ಬ್ರಿಟನ್‌ ರಾಜ 3ನೇ ಚಾರ್ಲ್ಸ್‌ ಪಟ್ಟಾಭಿಷೇಕಕ್ಕೆ ಪ್ರಿನ್ಸ್‌ ಹ್ಯಾರಿ ದಂಪತಿಗೆ ಬಂತು ಆಹ್ವಾನ!

masthmagaa.com:

ಬ್ರಿಟನ್‌ ರಾಜ 3ನೇ ಚಾರ್ಲ್ಸ್‌ ಅವ್ರ ಪಟ್ಟಾಭಿಷೇಕ ಸಮಾರಂಭಕ್ಕೆ ಪ್ರಿನ್ಸ್‌ ಹ್ಯಾರಿ ಮತ್ತು ಅವ್ರ ಪತ್ನಿ ಮೇಘನ್‌ ಮಾರ್ಕೆಲ್‌ ಅವ್ರನ್ನ ಆಹ್ವಾನಿಸಲಾಗಿದೆ. ಈ ಬಗ್ಗೆ ರಾಜರ ಕಚೇರಿಯಿಂದ ಹ್ಯಾರಿ ದಂಪತಿಗೆ ಇಮೇಲ್‌ ಬಂದಿದೆ ಅಂತ ಹ್ಯಾರಿ ಅವ್ರ ವಕ್ತಾರರೊಬ್ರು ಮಾಹಿತಿ ನೀಡಿದ್ದಾರೆ. ಆದ್ರೆ ಸಮಾರಂಭಕ್ಕೆ ಪ್ರಿನ್ಸ್‌ ಹ್ಯಾರಿ ಅವ್ರು ಹೋಗ್ತಾರ ಇಲ್ವಾ ಅನ್ನೋದು ಇನ್ನು ಕನ್ಫರ್ಮ್ ಆಗಿಲ್ಲ ಅಂತ ಹೇಳಿದ್ದಾರೆ. ರಾಯಲ್‌ ಫ್ಯಾಮಿಲಿಯ ಆಂತರಿಕ ಉದ್ವಿಗ್ನತೆ ಕಾರಣಕ್ಕೆ ಪ್ರಿನ್ಸ್‌ ಹ್ಯಾರಿ ದಂಪತಿ 2020ರಲ್ಲಿ ರಾಜಪ್ರಭುತ್ವವನ್ನ ತೊರೆದು ಅಮೆರಿಕದಲ್ಲಿ ನೆಲೆಸಿದ್ದಾರೆ. ಇನ್ನು ರಾಜ 3ನೇ ಚಾರ್ಲ್ಸ್‌ ಅವ್ರ ಪಟ್ಟಾಭಿಷೇಕ ಮೇ 6 ರಂದು ನಡೆಯಲಿದೆ. ಅದೇ ದಿನ ಹ್ಯಾರಿ ಅವ್ರ ಮಗನ ಹುಟ್ಟು‌ ಹಬ್ಬನೂ ಇರೋ ಕಾರಣ ಇವರು ಸಮಾರಂಭಕ್ಕೆ ಅಟೆಂಡ್‌ ಆಗ್ತಾರೆ ಅನ್ನೋದು ಡೌಟು ಎನ್ನಲಾಗಿದೆ.

-masthmagaa.com

Contact Us for Advertisement

Leave a Reply