ಸೋಮಾಲಿಯಾದಲ್ಲಿ ಭೀಕರ ಸ್ಫೋಟಕ್ಕೆ 27 ಮಂದಿ ಬಲಿ!

masthmagaa.com:

ಸೋಮಾಲಿಯಾದ ಲೋವರ್ ಶಾಬೆಲ್ ಪ್ರದೇಶದಲ್ಲಿ ಭೀಕರ ಸ್ಫೋಟ ಸಂಭವಿಸಿದ್ದು, ಕನಿಷ್ಠ 27 ಮಂದಿ ಸಾವನ್ನಪ್ಪಿದ್ದಾರೆ. ಘಟನೆಯಲ್ಲಿ 22 ಮಕ್ಕಳು ಸಾವನ್ನಪ್ಪಿದ್ದು, ಕನಿಷ್ಠ 53 ಜನ ಗಾಯಗೊಂಡಿದ್ದಾರೆ ಅಂತ ಅಧಿಕಾರಿಗಳು ತಿಳಿಸಿದ್ದಾರೆ. ಇನ್ನೊಂದ್‌ ಕಡೆ ಸೋಮಾಲಿಯಾದ ರಾಜಧಾನಿ ಮೊಗಾದಿಶುವಿನಲ್ಲಿ ಹೋಟೆಲ್‌ ಒಂದ್ರ ಮೇಲೆ ಉಗ್ರರು ದಾಳಿ ನಡೆಸಿದ್ದು, ಕನಿಷ್ಠ 9 ಜನ ಮೃತಪಟ್ಟಿದ್ದಾರೆ. ಈ ದಾಳಿಯಲ್ಲಿ ನಡೆದ ಭದ್ರತಾ ಪಡೆಗಳು ಹಾಗೂ ಉಗ್ರರ ನಡುವಿನ ಗುಂಡಿನ ಚಕಮಕಿಯಲ್ಲಿ ಮೂವರು ಸೈನಿಕರು ಸೇರಿದಂತೆ 9 ಜನ ಸಾವನ್ನಪ್ಪಿದ್ದಾರೆ. ಇದೇ ವೇಳೆ 10 ಜನ ಗಾಯಗೊಂಡಿದ್ದು, ಆಸ್ಪತ್ರೆಗೆ ಸೇರಿಸಲಾಗಿದೆ ಅಂತ ಪೊಲೀಸರು ತಿಳಿಸಿದ್ದಾರೆ. ಅಂದ್ಹಾಗೆ ಈ ದಾಳಿ ಹೊಣೆಯನ್ನ ಅಲ್ಲಿನ ಅಲ್‌ ಶಬಾಬ್‌ ಉಗ್ರ ಸಂಘಟನೆ ಹೊತ್ತುಕೊಂಡಿದೆ.

-masthmagaa.com

Contact Us for Advertisement

Leave a Reply