲಾಮಿಕ್‌ ಸಿದ್ದಾಂತಗಳನ್ನ ಪ್ರಚಾರ ಮಾಡೋಕೆ ಕತಾರ್‌ ಅಮೆರಿಕದ ಯುನಿವರ್ಸಿಟಿಗಳಿಗೆ ಫಂಡಿಂಗ್‌ ಮಾಡ್ತಿದೆ ಅಂತ 2012ರಲ್ಲಿ ವರದಿಯಾಗಿತ್ತು. ನಂತ್ರ 2020ರ ಜುಲೈನಲ್ಲಿ ಯುಎಇ ಮೂಲಕ ರಿಸರ್ಚರ್‌ ಒಬ್ರು ಕತಾರ್‌ ಅಮೆರಿಕದ ಯುನಿವರ್ಸಿಟಿಗಳಿಗೆ ಫಂಡಿಂಗ್‌ ಮಾಡಿ ತನ್ನ ಪ್ರಭಾವ ಬೀರ್ತಿದೆ ಅಂತ ಆರ್ಟಿಕಲ್‌ ಬರೆದಿದ್ರು. ಇನ್ನು ಈ ಕತಾರ್‌ ಭಯೋತ್ಪಾದನೆಗೂ ಬೆಂಬಲ ನೀಡ್ತಿದೆ ಅನ್ನೋ ಆರೋಪಗಳನ್ನ ಕೆಲ ದೇಶಗಳು ಈ ಹಿಂದೆ ಸಾಕಷ್ಟು ಭಾರಿ ಮಾಡಿದ್ವು. ಅದಕ್ಕಾಗಿ ಈ ಹಿಂದೆ ಸೌದಿ ಅರೇಬಿಯಾ, ಯುಎಇ, ಬಹರೇನ್‌ ಮತ್ತು ಈಜಿಪ್ಟ್‌ ಕತಾರ್‌ ವಿರುದ್ಧ ಬಾಯ್‌ಕಾಟ್‌ ಕರೆ ಕೂಡ ನೀಡಿದ್ವು.

-masthmagaa.com

Contact Us for Advertisement

Leave a Reply