ಕ್ಯಾಥೋಲಿಕ್‌ ಚರ್ಚ್‌ ಎಲ್ಲರಿಗೂ ಮುಕ್ತವಾಗಿದೆ: ಪೋಪ್‌ ಫ್ರಾನ್ಸಿಸ್‌

masthmagaa.com:

ಸಲಿಂಗಿಗಳು ಸೇರಿದಂತೆ ಎಲ್ರಿಗೂ ಕ್ಯಾಥೋಲಿಕ್‌ ಚರ್ಚ್‌ ಮುಕ್ತವಾಗಿದೆ ಅಂತ ಪೋಪ್‌ ಫ್ರಾನ್ಸಿಸ್‌ ಹೇಳಿದ್ದಾರೆ. ಸಲಿಂಗ ಮದುವೆ ಅಥ್ವಾ ಸಲಿಂಗ ದಂಪತಿಗಳಿಗೆ ಕೆಲವು ಸಂಸ್ಕಾರಗಳನ್ನ ನಿರ್ಬಂಧಿಸಲಾಗಿದೆ. ಹಾಗಂತ ಅವರಿಗೆ ಚರ್ಚ್‌ ಬಾಗಿಲು ಮುಚ್ಚಿದೆ ಅನ್ನೊ ಅರ್ಥವಲ್ಲ. ಯಾಕಂದ್ರೆ ಪ್ರತಿಯೊಬ್ಬರೂ ತಮ್ಮದೇ ರೀತಿಯಲ್ಲಿ ದೇವರ ಜೊತೆಯಲ್ಲಿ ಸಂಬಂಧ ಹೊಂದಿರುತ್ತಾರೆ ಅಂತ ಫ್ರಾನ್ಸಿಸ್‌ ಹೇಳಿದ್ದಾರೆ. ಅಂದ್ಹಾಗೆ ಚರ್ಚ್‌ಗಳಲ್ಲಿ ಸಲಿಂಗ ಮದುವೆ ಅಥ್ವಾ ಸಲಿಂಗ ದಂಪತಿಗಳಿಗೆ ಆಶಿರ್ವಾದಕ್ಕೆ ಅನುಮತಿಯಿಲ್ಲ. ಆದ್ರೆ ಸಲಿಂಗ ದಂಪತಿಗಳಿಗೆ ಇತರ ನಾಗರಿಕ ಹಕ್ಕುಗಳು ನೀಡ್ಬೇಕು ಅಂತ ಫ್ರಾನ್ಸಿಸ್‌ ಪ್ರತಿಪಾದಿಸಿದ್ದಾರೆ.

-masthmagaa.com

Contact Us for Advertisement

Leave a Reply