ಬೆಸ್ಕಾಂಗೆ ಭಾರಿ ದಂಡ ಕಟ್ಟಿದ HDK! ಕಟ್ಟಿದ್ದು ಎಷ್ಟು ಗೊತ್ತೆ?

masthmagaa.com:

ದೀಪಾವಳಿ ಅಲಂಕಾರಕ್ಕೆ ವಿದ್ಯುತ್‌ ಕಂಬದಿಂದ ಅಕ್ರಮ ಕನೆಕ್ಷನ್‌ ತಗೊಂಡು ಟೀಕೆಗೆ ಗುರಿಯಾಗಿದ್ದ ಮಾಜಿ ಸಿಎಂ ಎಚ್‌ಡಿ ಕುಮಾರಸ್ವಾಮಿಗೆ ಬೆಸ್ಕಾಂ ಭಾರಿ ದಂಡ ವಿಧಿಸಿದೆ. ಒಂದಲ್ಲ ಎರಡಲ್ಲ ಬರೋಬ್ಬರಿ 68 ಸಾವಿರ ರೂಪಾಯಿ ದಂಡವನ್ನ ಒಂದು ವಾರದೊಳಗೆ ಕಟ್ಟಿ ಅಂತ ಅಧಿಕಾರಿಗಳು ಹೇಳಿದ್ದಾರೆ. ಅಂದ್ಹಾಗೆ ಬೆಂಗಳೂರಿನ ಜೆಪಿ ನಗರದ HDK ನಿವಾಸದಲ್ಲಿ ಮೊನ್ನೆ ದೀಪಾವಳಿಯ ಹಬ್ಬದಂದು ದೀಪಾಲಂಕಾರಕ್ಕಾಗಿ ಅಕ್ರಮವಾಗಿ ವಿದ್ಯುತ್‌ ಕನೆಕ್ಷನ್‌ ತಗೊಂಡಿದ್ದ ವೀಡಿಯೊ ವೈರಲ್‌ ಆಗಿತ್ತು. ಬೆಸ್ಕಾಂ ಜಾಗೃತ ದಳದ ಅಧಿಕಾರಿಗಳು ಈ ಬಗ್ಗೆ FIR ಕೂಡ ದಾಖಲಿಸಿದ್ದರು. ನಂತರ ಇದು ಖಾಸಗೀ ಡೆಕೋರೇಟರ್‌ಗಳು ಮಾಡಿರೊ ಅಚಾತುರ್ಯ, ನಾನು ದಂಡ ಕಟ್ತೀನಿ ಅಂತ HDK ಹೇಳಿದ್ರು. ಇಂದು‌ ಅಧಿಕಾರಿಗಳು ವಿದ್ಯುತ್‌ ಬಳಕೆ ಲೆಕ್ಕ ಹಾಕಿ 68 ಸಾವಿರ ರೂಪಾಯಿ ದಂಡ ಕಟ್ಟಿ ಅಂತ ಕುಮಾರಸ್ವಾಮಿ ಅವರಿಗೆ ಹೇಳಿದ್ದಾರೆ.

-masthmagaa.com

Contact Us for Advertisement

Leave a Reply