ಪ್ರಪಂಚದ ಹಲವು ವಿ.ವಿಗಳ ಮುಂದೆ ಪ್ಯಾಲಸ್ತೀನ್‌ ಪರ ಪ್ರತಿಭಟನೆ!

masthmagaa.com:

ಗಾಜಾದಲ್ಲಿ ಇಸ್ರೇಲ್‌ ದಾಳಿ ಖಂಡಿಸಿ ಅಮೆರಿಕದ ಯುನಿವರ್ಸಿಟಿಗಳಲ್ಲಿ ತೀವ್ರಗೊಂಡಿದ್ದ ಪ್ಯಾಲಸ್ತೀನ್‌ ಪರ ಪ್ರತಿಭಟನೆಯ ಕಿಚ್ಚು ಇದೀಗ ಬೇರೆ ದೇಶಗಳಿಗೂ ಹರಡಿದೆ. ಕೆನಡಾ, ಆಸ್ಟ್ರೇಲಿಯಾ, ಬ್ರಿಟನ್ ಹಾಗೂ ಫ್ರಾನ್ಸ್‌ನ ಯುನಿವರ್ಸಿಟಿಗಳ ಮುಂದೆ ಪ್ಯಾಲಸ್ತೀನ್‌ ಪರ ಘೋಷಣೆಗಳನ್ನ ಕೂಗಿ ನೂರಾರು ವಿದ್ಯಾರ್ಥಿಗಳು ಪ್ರತಿಭಟನೆ ನಡೆಸ್ತಿದ್ದಾರೆ. ಈ ವೇಳೆ ಕೆಲವೆಡೆ ಇಸ್ರೇಲ್‌ ಪರ ಪ್ರತಿಭಟನಾಕಾರರು ಸ್ಥಳಕ್ಕೆ ಜಮಾಯಿಸಿದ್ದರಿಂದ ಪರಿಸ್ಥಿತಿ ಉದ್ವಿಗ್ನಗೊಂಡಿತ್ತು. ಹೀಗಾಗಿ ಪೊಲೀಸರು ಮಧ್ಯ ಪ್ರವೇಶಿಸಿ ಪರಿಸ್ಥಿತಿಯನ್ನ ನಿಯಂತ್ರಿಸಿದ್ದಾರೆ ಅಂತ ಮಾಹಿತಿ ಲಭ್ಯ ಆಗಿದೆ.

-masthmagaa.com

Contact Us for Advertisement

Leave a Reply