WHO ನೀಡಿರೋ ಲಿಮಿಟ್‌ ಕ್ರಾಸ್‌ ಮಾಡಿದ ದೆಹಲಿಯ ಕಳಪೆ ಗಾಳಿ ಗುಣಮಟ್ಟ! ದೆಹಲಿ ಬೀದಿಗಿಳಿದ ಅಗ್ನಿಶಾಮಕ ದಳ?

masthmagaa.com:

ದೆಹಲಿಯ ಗಾಳಿ ಗುಣಮಟ್ಟ ಕ್ಷಣಕ್ಷಣಕ್ಕೂ ವಿಷಕಾರಿಯಾಗಿ ಬದಲಾಗ್ತಾ ಇದೆ. ದೆಹಲಿಯ ಮಾಲಿನ್ಯ ಮಟ್ಟ ಇದೀಗ ಎಷ್ಟರ ಮಟ್ಟಿಗೆ ಹೆಚ್ಚಾಗಿದೆ ಅಂದ್ರೆ, ವಿಶ್ವ ಆರೋಗ್ಯ ಸಂಸ್ಥೆ (WHO) ನೀಡಿರೋ ಗಾಳಿ ಗುಣಮಟ್ಟದ ಲಿಮಿಟ್‌ ಕ್ರಾಸ್‌ ಮಾಡಿದೆ. ವಿಶ್ವಸಂಸ್ಥೆ ನೀಡಿರೋ ಗಾಳಿ ಗುಣಮಟ್ಟ ಮಾರ್ಗಸೂಚಿ ವ್ಯಾಲ್ಯೂಗಿಂತ 96.2 ಪಟ್ಟು ದೆಹಲಿಯ PM2.5 Concentration level ಅಂದ್ರೆ 205 ಮೈಕ್ರೋ ಮೀಟರ್‌ಗೂ ಸಣ್ಣದಾಗಿರೊ ಕಣಗಳು ಪ್ರಮಾಣ ಜಾಸ್ತಿಯಾಗಿದೆ ಅಂತ ವರದಿಯಾಗಿದೆ. ಇದ್ರಿಂದ ಆರೋಗ್ಯದ ಮೇಲೆ ಭಾರಿ ಪರಿಣಾಮ ಬೀರೋ ಸಾಧ್ಯತೆಗಳಿವೆ. ಹೀಗಾಗಿ ನವಂಬರ್‌ 10ರ ತನಕ ಪ್ರಾಥಮಿಕ ಶಾಲೆಗಳಿಗೆ ರಜೆ ಘೋಷಿಸಲಾಗಿದೆ. ಅಂದ್ಹಾಗೆ ಇಲ್ಲಿನ ಗಾಳಿ ಗುಣಮಟ್ಟ ಇಂದು ತೀವ್ರ ಮಲಿನಗೊಂಡಿದ್ದು, `severe plus’ categoryಯನ್ನ ತಲುಪಿದೆ. ದೆಹಲಿಯ ಸುತ್ತಮುತ್ತಲಿನ ಅನೇಕ ಪ್ರದೇಶಗಳಲ್ಲಿ 500ಕ್ಕೂ ಜಾಸ್ತಿ AQI ದಾಖಲಾಗಿದೆ. ಇಂದು ಮಧ್ಯಾಹ್ನದ ಹೊತ್ತಲ್ಲಿ ದೆಹಲಿಯ ವಜೀರ್ಪುರ್‌ ನಲ್ಲಿ ಅತೀ ಹೆಚ್ಚು ಅಂದ್ರೆ 859 AQI ದಾಖಲಾಗಿದೆ. ಇನ್ನು ದೆಹಲಿಯ ಮಾಲಿನ್ಯವನ್ನ ಕಡಿಮೆ ಮಾಡೋದಕ್ಕೆ ದೆಹಲಿ ಅಗ್ನಿಶಾಮಕ ದಳದವರು ದೆಹಲಿ ಸರ್ಕಾರಕ್ಕೆ ಸಾಥ್‌ ನೀಡಿದ್ದಾರೆ. ದೆಹಲಿಯ ಅನೇಕ ಹಾಟ್‌ಸ್ಪಾಟ್‌ಗಳಲ್ಲಿ ನೀರನ್ನ ಸ್ಪ್ರೇ ಮಾಡಿ ಮಾಲಿನ್ಯವನ್ನ ತಕ್ಕಮಟ್ಟಿಗೆ ಕಂಟ್ರೋಲ್‌ ಮಾಡೋದಕ್ಕೆ ಪ್ರಯತ್ನ ಪಡ್ತಾ ಇದ್ದಾರೆ. ಒಟ್ಟು 12 ಅಗ್ನಶಾಮಕ ವಾಹನಗಳನ್ನ ಈ ಕೆಲಸಕ್ಕಾಗಿ ಬಳಸಲಾಗ್ತಾ ಇದೆ.

-amsthmagaa.com

Contact Us for Advertisement

Leave a Reply