ಸ್ವಾತಂತ್ರ್ಯ ಹೋರಾಟಕ್ಕೆ ಇಮ್ರಾನ್‌ ಕರೆ: ಬೀದಿಗಳಿದ ಬೆಂಬಲಿಗರು

masthmagaa.com:

ಪಾಕಿಸ್ತಾನದಲ್ಲಿ ಆಮದು ಸರ್ಕಾರ ಬರ್ತಿದೆ, ನಾವು ಅದರ ವಿರುದ್ದ ಮತ್ತೊಮ್ಮೆ ಸ್ವಾತಂತ್ರ್ಯ ಹೋರಾಟ ಮಾಡ್ಬೇಕು ಅನ್ನೋ ಇಮ್ರಾನ್‌ ಕರೆಕೊಟ್ಟ ಬೆನ್ನಲ್ಲೇ ಅವರ ಬೆಂಬಲಿಗರು ಅಹೋರಾತ್ರಿ ಪ್ರತಿಭಟನೆ ನಡೆಸಿದ್ದಾರೆ. ಕರಾಚಿ, ಒಕಾರ, ಮುಲ್ತಾನ್‌, ಇಸ್ಲಾಮಾಬಾದ್‌ ಸೇರಿದಂತೆ ಪಾಕಿಸ್ತಾನದಾದ್ಯಂತ ಭಾನುವಾರ ಭಾರಿ ಪ್ರತಿಭಟನೆ ನಡೆಸಿದ್ದಾರೆ. ಲಾಹೋರಿನ ಬೀದಿ ಬೀದಿಗಳಲ್ಲಿ ಸಾವಿರಾರು ಬೆಂಬಲಿಗರು ಇಮ್ರಾನ್‌ ರಾಜೀನಾಮೆಯನ್ನ ಖಂಡಿಸಿ ಪ್ರತಿಪಕ್ಷಗಳ ವಿರುದ್ದ ಘೋಷಣೆ ಕೂಗಿದ್ದಾರೆ. ಈ ಬಗ್ಗೆ ಪ್ರತಿಕ್ರಿಯಿಸಿರುವ ಇಮ್ರಾನ್‌, ಇಂತಹ ದೊಡ್ಡ ಸಂಖ್ಯೆಯ ಪ್ರತಿಭಟನೆಯನ್ನ ನಾನು ಯಾವತ್ತೂ ನೋಡಿಲ್ಲ. ಇದೆಲ್ಲಾ ಇಂಪೋರ್ಟೆಡ್​ ಗವರ್ನಮೆಂಟ್​ ವಿರುದ್ದ’ ಅಂತ ಟ್ವೀಟ್‌ ಮಾಡಿದ್ದಾರೆ.
– ಮತ್ತೊಂದುಕಡೆ ಲಂಡನ್‌ನಲ್ಲಿರುವ ಪಾಕ್‌ ಮಾಜಿ ಪ್ರಧಾನಿ ನವಾಜ್‌ ಷರೀಫ್‌ ಮನೆ ಮುಂದೆ ಖಾನ್‌ ಬೆಂಬಲಿಗರು ಪ್ರತಿಭಟಿಸಿದ್ದಾರೆ. ಭ್ರಷ್ಟಾಚಾರದ ಆರೋಪ ಹೊತ್ತಿರುವ ನವಾಜ್‌ ಷರೀಫ್‌ ಚಿಕಿತ್ಸೆ ನೆಪದಲ್ಲಿ ಇಂಗ್ಲೆಂಡ್​​ನಲ್ಲೇ ನೆಲೆಸಿದ್ದಾರೆ. ಅಲ್ಲಿದ್ದುಕೊಂಡೇ ಇಮ್ರಾನ್‌ ರಾಜೀನಾಮೆಗೆ ಕೆಲಸ ಮಾಡಿದ್ರು ಅಂತೇಳಿ ಖಾನ್​ ಬೆಂಬಲಿಗರು ಅವರ ವಿರುದ್ದ ಪ್ರತಿಭಟನೆ ನಡೆಸಿದ್ದಾರೆ.

-masthmagaa.com

Contact Us for Advertisement

Leave a Reply