ಬಿಷ್ಣೊಯಿ ಬಿಡುಗಡೆಗೆ ಆಗ್ರಹ! ಇಲ್ಲದಿದ್ರೆ PM ಮೋದಿ ಹತ್ಯೆ ಮಾಡೋದಾಗಿ ಬೆದರಿಕೆ!

masthmagaa.com:

ಪ್ರಧಾನಿ ನರೇಂದ್ರ ಮೋದಿ ಮತ್ತು ಅಹಮದಾಬಾದ್‌ನಲ್ಲಿರುವ ನರೇಂದ್ರ ಮೋದಿ ಸ್ಟೇಡಿಯಂನ್ನ ಸ್ಫೋಟಿಸೋದಾಗಿ ಬೆದರಿಕೆ ಇಮೇಲ್‌ ಬಂದಿದೆ ಅಂತ ಮುಂಬೈ ಪೊಲೀಸರು ತಿಳಿಸಿದ್ದಾರೆ. ಭಾರತ ಸರ್ಕಾರ 500 ಕೋಟಿ ರೂಪಾಯಿ ನೀಡಬೇಕು ಮತ್ತು ಕುಖ್ಯಾತ ಗ್ಯಾಂಗ್‌ಸ್ಟರ್ ಲಾರೆನ್ಸ್ ಬಿಷ್ಣೋಯಿಯನ್ನು ಬಿಡುಗಡೆ ಮಾಡಬೇಕು. ಇಲ್ಲದಿದ್ರೆ ಸ್ಫೋಟಗೊಳಿಸೋದಾಗಿ ಇಮೇಲ್‌ನಲ್ಲಿ ಬೆದರಿಕೆ ಹಾಕಲಾಗಿದೆ. ಜೊತೆಗೆ ದಾಳಿ ನಡೆಸಲು ಈಗಾಗಲೇ ದಾಳಿಕೋರರನ್ನ ನಿಯೋಜಿಸಲಾಗಿದೆ ಅಂತ ಕೂಡ ತಿಳಿಸಲಾಗಿದೆ. ಈ ಬೆದರಿಕೆಯ ಕಾರಣ ಎಲ್ಲ ಸ್ಟೇಡಿಯಂಗಳಲ್ಲೂ ಭದ್ರತೆ ಹೆಚ್ಚಿಸುವಂತೆ ಅಲರ್ಟ್‌ ನೀಡಲಾಗಿದೆ.

-masthmagaa.com

Contact Us for Advertisement

Leave a Reply