ರೈಲ್ವೆ ವಿರುದ್ಧ ಕಿಡಿಕಾರಿದ ನ್ಯಾಯಮೂರ್ತಿಗೆ CJIನಿಂದ ಪಾಠ, ಹೈಕೋರ್ಟ್‌ಗಳಿಗೆ ಪತ್ರ!

masthmagaa.com:

ರೈಲು ಪ್ರಯಾಣದ ವೇಳೆ ಅನಾನುಕೂಲತೆ ಉಂಟಾದ ಕಾರಣಕ್ಕೆ ರೈಲ್ವೆ ಅಧಿಕಾರಿಗಳಿಂದ ವಿವರಣೆ ಕೋರಿದ್ದ ನ್ಯಾಯಮೂರ್ತಿಯೊಬ್ಬರ ಪ್ರಕರಣವನ್ನ ಮುಖ್ಯ ನ್ಯಾಯಮೂರ್ತಿ ಡಿವೈ ಚಂದ್ರಚೂಡ್, ಗಂಭೀರವಾಗಿ ಪರಿಗಣಿಸಿದ್ದಾರೆ. ಅಲ್ದೇ ಎಲ್ಲಾ ಹೈಕೋರ್ಟ್‌ಗಳ ಮುಖ್ಯ ನ್ಯಾಯಾಧೀಶರಿಗೆ ಪತ್ರ ಬರೆದಿದ್ದಾರೆ. ಅದ್ರಲ್ಲಿ ಈ ಘಟನೆ ನ್ಯಾಯಾಂಗದ ಒಳಗೆ ಮತ್ತು ಹೊರಗೆ ಎರಡೂ ಕಡೆ ಆತಂಕಕ್ಕೆ ಎಡೆಮಾಡಿಕೊಟ್ಟಿದೆ. ನ್ಯಾಯಾಂಗದ ಒಳಗೆ ಆತ್ಮಾವಲೋಕನ ಹಾಗೂ ಆಪ್ತ ಸಮಾಲೋಚನೆ ನಡೆಯುವ ಅಗತ್ಯವಿದೆ ಅಂತ ಚಂದ್ರಚೂಡ್ ಒತ್ತಿ ಹೇಳಿದ್ದಾರೆ. ಅಂದ್ಹಾಗೆ ನ್ಯಾಯಾಧೀಶರೊಬ್ರಿಗೆ ರೈಲಿನಲ್ಲಿ ಪ್ರಯಾಣಿಸುವಾಗ ಕುಡಿಯಲು ಪಾನೀಯ ಅಥವಾ ತಿನಿಸು ಸಿಕ್ಕಿರಲಿಲ್ಲ. ಈ ಬಗ್ಗೆ ಟಿಟಿಇ ಅಥವಾ ರೈಲ್ವೆ ಪೊಲೀಸರಿಂದ ಕೂಡ ಸ್ಪಂದನೆ ಸಿಕ್ಕಿರಲಿಲ್ಲ. ಹೀಗಾಗಿ ಈ ಬಗ್ಗೆ ವಿವರಣೆ ಪಡೆಯಲು ಪ್ರಾದೇಶಿಕ ರೈಲ್ವೆ ವ್ಯವಸ್ಥಾಪಕರನ್ನ ಕರೆಯಿಸುವಂತೆ ನ್ಯಾಯಾಲಯದ ರಿಜಿಸ್ಟ್ರಾರ್‌ಗೆ ನ್ಯಾಯಾಧೀಶರು ಸೂಚಿಸಿದ್ರು. ಈ ಘಟನೆ ಉಲ್ಲೇಖಿಸಿರುವ CJI ರೈಲ್ವೆ ಸಿಬ್ಬಂದಿ ವಿರುದ್ಧ ಶಿಸ್ತು ಕ್ರಮ ಕೈಗೊಳ್ಳುವ ಅಧಿಕಾರ ಹೈಕೋರ್ಟ್ ವ್ಯಾಪ್ತಿಗೆ ಬರಲ್ಲ ಅಂತ ಹೇಳಿದ್ದಾರೆ.

-masthmagaa.com

Contact Us for Advertisement

Leave a Reply