IAF ವಾಹನಗಳ ಮೇಲೆ ದಾಳಿ ಮಾಡಿದ ಶಂಕಿತರ ರೇಖಾ ಚಿತ್ರ ರಿಲೀಸ್‌!

masthmagaa.com:

ಜಮ್ಮು-ಕಾಶ್ಮೀರದ ಪೂಂಚ್‌ನಲ್ಲಿ ವಾಯುಪಡೆಯ ಬೆಂಗಾವಲು ವಾಹನಗಳ ಮೇಲೆ ಇಬ್ಬರು ಶಂಕಿತ ಉಗ್ರರು ದಾಳಿ ನಡೆಸಿದ್ರು. ಒಬ್ರು ಮೃತಪಟ್ಟು ನಾಲ್ವರು ಗಾಯಗೊಂಡಿದ್ರು. ಈಗ ಅವರ ರೇಖಾ ಚಿತ್ರಗಳನ್ನ ಇಂಡಿಯನ್‌ ಏರ್‌ಪೋರ್ಸ್‌ ರಿಲೀಸ್‌ ಮಾಡಿದೆ. ಈ ಶಂಕಿತ ಉಗ್ರರ ಬಗ್ಗೆ ಮಾಹಿತಿ ನೀಡಿದವ್ರಿಗೆ 20 ಲಕ್ಷ ರೂಪಾಯಿ ಬಹುಮಾನ ನೀಡೊದಾಗಿ ಏರ್‌ಪೋರ್ಸ್‌ ಹೇಳಿದೆ. ಇನ್ನು ಉಗ್ರದಾಳಿಯ ಬಗ್ಗೆ ಅನೇಕ ಬೆಚ್ಚಿಬೀಳಿಸೋ ಮಾಹಿತಿಗಳೂ ಹೊರಬಿದ್ದಿವೆ. ಕೇವಲ 15 ನಿಮಿಷದಲ್ಲೇ ಉಗ್ರರು ಸೇನೆಯ ಮೇಲೆ 200 ಗುಂಡು ಹಾರಿಸಿದ್ದಾರೆ ಅಂತ ಗೊತ್ತಾಗಿದೆ. ಜೊತೆಗೆ ಇದಕ್ಕೆ ಪ್ರತಿಯಾಗಿ ಸೈನಿಕರು ಗುಂಡು ಹಾರಿಸೋಕೆ ಮುಂದಾದಾಗ ಅವರು ಹತ್ತಿರದಲ್ಲೇ ಇದ್ದ ಕಾಡಿನೊಳಗೆ ನುಗ್ಗಿದ್ರು ಅಂತಲೂ ಅಧಿಕಾರಿಗಳು ಮಾಹಿತಿ ಹಂಚಿಕೊಂಡಿದ್ದಾರೆ.

-masthmagaa.com

Contact Us for Advertisement

Leave a Reply