ಗಾಜಾ ಕದನ: ಅಮೆರಿಕದ ಪ್ರತಿಷ್ಠಿತ ಯುನಿವರ್ಸಿಟಿಗಳಲ್ಲಿ ಪ್ರತಿಭಟನೆ!

masthmagaa.com:

ಗಾಜಾ ಯುದ್ದದಲ್ಲಿ ಇಸ್ರೇಲ್ ಮಾಡ್ತಿರೋ ಪ್ರತಿದಾಳಿಯನ್ನ ನಿಲ್ಲಿಸಬೇಕು ಅಂತ ಅಮೆರಿಕದ ಪ್ರತಿಷ್ಠಿತ ಯುನಿವರ್ಸಿಟಿಗಳಲ್ಲಿ ಭಾರಿ ಪ್ರತಿಭಟನೆಗಳು ನಡೀತಿವೆ. ಈಗ ಅಮೆರಿಕದ ಯೇಲ್‌ ಯುನಿರ್ಸಿಟಿಯಲ್ಲಿ ಪ್ಯಾಲಸ್ತೀನ್‌ ಪರ ಪ್ರತಿಭಟನೆ ನಡೆಸ್ತಿದ್ದ 40ಕ್ಕೂ ಅಧಿಕ ಪ್ರತಿಭಟನಾಕಾರರನ್ನ ಪೊಲೀಸರು ಬಂಧಿಸಿದ್ದಾರೆ. ಇನ್ನು ಕಳೆದ ವಾರ ಪ್ರತಿಷ್ಠಿತ ಕೊಲಂಬಿಯಾ ಯುನಿವರ್ಸಿಟಿ ಮುಂದೆ ಸ್ಟ್ರೈಕ್‌ ಮಾಡ್ತಿದ್ದ, ಮಿನ್ನೆಸೊಟಾ ಪಾಲಿಟಿಷಿಯನ್‌ ಇಲ್ಹಾನ್‌ ಓಮರ್‌ರ ಪುತ್ರಿ ಸೇರಿದಂತೆ 108 ಪ್ರತಿಭಟನಾಕಾರರನ್ನ ಪೊಲೀಸರು ಅರೆಸ್ಟ್‌ ಮಾಡಿದ್ರು. ಹೀಗಾಗಿ ರದ್ದುಗೊಳಿಸಲಾಗಿದ್ದ ಯುನಿವರ್ಸಿಟಿಯ ಕ್ಲಾಸ್‌ಗಳನ್ನ ಇನ್ಮುಂದೆ ವರ್ಚುವಲ್‌ ಆಗಿ ನಡೆಸಲಾಗುವುದು ಅಂತ ಕೊಲಂಬಿಯಾ ಯುನಿವರ್ಸಿಟಿ ಮುಖ್ಯಸ್ಥ ಮಿನೌಚೆ ಶಫಿಕ್‌ ತಿಳಿಸಿದ್ದಾರೆ. ಅಲ್ದೇ ಯುನಿವರ್ಸಿಟಿಯಲ್ಲಿ ಯಹೂದಿಗಳಿಗೆ ಪ್ಯಾಲಸ್ತೀನ್‌ ಪರ ಪ್ರತಿಭಟನಕಾರರು ನೀಡ್ತಿರೊ ಕಿರುಕುಳಕ್ಕೆ ಶಫಿಕ್‌ ಖಂಡನೆ ವ್ಯಕ್ತ ಪಡಿಸಿದ್ದಾರೆ. ಇನ್ನು ಬರ್ಕ್ಲಿ, MIT ಸೇರಿದಂತೆ ಅಮೆರಿಕದ ಹಲವು ಯುನಿವರ್ಸಿಟಿಗಳಲ್ಲಿ ಪ್ರತಿಭಟನೆಗಳು ಜೋರಾಗಿದ್ದು ಪ್ಯಾಲಸ್ತೀನ್‌ ಪರ ಪ್ರತಿಭಟನೆಗಳಿಗೆ ಅಮೆರಿಕದ ವೈಟ್‌ ಹೌಸ್‌ ಕೂಡ ಖಂಡನೆ ವ್ಯಕ್ತ ಪಡಿಸಿದೆ.

-masthmagaa.com

Contact Us for Advertisement

Leave a Reply