ಸಿಎಂ ವಿರುದ್ದ ಕಾನೂನು ಹೋರಾಟ: ಎಚ್ಚರಿಕೆ ಕೊಟ್ಟ HDK!

masthmagaa.com:

ಸಿಎಂ ಸಿದ್ದರಾಮಯ್ಯ ವಿರುದ್ದ ಕಾನೂನು ಹೋರಾಟ ಮಾಡೋದಾಗಿ ಮಾಜಿ ಸಿಎಂ ಎಚ್‌.ಡಿ.ಕುಮಾರಸ್ವಾಮಿ ಎಚ್ಚರಿಕೆ ನೀಡಿದ್ದಾರೆ. ವಿರೋಧಿಗಳಿಗೆ ತೊಂದರೆ ಕೊಡೋದು, ದ್ವೇಷದ ರಾಜಕಾರಣ ಮಾಡೋದಷ್ಟೇ ಸರ್ಕಾರ ಕೆಲ್ಸ ಆಗಿದೆ. ಅಲ್ದೇ ಪ್ರಜ್ವಲ್‌ ಕೇಸ್‌ನ ವಿಚಾರವಾಗಿ ಸರ್ಕಾರದ ಪ್ರಾಯೋಜಕತ್ವದಲ್ಲಿ ಮೇ 30 ರಂದು ಹಾಸನದಲ್ಲಿ ಪ್ರತಿಭಟನೆ ಆಯೋಜನೆ ಮಾಡಲಾಗಿದೆ. ಅಂಗನವಾಡಿ ಕಾರ್ಯಕರ್ತರನ್ನು ಪ್ರತಿಭಟನೆಗೆ ಕರೆ ತರಲು ಅಧಿಕಾರಿಗಳಿಗೆ ರಾಜ್ಯ ಸರ್ಕಾರ ಸೂಚಿಸಿದೆ. ಪ್ರಜ್ವಲ್‌ನ ತಪ್ಪು ಸಾಬೀತಾದ್ರೆ ಆತನಿಗೆ ಶಿಕ್ಷೆ ಕೊಡಿ. ಆದರೆ ಇಲ್ಲಿ ಅಧಿಕಾರ ದುರುಪಯೋಗ ಆಗ್ತಿದೆ..ಕಾನೂನು ಹೋರಾಟ ಮಾಡ್ತೀವಿ ಅಂತ ಕುಮಾರಸ್ವಾಮಿ ಎಚ್ಚರಿಕೆ ನೀಡಿದ್ದಾರೆ. ಜೊತೆಗೆ ಪೊಲೀಸರ ರಕ್ಷಣೆಯಲ್ಲಿ ಆರೋಪಿ ಕಾರ್ತಿಕ್ ಸೇರಿ 8 ಜನ ಇದ್ದಾರೆ ಅಂತೇಳಿದಾರೆ.

-masthmagaa.com

Contact Us for Advertisement

Leave a Reply