ಪ್ರಧಾನ ಮಂತ್ರಿ ಆರ್ಥಿಕ ಸಲಹಾ ಮಂಡಳಿ ವರದಿಗೆ ರಾಜಕೀಯ ವಾಗ್ಯುದ್ದ!

masthmagaa.com:

ಪ್ರಧಾನ ಮಂತ್ರಿಯವರ ಆರ್ಥಿಕ ಸಲಹಾ ಮಂಡಳಿ ಭಾರತದ ಡೆಮಾಗ್ರಫಿ ಕುರಿತು ನೀಡಿರೋ ವರದಿಯಲ್ಲಿ ರಾಷ್ಟ್ರ ರಾಜಕೀಯದಲ್ಲಿ ತೀವ್ರ ಕೋಲಾಹಲಕ್ಕೆ ಕಾರಣವಾಗಿದೆ. ಆ ರಿಪೋರ್ಟ್‌ನಲ್ಲಿ1951ರಿಂದ 2015ರನಕ ಹಿಂದೂಗಳ ಪ್ರಮಾಣ 7.8ಪರ್ಸೆಂಟ್‌ ಕಮ್ಮಿಯಾಗಿದೆ ಅಂತೇಳಲಾಗಿತ್ತು. ಈಗ ರಾಜಕೀಯ ವಾಗ್ಯುದ್ದಕ್ಕೆ ಕಾರಣವಾಗಿದೆ. ಕೇಂದ್ರ ಎಲೆಕ್ಟ್ರಾನಿಕ್ಸ್‌ ಮತ್ತು ಮಾಹಿತಿ ತಂತ್ರಜ್ಞಾನ ರಾಜ್ಯ ಸಚಿವ ರಾಜೀವ್‌ ಚಂದ್ರಶೇಖರ್‌ ಈ ವರದಿ ಕುರಿತು ರಿಯಾಕ್ಟ್ ಮಾಡಿ ʻಇದೊಂದು ದೊಡ್ಡ ಸಮಸ್ಯೆ. ಎಲ್ಲಾ ಭಾರತೀಯರು ಈ ರಿಪೋರ್ಟ್‌ನ್ನ ಚೆನ್ನಾಗಿ ಗಮನಿಸ್ಬೇಕು…. ಈ ಬಗ್ಗೆ ಪ್ರಶ್ನಿಸ್ಬೇಕು. ಕೇವಲ ಮುಸ್ಲಿಂ ಸಮುದಾಯದವ್ರ ಜನಸಂಖ್ಯೆ ಮಾತ್ರ ಅಷ್ಟೊಂದು ಮಟ್ಟಿಗೆ ಏರಿಕೆಯಾಗಿದೆ ಅಂದ್ರೆ ಈ ಬಗ್ಗೆ ಭಾರತೀಯರು ಸೀರಿಯಸ್‌ ಆಗಿ ಥಿಂಕ್‌ ಮಾಡಲೇಬೇಕು. ಈ ಪೈಕಿ ಅಕ್ರಮ ವಲಸೆ ಮತ್ತು ಮತಾಂತರದಿಂದ ಅದೆಷ್ಟು ಸಂಖ್ಯೆ ಹೆಚ್ಚಾಗಿರಬೇಕು? ಮುಸ್ಲಿಂ ಸಮುದಾಯದವ್ರ ಬೆಳವಣಿಗೆಯಿಂದ ಅದೆಷ್ಟು ಬೌದ್ಧರು, ಜೈನರು, ಸಿಖ್‌ರು ಮತ್ತು ಕ್ರಿಶ್ಚಿಯನ್‌ರು ಭಾರತ ಸರ್ಕಾರ ಮತ್ತು ಆಯಾ ರಾಜ್ಯ ಸರ್ಕಾರಗಳು ಅಲ್ಪಸಂಖ್ಯಾತರಿಗೆ ನೀಡೋ ಬೆನಿಫಿಟ್‌ಗಳಿಂದ ವಂಚಿತರಾಗಿದ್ದಾರೆ?ʼ ಅಂತ ಪ್ರಶ್ನೆ ಮಾಡಿದ್ದಾರೆ. ಇತ್ತ ಕಾಂಗ್ರೆಸ್‌ ನಾಯಕಿ ಪ್ರಿಯಾಂಕಾ ಗಾಂಧಿ ವಾದ್ರಾ ಈ ರಿಪೋರ್ಟ್‌ನ್ನ ನಿರಾಕರಿಸಿದ್ದಾರೆ. ಜೊತೆಗೆ ಪತ್ರಕರ್ತರು ಈ ರಿಪೋರ್ಟ್‌ ಬಗ್ಗೆ ಏನ್‌ ಹೇಳ್ತೀರಾ ಅಂತ ಕೇಳಿದಕ್ಕೆ, ʻಯಾರಿಂದ ಈ ಪ್ರಶ್ನೆ ನಿಮ್ಮಲ್ಲಿ ಮೂಡ್ತೋ… ಅವ್ರ ಹತ್ರಾನೇ ಹೋಗಿ ಈ ಪ್ರಶ್ನೆ ಮಾಡಿʼ ಅಂತೇಳಿದ್ದಾರೆ.

-masthmagaa.com

Contact Us for Advertisement

Leave a Reply