ಕುಸ್ತಿಪಟುಗಳನ್ನ ಭೇಟಿ ಮಾಡಿ ಮಾತುಕತೆ ನಡೆಸಿದ ಪಿ.ಟಿ ಉಷಾ!

masthmagaa.com:

WFI ಅಧ್ಯಕ್ಷ ಬ್ರಿಜ್‌ ಭೂಷಣ್‌ ವಿರುದ್ಧ ಲೈಂಗಿಕ ಕಿರುಕುಳ ನೀಡಿರುವ ಬಗ್ಗೆ ಆರೋಪಿಸಿ ಪ್ರತಿಭಟನೆ ನಡೆಸುತ್ತಿರುವ ಕುಸ್ತಿಪಟುಗಳನ್ನ ಭಾರತೀಯ ಒಲಂಪಿಕ್‌ ಒಕ್ಕೂಟದ ಅಧ್ಯಕ್ಷೆ ಪಿ.ಟಿ ಉಷಾ ಅವ್ರು ಭೇಟಿಯಾಗಿದ್ದಾರೆ. ಈ ವೇಳೆ ಕುಸ್ತಿಪಟುಗಳ ಮನಸ್ಸಿನ ಮಾತನ್ನ ಕ್ರೀಡಾ ಸಚಿವರು ಹಾಗೂ ಸಂಬಂಧಿಸಿದ ಪ್ರಾಧಿಕಾರಗಳ ಗಮನಕ್ಕೆ ತರೋದಾಗಿ ಉಷಾ ಭರವಸೆ ನೀಡಿದ್ದಾರೆ. ಅಂದ್ಹಾಗೆ ಇತ್ತೀಚೆಗಷ್ಟೆ ಕಮಿಟಿಯ ರಿಪೋರ್ಟ್‌ಗಾಗಿ ಕಾಯದೆ ಕುಸ್ತಿಪಟುಗಳು ಪ್ರತಿಭಟನೆ ನಡೆಸುತ್ತಿರೋದು ಸರಿಯಲ್ಲ. ಆಟಗಾರರು ಬೀದಿಗಿಳಿದು ಪ್ರತಿಭಟನೆ ಮಾಡಬಾರದಿತ್ತು ಇದು ಅಶಿಸ್ತನ್ನ ತೋರುತ್ತೆ, ದೇಶದ ಗೌರವವನ್ನ ಹಾಳು ಮಾಡ್ತಿದಾರೆ ಅಂತ ಹೇಳಿದ್ರು. ಆದ್ರೆ ಇದೀಗ ಕುಸ್ತಿಪಟುಗಳನ್ನ ಭೇಟಿಯಾಗಿ ಮಾತುಕತೆ ನಡೆಸಿದ್ದಾರೆ. ಇತ್ತ ಕಳೆದ ಬಾರಿ ನಾವು ಕ್ರೀಡಾ ಸಚಿವ ಅನುರಾಗ್‌ ಠಾಕೂರ್‌ ಅವ್ರೊಂದಿಗೆ ಮಾತುಕತೆ ನಡೆಸಿದ ನಂತ್ರ ನಮ್ಮ ಪ್ರತಿಭಟನೆಯನ್ನ ಹಿಂಪಡೆದಿದ್ವಿ. ಎಲ್ಲಾ ಕ್ರೀಡಾಪಟುಗಳು ಲೈಂಗಿಕ ಕಿರುಕುಳದ ಕುರಿತು ಅವ್ರಿಗೆ ತಿಳಿಸಿದ್ದೆವೆ. ಆದ್ರೆ ಸಮಿತಿಯೊಂದನ್ನ ರಚಿಸಿ, ಕೇಸ್‌ನ್ನ ಅಲ್ಲೇ ಮುಚ್ಚಿ ಹಾಕಲು ಪ್ರಯತ್ನಿಸಿದ್ದಾರೆ. ಆ ಟೈಮ್‌ನಲ್ಲಿ ಯಾವುದೇ ಕ್ರಮ ಕೈಗೊಂಡಿಲ್ಲ ಅಂತ ವಿನೇಶ್‌ ಫೋಗಟ್‌ ಆರೋಪಿಸಿದ್ದಾರೆ.

-masthmagaa.com

Contact Us for Advertisement

Leave a Reply