ಸಪ್ತಸಾಗರದಾಚೆ ಎಲ್ಲೋ ಸಿನಿಮಾ ಬಗ್ಗೆ ಪ್ರಕಾಶ್‌ ರಾಜ್‌ ಟ್ವೀಟ್‌ !

masthmagaa.com:

ಪಂಚಭಾಷಾ ನಟ ಪ್ರಕಾಶ್‌ ರಾಜ್‌ ಅವರು ಸಾಮಾನ್ಯವಾಗಿ ಸುದ್ದಿಯಲ್ಲಿರುವ ನಟ. ಸೂಕ್ಷ್ಮ ವಿಚಾರಗಳ ಬಗ್ಗೆ, ರಾಜಕೀಯದ ಬಗ್ಗೆ ಆಗಾಗ ತಮ್ಮ ಅಭಿಪ್ರಾಯವನ್ನ ತಿಳಿಸ್ತಾನೇ ಇರ್ತಾರೆ. ಕೆಲವೊಂದು ಸಲ ಜನರ ಕೆಂಗಣ್ಣಿಗೆ ಗುರಿಯಾಗಿದ್ದೂ ಇದೆ. ಆದ್ರೆ ಸಿನಿಮಾದ ಬಗ್ಗೆ ಪ್ರಕಾಶ್‌ ರಾಜ್‌ ಅವರು ಯಾವತ್ತು ನೆಗೆಟೀವ್‌ ಆಗಿ ಮಾತಾಡಿಲ್ಲ. ಸಪ್ತ ಸಾಗರದಾಚೆ ಎಲ್ಲೋ ಸಿನಿಮಾವನ್ನ ನೋಡಿದ್ದಾರೆ. ಈ ಸಿನಿಮಾ ಪ್ರಕಾಶ್‌ ರಾಜ್‌ ಅವರಿಗೆ ತುಂಬಾನೇ ಇಷ್ಟ ಆಗಿದೆ ಅಂತಾನೇ ಹೇಳಬೋದು. ಸಿನಿಮಾದ ಬಗ್ಗೆ ಪ್ರಶಂಸೆಯ ಮಾತನ್ನಾಡಿದ್ದಾರೆ, ಜೊತೆಗೆ ತಮ್ಮ ಸೋಷಿಯಲ್‌ ಮೀಡಿಯಾ ಅಕೌಂಟ್‌ನಲ್ಲಿ ಸಿನಿಮಾದ ಬಗ್ಗೆ ಟ್ವೀಟ್‌ ಮಾಡಿದ್ದಾರೆ.

“ಸಪ್ತ ಸಾಗರದಾಚೆ ಎಲ್ಲೋ. ಆಹಾ!! ಒಂದು ಸುಂದರ. ಹೃದಯಸ್ಪರ್ಶಿ ಅನುಭವ don’t miss” ಅಂತ ಬರೆದುಕೊಂಡಿದ್ದಾರೆ.

https://x.com/prakashraaj/status/1710121159558140018?s=20

ಈ ಒಂದು ಪೋಸ್ಟ್‌ಗೆ ರಕ್ಷಿತ್‌ ಶೆಟ್ಟಿ ಕೂಡ ರಿಟ್ವೀಟ್‌ ಮಾಡಿ ಥ್ಯಾಂಕ್ಯೂ ಅಂತ ಹೇಳಿದ್ದಾರೆ.

-masthmagaa.com

Contact Us for Advertisement

Leave a Reply