ವಿಶ್ವಕಪ್‌ ಪಂದ್ಯಗಳ ಟಿಕೆಟ್‌ನ್ನ ಬ್ಲ್ಯಾಕ್‌ನಲ್ಲಿ ಮಾರಿದ BCCI?

masthmagaa.com:

ನವೆಂಬರ್‌ 5 ರಂದು ಕೊಲ್ಕತ್ತಾದ ಈಡನ್‌ ಗಾರ್ಡನ್‌ ಸ್ಟೇಡಿಯಂನಲ್ಲಿ ನಡೆಯಲಿರುವ ಭಾರತ-ಸೌತ್‌ ಆಫ್ರಿಕ ಪಂದ್ಯದ ಟಿಕೆಟ್‌ಗಳನ್ನ ಅಕ್ರಮವಾಗಿ ಮಾರಾಟ ಮಾಡಲಾಗ್ತಿದೆ ಅಂತ ವ್ಯಕ್ತಿಯೊಬ್ಬರು ದೂರು ನೀಡಿದ್ದಾರೆ. ʻಕ್ರಿಕೆಟ್‌ ಅಸೋಸಿಯೇಶನ್‌ ಆಫ್ ಬೆಂಗಾಲ್‌(CAB), BCCI ಗಳು, ಆನ್‌ಲೈನ್‌ ಟಿಕೆಟ್‌ ಬುಕಿಂಗ್‌ ಪ್ಲಾಟ್‌ಫಾರ್ಮ್- ʻಬುಕ್‌ ಮೈ ಷೋʼ ಜೊತೆಗೂಡಿ‌ ಒಂದಷ್ಟು ಟಿಕೆಟ್‌ಗಳನ್ನ ರಿಸರ್ವ್‌ ಮಾಡಿವೆ. ಹಾಗಾಗಿ ಸಾಮಾನ್ಯ ಜನರಿಗೆ ಟಿಕೆಟ್‌ ಸಿಗುತ್ತಿಲ್ಲ. ಹೆಚ್ಚಿನ ಲಾಭಕ್ಕಾಗಿ ಈ ಟಿಕೆಟ್‌ಗಳನ್ನ ಮಾರಾಟ ಮಾಡಲಾಗ್ತಿದೆ ಅಂತ ಅಭಿಮಾನಿಯೊಬ್ರು ದೂರು ಕೊಟ್ಟಿದ್ದಾರೆ. ಕೊಲ್ಕತ್ತಾದ ಮೈದಾನ್‌ ಠಾಣೆ ಪೊಲೀಸರು ಈ ಬಗ್ಗೆ ತನಿಖೆ ನಡೆಸುತ್ತಿದ್ದು, ಬುಕ್‌ ಮೈ ಷೋ ಅಧಿಕಾರಿಗಳಿಗೆ ಠಾಣೆಗೆ ಹಾಜರಾಗುವಂತೆ ನೋಟಿಸ್‌ ನೀಡಲಾಗಿದೆ ಅಂತ ತಿಳಿದು ಬಂದಿದೆ.

-masthmagaa.com

Contact Us for Advertisement

Leave a Reply