ಚುನಾವಣಾ ಪಕ್ಷಗಳ ಆನ್‌ಲೈನ್‌ ಜಾಹೀರಾತು ಖರ್ಚು ರಿವೀಲ್‌!

masthmagaa.com:

ಮೊದಲ ಹಂತದ ಲೋಕಸಭಾ ಚುನಾವಣೆ ಶುರುವಾಗಿದ್ದು ಇದೀಗ ಯಾವ್ಯಾವ ರಾಜಕೀಯ ಪಕ್ಷಗಳು ಆನ್‌ಲೈನ್‌ ಜಾಹೀರಾತು ನೀಡೋಕೆ ಅದೆಷ್ಟು ಖರ್ಚು ಮಾಡಿದ್ವು ಅಂತ ರಿವೀಲ್‌ ಆಗಿದೆ. ಎಲ್ಲಾ ಪಕ್ಷಗಳು ಸೇರಿ ಮೊದಲ ಹಂತದ ಲೋಕಸಭಾ ಚುನಾವಣೆಗಾಗಿ ತಮ್ಮ ಚುನಾವಣಾ ಅಜೆಂಡಾಗಳು, ಪ್ರಣಾಳಿಕೆಗಳು ಮತ್ತು ಸಾಧನೆಗಳನ್ನ ಪ್ರಮೋಟ್‌ ಮಾಡೋಕೆ ಕನಿಷ್ಠ 36.5 ಕೋಟಿ ರೂ. ಖರ್ಚು ಮಾಡಿದ್ದಾರೆ. ಹೀಗಂತ ಗೂಗಲ್‌ ಮತ್ತು ಮೆಟಾ ಪ್ಲಾಟ್‌ಫಾರ್ಮ್‌ಗಳ ರಾಜಕೀಯ ವೆಚ್ಚದ ವಿಶ್ಲೇಷಣೆಯಲ್ಲಿ ರಿವೀಲ್‌ ಆಗಿದೆ. ಈ ಪೈಕಿ ಬಿಜೆಪಿ ಅತೀ ಹೆಚ್ಚು ಖರ್ಚು ಮಾಡಿದ್ರೆ….ಕಾಂಗ್ರೆಸ್‌ ಬಿಜೆಪಿಗೆ ಪೈಪೋಟಿ ನೀಡಿ ಆಲ್ಮೋಸ್ಟ್‌ ಬಿಜೆಪಿಯ ಹತ್ರದಲ್ಲೇ ಇದೆ. ಮಾರ್ಚ್‌ 15ರಿಂಂದ ಏಪ್ರಿಲ್‌ 13ರ ನಡುವೆ ಬಿಜೆಪಿ ಒಟ್ಟು 14.7 ಕೋಟಿ ರೂಪಾಯಿ ವೆಚ್ಚ ಮಾಡಿದ್ರೆ, ಕಾಂಗ್ರೆಸ್‌ ಒಟ್ಟು 12.3 ಕೋಟಿ, ತಮಿಳುನಾಡಿನ DMK ಸರ್ಕಾರ 12.1 ಕೋಟಿ ರೂಪಾಯಿ ವೆಚ್ಚ ಮಾಡಿದೆ. ಇವುಗಳ ಬಳಿಕ ಆಂಧ್ರ ಪ್ರದೇಶದ YSR ಕಾಂಗ್ರೆಸ್‌ ಪಕ್ಷ, ಆಮೇಲೆ TMC, BJD ಮತ್ತು TDP ಪಕ್ಷಗಳು ಇವೆ.

-masthmagaa.com

Contact Us for Advertisement

Leave a Reply