ಕಾಶ್ಮೀರ ಫೈಲ್ಸ್‌ ಬಗ್ಗೆ ಮಾತು! ಬಹುಭಾಷ ನಟ ಪ್ರಕಾಶ್‌ ರೈ ನಗರ ನಕ್ಸಲ ಎಂದ ವಿವೇಕ್‌ ಅಗ್ನಿಹೋತ್ರಿ!

masthmagaa.com:

ಕಾಶ್ಮೀರ ಫೈಲ್ಸ್‌ ಸಿನಿಮಾಗೆ ಸಂಬಂಧಪಟ್ಟಂತೆ ಬಹುಭಾಷ ನಟ ಪ್ರಕಾಶ್‌ ರೈ ನೀಡಿದ ಹೇಳಿಕೆಗೆ ಕಾಶ್ಮೀರ ಫೈಲ್ಸ್‌ ನಿರ್ದೇಶಕ ವಿವೇಕ್‌ ಅಗ್ನಿಹೋತ್ರಿ, ಕೆಂಡವಾಗಿದ್ದು ಪ್ರಕಾಶ್‌ ರೈ ನಗರ ನಕ್ಸಲ ಅಂತ ಉಲ್ಲೇಖಿಸಿದ್ದಾರೆ. ಕಾಶ್ಮೀರ ಫೈಲ್ಸ್‌ ಒಂದು ನಾನ್ಸೆನ್ಸ್‌, ಪ್ರೊಪಗಂಡ ಸಿನಿಮಾ, ಇಂಟರ್ನ್ಯಾಷನಲ್‌ ಜ್ಯೂರಿಗಳು ಸಿನಿಮಾ ನೋಡಿ ಉಗಿದಿದ್ರು. ಅವರಿಗೆ ಆಸ್ಕರ್‌ ಅಲ್ಲ ಬಾಸ್ಕರ್‌ ಕೂಡ ಸಿಗೋದಿಲ್ಲ ಅಂತ ಪ್ರಕಾಶ್‌ ರೈ ಹೇಳಿಕೆ ನೀಡಿದ್ರು. ಇದಕ್ಕೆ ತಿರಗೇಟು ಕೊಟ್ಟಿರೋ ವಿವೇಕ್‌ ಅಗ್ನಿಹೋತ್ರಿ ಕಾಶ್ಮೀರ ಫೈಲ್ಸ್‌ ಅನ್ನೋ ಒಂದು ಸಣ್ಣ ಚಿತ್ರ ನಗರ ನಕ್ಸಲ್‌ರ ನಿದ್ರೆ ಕಿತ್ತುಕೊಂಡಿದೆ. ಚಿತ್ರ ಬಿಡುಗಡೆಯಾಗಿ ಒಂದು ವರ್ಷ ಆಗ್ತಿದ್ರೂ ಅವರಿಗೆ ನಿದ್ರೆ ಮಾಡೋಕೆ ಆಗ್ತಿಲ್ಲ. ಅಂಧಕರ್ ರಾಜ್ ಅವರೇ, ನಾನು ಭಾಸ್ಕರ್ ಆವಾರ್ಡ್‌ ಹೇಗೆ ಪಡೆಯೋಕಾಗುತ್ತೆ ಅದು ಯಾವಗಲೂ ನಿಮ್ಮದೇ ಅಂತ ಪ್ರಕಾಶ್‌ ರೈ ಹೇಳಿರೋ ವಿಡಿಯೋವನ್ನ ಟ್ವೀಟ್‌ ಮಾಡಿ ಟಾಂಟ್‌ ಕೊಟ್ಟಿದ್ದಾರೆ.

-masthmagaa.com

Contact Us for Advertisement

Leave a Reply