ಲಂಚ ಪಡೆದ ಭಾರತೀಯ ನೌಕಾ ಅಧಿಕಾರಿ ಸಿಬಿಐ ವಶಕ್ಕೆ! ನಡೆದಿದ್ದೇನು?

masthmagaa.com:

ಭಾರತೀಯ ನೌಕಾಪಡೆ ಸೇರೋಕೆ ಬಯಸೋ ಕ್ಯಾಂಡಿಡೇಟ್ಸ್‌ ಹತ್ರ ಲಂಚ ಕೇಳಿ ಭಾರತೀಯ ನೌಕಾಪಡೆಯ ಅಧಿಕಾರಿಯೊಬ್ರು ನೆನ್ನೆ ಸಿಬಿಐ ಕೈಗೆ ಸಿಕ್ಕಿ ಹಾಕೊಂಡಿದ್ದಾರೆ. ಇತ್ತೀಚೆಗಷ್ಟೇ ಇಂಡಿಯನ್‌ ನೇವಿ ಹಾಸ್ಪಿಟಲ್‌ ಶಿಪ್‌ನಲ್ಲಿ ಕೆಲಸಕ್ಕೆ ಸೇರಿಕೊಂಡಿರೋ ಈತ, ನೌಕಾಪಡೆಯ ಉದ್ಯೋಗಭರ್ತಿ ನಡೀತಿರೋ ವೇಳೆ ಹಣ ಮಾಡೋಕೆ ಮುಂದಾಗಿದ್ದಾನೆ. ರಿಟನ್‌ ಮತ್ತು ಫಿಸಿಕಲ್‌ ಟೆಸ್ಟ್‌ ಕ್ಲಿಯರ್‌ ಮಾಡಿರೋ ಕ್ಯಾಂಡಿಡೇಟ್ಸ್‌ಗಳಿಗೆ ತಮ್ಮ ಮೆಡಿಕಲ್‌ ರಿಪೋರ್ಟ್‌ ಪಾಸಿಟಿವ್‌ ಅಂತ ತೋರಿಸೋದಕ್ಕೆ ಪ್ರತಿಯೊಬ್ಬರಿಂದ 30 ಸಾವಿರ ರೂಪಾಯಿ ಡಿಮ್ಯಾಂಡ್‌ ಮಾಡಿದ್ದಾನೆ. ತಾನು ಕೇಳಿರೋ ಹಣವನ್ನ ತನ್ನ ಫೋನ್‌ಪೇ ಗೆ ಕಳಿಸೋದಕ್ಕೆ ತಿಳಿಸಿದ್ದಾನೆ. ಇದೀಗ ಈತನ ಕಳ್ಳ ದಂಧೆ ಪತ್ತೆ ಮಾಡಿರೋ ಸಿಬಿಐ ಅಧಿಕಾರಿಗಳು ಈತನನ್ನ ಅರೆಸ್ಟ್‌ ಮಾಡಿದ್ದಾರೆ. ಅಂದ್ಹಾಗೆ ಈತನನ್ನ ಮುಂಬೈ ಮೂಲದ ಸಂಜು ಅರಳಿಕಟ್ಟಿ ಅಂತ ಗುರುತಿಸಲಾಗಿದೆ. ಈ ಪ್ರಕರಣದ ಕುರಿತು ಸಿಬಿಐ ತನಿಖೆಯನ್ನ ಮುಂದುವರೆಸಿದೆ.

-masthmagaa.com

Contact Us for Advertisement

Leave a Reply