ಯುಕ್ರೇನ್‌ನ ಡ್ಯಾಮ್‌ನ್ನು ಸ್ಪೋಟಿಸಲು ರಷ್ಯಾ ತಯಾರಾಗಿದೆ: ಝೆಲೆನ್ಸ್ಕಿ

masthmagaa.com:

ರಷ್ಯಾ-ಯುಕ್ರೇನ್‌ ನಡುವೆ ನಡೀತಾ ಇರೋ ಯುದ್ಧ ದಿನಕ್ಕೊಂದು ಆಯಾಮವನ್ನ ಪಡೆದುಕೊಳ್ತಲೇ ಇದೆ. ಇದೀಗ ರಷ್ಯಾ `false flag’ ಆಪರೇಷನ್‌ ಅಂದ್ರೆ ಗುಪ್ತ ಸೇನಾ ಕಾರ್ಯಾಚರಣೆ ಮಾಡ್ತಿದೆ. ಯುಕ್ರೇನ್‌ನ ಅತಿ ದೊಡ್ಡ ಹೈಡ್ರೋಎಲೆಕ್ಟ್ರಿಕ್‌ ಡ್ಯಾಮ್‌ನ್ನ ಸ್ಪೋಟ ಮಾಡೋಕೆ ರೆಡಿಯಾಗ್ತಿದೆ ಅಂತ ಯುಕ್ರೇನ್‌ ಅಧ್ಯಕ್ಷ ವೊಲೊಡಿಮಿರ್‌ ಝೆಲೆನ್ಸ್ಕಿ ಎಚ್ಚರಿಕೆ ನೀಡಿದ್ದಾರೆ. ಇದ್ರಿಂದ ವಾರ್ ಸ್ಟ್ರಾಟಜಿ ದೃಷ್ಠಿಯಿಂದ ಪ್ರಮುಖ ನಗರವಾಗಿರೋ ಖೆರ್ಸಾನ್‌ ಸೇರಿದಂತೆ 80 ಪಟ್ಟಣಗಳು, ಹಳ್ಳಿಗಳು ಮತ್ತು ನಗರಗಳು ಪ್ರವಾಹಕ್ಕೀಡಾಗೋ ಸಾಧ್ಯತೆಯಿದೆ ಅಂತ ಝೆಲೆನ್ಸ್ಕಿ ಹೇಳಿದ್ದಾರೆ. ಅಂದ್ಹಾಗೆ ರಷ್ಯಾದ ಟೆರರಿಸ್ಟ್‌ಗಳು ಈಗಾಗ್ಲೇ ಡ್ಯಾಮ್‌ನ್ನ ಗುರಿಯಾಗಿಸಿಕೊಂಡಿದ್ದಾರೆ. ಈ ಬಗ್ಗೆ ನಮಗೆ ಮಾಹಿತಿ ಇದೆ ಅಂತ ಯುರೋಪಿಯನ್‌ ಲೀಡರ್ಸ್‌ ಜೊತೆಗಿನ ವಿಡಿಯೋ ಕಾನ್ಫರೆನ್ಸ್‌ನಲ್ಲಿ ಝೆಲೆನ್ಸ್ಕಿ ಹೇಳಿದ್ದಾರೆ. ಇತ್ತ ಝೆಲೆನ್ಸ್ಕಿ ಒಬ್ಬ ಸುಳ್ಳುಗಾರ ಅಂತ ರಷ್ಯಾ ಬೆಂಬಲಿತ ಖೆರ್ಸಾನ್‌ನ ಡೆಪ್ಯುಟಿ ಗವರ್ನರ್‌ ಹೇಳಿದ್ದಾರೆ.

-masthmagaa.com

Contact Us for Advertisement

Leave a Reply