ವೇಲ್ಸ್‌ ಯುವರಾಣಿ ಕೇಟ್‌ ಮಿಡಲ್ಟನ್‌ಗೆ ಕ್ಯಾನ್ಸರ್‌ ಕಾಯಿಲೆ!

masthmagaa.com:

ಬ್ರಿಟನ್‌ ಕಿಂಗ್‌ ಚಾರ್ಲ್ಸ್‌-3 ಅವ್ರು ಕಾನ್ಸರ್‌ನಿಂದ ಬಳಲ್ತಿರೋದು ವರದಿಯಾಗಿತ್ತು. ಇದೀಗ ರಾಜಮನೆತನದ ಮತ್ತೊಬ್ಬ ಸದಸ್ಯರಿಗೆ ಕ್ಯಾನ್ಸರ್‌ ಕಂಡು ಬಂದಿದೆ. ವೇಲ್ಸ್‌ ಯುವರಾಣಿ ಕೇಟ್‌ ಮಿಡಲ್ಟನ್‌ ಅವ್ರು ʻಗುರುತಿಸಲು ಅಸಾಧ್ಯವಂತಹ ಕ್ಯಾನ್ಸರ್ ಕಾಯಿಲೆಗೆ ತುತ್ತಾಗಿದ್ದಾರೆ. ಸದ್ಯ ಚಿಕಿತ್ಸೆ ಪಡೀತಿದ್ದು, ಕೀಮೋಥೆರಪಿಗೆ ಒಳಗಾಗಿದ್ದಾರೆ. ಹೀಗಂತ ಖುದ್ದು ರಾಜಕುಮಾರಿ ಕೇಟ್‌ ಮಿಡಲ್ಟನ್‌ ಅನೌನ್ಸ್‌ ಮಾಡಿದ್ದಾರೆ. ಅಂದ್ಹಾಗೆ ಯುವರಾಣಿ ಕಳೆದ ವರ್ಷ ಕ್ರಿಸ್‌ಮಸ್‌ ನಂತ್ರ ಸಾರ್ವಜನಿಕವಾಗಿ ಕಾಣಿಸಿಕೊಳ್ಳೋದನ್ನ ನಿಲ್ಲಿಸಿದ್ರು. ನಂತ್ರ ಜನವರಿ ತಿಂಗಳಲ್ಲಿ ಅವ್ರು ಕಿಬ್ಬೊಟ್ಟೆಯ ಶಸ್ತ್ರಚಿಕಿತ್ಸೆಗೆ ಒಳಗಾಗಿದ್ರು..ಈ ಬೆನ್ನಲ್ಲೇ ಇದೀಗ ಅವ್ರಿಗೆ ಕ್ಯಾನ್ಸರ್‌ ಇರೋ ವಿಚಾರ ಕನ್ಫರ್ಮ್‌ ಆಗಿದೆ.

-masthmagaa.com

Contact Us for Advertisement

Leave a Reply