ಪ್ರಿನ್ಸ್‌ ಹ್ಯಾರಿ ಮೇಲೆ ಹಲ್ಲೆ ಮಾಡಿದ ಪ್ರಿನ್ಸ್‌ ವಿಲಿಯಮ್‌! ಕಾರಣವೇನು?

masthmagaa.com:

ಮದುವೆ ವಿಚಾರವಾಗಿ ಬ್ರಿಟನ್‌ ರಾಜಕುಮಾರರಿಬ್ಬರೂ ಹೊಡೆದಾಡಿಕೊಂಡಿರೋದು ಈಗ ಬೆಳಕಿಗೆ ಬಂದಿದೆ. ಬ್ರಿಟನ್‌ ಪ್ರಿನ್ಸ್‌ ಹ್ಯಾರಿ ಅವ್ರು ಈ ವಿಚಾರವನ್ನ ಬಹಿರಂಗಪಡಿಸಿದ್ದಾರೆ. ಮದುವೆ ವಿಚಾರವಾಗಿ ನನ್ನ ಸಹೋದರ ಪ್ರಿನ್ಸ್‌ ವಿಲಿಯಮ್‌ ನನ್ನ ಮೇಲೆ ಹಲ್ಲೆ ಮಾಡಿದ್ದ ಅಂತ ಖುದ್ದು ಹ್ಯಾರಿ ಹೇಳಿಕೊಂಡಿದ್ದಾರೆ. ಇದೇ ಜನವರಿ 10ರಂದು ಬಿಡುಗಡೆಗೆ ಸಿದ್ಧವಾಗಿರೋ ಹ್ಯಾರಿ ಅವ್ರ ಬಯಾಗ್ರಫಿ ʻಸ್ಪೇರ್‌ʼ ಪುಸ್ತಕದಲ್ಲಿ ಈ ಬಗ್ಗೆ ಬರೆದುಕೊಂಡಿದ್ದಾರೆ. ಪ್ರಿನ್ಸ್‌ ವಿಲಿಯಮ್‌ಗೆ ನಾನು ಮೇಘನ್‌ ಮಾರ್ಕೆಲ್‌ ಅವ್ರನ್ನ ಮದುವೆ ಆಗೋದು ಇಷ್ಟ ಇರ್ಲಿಲ್ಲ. ಈ ಹಿನ್ನೆಲೆಯಲ್ಲಿ ವಿಲಿಯಮ್‌ ನನ್ನ ಕಾಲರ್‌ ಹಿಡಿದುಕೊಂಡು ಎಳೆದು ನೆಲಕ್ಕೆ ಬೀಳಿಸಿದ್ದ.. ಈ ವೇಳೆ ನಾನು ನಾಯಿಯ ಬಟ್ಟಲಿನ ಮೇಲೆ ಬಿದ್ದೆ. ಅದ್ರಿಂದ ನನ್ನ ಬೆನ್ನಿನ ಮೇಲೆ ಗಾಯ ಆಗಿತ್ತು.. ಆಗ ನಾನು ಅಲ್ಲೆ ಬಿದ್ದಿದ್ದೆ, ಆ ಸಮಯದಲ್ಲಿ ನನಗೆ ಗೆಟ್‌ ಔಟ್‌ ಅಂತ ವಿಲಿಯಮ್‌ ಕೂಗಿದ್ದ.. ಅಂತ ಸಹೋದರರ ನಡುವೆ ನಡೆದ ಗಲಾಟೆಯನ್ನ ಹ್ಯಾರಿ ತಮ್ಮ ಪುಸ್ತಕದಲ್ಲಿ ವಿವರಿಸಿದ್ದಾರೆ. ಅಷ್ಟೆ ಅಲ್ದೆ ವಿಲಿಮಯ್‌, ಮೇಘನ್‌ರನ್ನ difficult ಮತ್ತು rude ಅಂತೆಲ್ಲ ಕರೆದಿದ್ರು ಅಂತ ಹ್ಯಾರಿ ತಮ್ಮ ಪುಸ್ತಕದಲ್ಲಿ ಬರೆದುಕೊಂಡಿದ್ದಾರೆ. ಬ್ರಿಟನ್‌ ಜನ ತಮ್ಮನ್ನ ತಾವು ಸಭ್ಯಸ್ಥ ನಾಗರೀಕರು.. ನಾವು ಜಂಟಲ್‌ಮ್ಯಾನ್‌ಗಳು ಅಂತ ಹೇಳ್ಕೊತಾರೆ. ಆದರೆ ಅವರನ್ನ ಆಳುವ ರಾಜರೇ ನಾಯಿ ತಟ್ಟೆ ಮೇಲೆ ಬಿದ್ದು ಒದ್ದಾಡ್ತಾರೆ.

-masthmagaa.com

Contact Us for Advertisement

Leave a Reply