ಬಾಂಗ್ಲಾ: 50 ವರ್ಷಗಳಲ್ಲೇ ಸುದೀರ್ಘ ಬೇಸಿಗೆ, ಸಾವಿರಾರು ಶಾಲೆಗಳು ಬಂದ್

masthmagaa.com:

ಪಕ್ಕದ ಬಾಂಗ್ಲಾದೇಶ ಕಳೆದ 50 ವರ್ಷಗಳಲ್ಲೇ ಅತಿ ದೀರ್ಘವಾದ ಹೀಟ್‌ವೇವ್‌ನ್ನ ಅನುಭವಿಸ್ತಿದೆ. ಈ ಹಿನ್ನೆಲೆ ದೇಶಾದ್ಯಂತ ಸಾವಿರಾರು ಶಾಲೆಗಳನ್ನ ಮುಚ್ಚಲಾಗಿದೆ. ಅಲ್ದೇ ಪವರ್‌ ಕಟ್‌ ಸಮಸ್ಯೆ ಉಂಟಾಗುತ್ತಿದ್ದು, ಈ ಬಿಸಿಲಿನಲ್ಲಿ ಜನರ ಜೀವನವನ್ನ ಮತ್ತಷ್ಟು ಕಷ್ಟವನ್ನಾಗಿಸಿದೆ. 1971ರಲ್ಲಿ ಸ್ವಾಂತತ್ರ್ಯ ಬಂದಾಗಿನಿಂದ ಇಷ್ಟು ಸುದೀರ್ಘ ಬೇಸಿಗೆಯನ್ನ ನಾವು ನೋಡಿಲ್ಲ ಅಂತ ಅಲಿನ ಹವಾಮಾನ ಇಲಾಖೆಯ ಹಿರಿಯ ಅಧಿಕಾರಿ ಬಜ್ಲೂರ್‌ ರಶೀದ್‌ ಹೇಳಿದ್ದಾರೆ. ಇನ್ನು ಕಲ್ಲಿದ್ದಲನ್ನ ಪೂರೈಸೋಕೆ ಆಗದೇ, ದೇಶದ ಅತಿದೊಡ್ಡ ಪವರ್‌ ಪ್ಲ್ಯಾಂಟ್‌ನ ಕಾರ್ಯಾಚರಣೆಗಳನ್ನ ನಿಲ್ಲಿಸೋಕೆ ಅಲ್ಲಿನ ಸರ್ಕಾರ ಮುಂದಾಗಿದೆ.

-masthmagaa.com

Contact Us for Advertisement

Leave a Reply