ಭಾರತ ಪರ ಘೋಷಣೆ! ಖಲಿಸ್ತಾನಿ ಪುಂಡರಿಗೆ ಕೆನಡಾ ಭಾರತೀಯರ ತಿರುಗೇಟು!

masthmagaa.com:

ಇತ್ತೀಚೆಗೆ ವಿದೇಶದಲ್ಲಿ ಖಲಿಸ್ತಾನಿ ಬೆಂಬಲಿಗರ ಉಪಟಳ ಜಾಸ್ತಿಯಾಗ್ತಿದೆ. ಮೊನ್ನೆಯಷ್ಟೆ ಸ್ಯಾನ್‌ಫ್ರಾನ್ಸಿಸ್ಕೋದ ಭಾರತೀಯ ಕೌನ್ಸುಲೇಟ್‌ಗೆ ಬೆಂಕಿ ಹಚ್ಚಿ ವಿಕೃತಿ ಮೆರೆದಿದ್ದ ಖಲಿಸ್ತಾನ ಬೆಂಬಲಿಗರು, ಇದೀಗ ಕೆನಡಾದ ಟೊರೊಂಟೊದಲ್ಲಿರೋ ಭಾರತೀಯ ಕೌನ್ಸುಲೇಟ್‌ ಕಚೇರಿ ಮುಂದೆ ಪ್ರತಿಭಟನೆ ನಡೆಸಿದ್ದಾರೆ. ಇದಕ್ಕೆ ಪ್ರತಿಯಾಗಿ ಕೆನಡಾದಲ್ಲಿರೋ ಭಾರತೀಯರು ಕೂಡ ದೇಶದ ಪರ ಘೋಷಣೆ ಕೂಗಿ ಖಲಿಸ್ತಾನಿ ಪುಂಡರಿಗೆ ತಿರುಗೇಟು ನೀಡಿದ್ದಾರೆ. ಒಂದು ಕಡೆ ಖಲಿಸ್ತಾನಿ ಬೆಂಬಲಿಗರು ಪ್ರತಿಭಟನೆ ನಡೆಸುತ್ತಿದ್ರೆ ಇನ್ನೊಂದು ಕಡೆ ಭಾರತ ಪರ ಪ್ರತಿಭಟನಾಕಾರರು ತ್ರಿವರ್ಣ ಧ್ವಜ ಹಿಡಿದು ರ್ಯಾಲಿ ಮಾಡಿದ್ದಾರೆ. ಈ ವಿಡಿಯೋ ಸೋಷಿಯಲ್‌ ಮೀಡಿಯಾದಲ್ಲಿ ವೈರಲ್‌ ಆಗಿದೆ. ಜೊತೆಗೆ ಶಾಂತಿಯುತವಾಗಿ ರ್ಯಾಲಿ ಮಾಡ್ತಿದ್ದ ಭಾರತೀಯ ಸಮುದಾಯದ ಮೇಲೆ ಖಲಿಸ್ತಾನಿ ಬೆಂಬಲಿಗರು ಬ್ಯಾರಿಕೇಡ್‌ಗಳನ್ನ ಹಾರಿ ದಾಳಿ ನಡೆಸೋಕೆ ಪ್ರಯತ್ನಿಸಿದ್ದು, ಪೊಲೀಸರು ಅದನ್ನ ತಡೆದಿದ್ದಾರೆ. ಪ್ರತಿಭಟನೆ ಬಳಿಕೆ ಮಾತಾಡಿರೋ ಭಾರತೀಯ ಮೂಲದ ವ್ಯಕ್ತಿಯೊಬ್ರು, ನಮ್ಮ ಶಾಂತಿಯುತ ರ್ಯಾಲಿ ಮೇಲೆ ಖಲಿಸ್ತಾನಿಗಳು ದಾಳಿ ಮಾಡೋಕೆ ಟ್ರೈ ಮಾಡಿದ್ದು, ಅವರ ಹಿಂಸಾತ್ಮಕ ಪ್ರವೃತ್ತಿ ತೋರಿಸುತ್ತದೆ ಅಂತ ಆಕ್ರೋಶ ವ್ಯಕ್ತಪಡಿಸಿದ್ದಾರೆ. ಇತ್ತ ಇಂಥ ಹಿಂಸಾತ್ಮಕ ರ್ಯಾಲಿಗಳನ್ನ ತಕ್ಷಣವೇ ಬ್ಯಾನ್‌ ಮಾಡಲು ಬೇಕಾದ ಕ್ರಮಗಳನ್ನ ಕೈಗೊಳ್ಳುವಂತೆ ಅಧಿಕಾರಿಗಳಿಗೆ ಕೆನಡಾ ಪ್ರಧಾನಿ ಜಸ್ಟಿನ್‌ ಟ್ರುಡೋ ಅವ್ರು ಕರೆ ನೀಡಿದ್ದಾರೆ. ಅಂದ್ಹಾಗೆ ಜೂನ್‌ 18ರಂದು ಕೆನಡಾದಲ್ಲಿ ಹತ್ಯೆಯಾಗಿದ್ದ ಖಲಿಸ್ತಾನಿ ನಾಯಕ ಹರ್ದೀಪ್‌ ಸಿಂಗ್‌ ನಿಜ್ಜರ್‌ ಸಾವನ್ನ ವಿರೋಧಿಸಿ ಖಲಿಸ್ತಾನಿಗಳು ಈ ರ್ಯಾಲಿ ನಡೆಸಿದ್ದಾರೆ.) ಮತ್ತೊಂದ್‌ ಕಡೆ, ಖಲಿಸ್ತಾನಿ ಬೆಂಬಲಿಗರು ಪ್ರತಿಭಟನೆ ನಡೆಸೋ ನಿರೀಕ್ಷೆ ಇರುವ ಕಾರಣ ವಾಷಿಂಗ್ಟನ್ ಡಿಸಿಯಲ್ಲಿರುವ ಭಾರತೀಯ ರಾಯಭಾರಿ ಕಚೇರಿ ಎದುರು ಭದ್ರತೆ ಹೆಚ್ಚಿಸಲಾಗಿದೆ.

-masthmagaa.com

Contact Us for Advertisement

Leave a Reply