ಸಾವಿರಾರು ಕೋಟಿ ಸಾಲ ಮಾಡಿ ದೇಶ ಬಿಟ್ಟ ಪಂಜಾಬ್‌ ಜನ್ರು!

masthmagaa.com:

ಒಳ್ಳೇ ಜೀವನ ಸಿಗುತ್ತೆ ಅಂತ ಅಕ್ರಮವಾಗಿ ಅಮೆರಿಕ, ಕೆನಡಾಗಳಿಗೆ ಹಾರೋ ವಲಸಿಗರ ವಿಚಾರ ಮತ್ತೆ ಮುನ್ನಲೆಗೆ ಬಂದಿದೆ. ನಿಕರಾಗುವಾ ಡಂಕಿ ಫ್ಲೈಟ್‌ ವಿಮಾನದ ಪ್ರಕರಣ ಆದ್ಮೇಲೆ ಗುಜರಾತ್‌ನ CID ಅಧಿಕಾರಿಗಳು ಈ ಬಗ್ಗೆ ತನಿಖೆಗೆ ಮುಂದಾಗಿದ್ದಾರೆ. ಇದೀಗ ಈ ಪ್ರಕರಣದಲ್ಲಿ CID 14 ಅಕ್ರಮ ಟ್ರಾವೆಲ್ ಏಜೆಂಟ್‌ಗಳ ವಿರುದ್ಧ ಮಾನವ ಕಳ್ಳಸಾಗಾಣಿಕೆ ಕೇಸ್‌ ಹಾಕಿದೆ.‌ ಆದ್ರೆ ಅದಕ್ಕಿಂತ ಹೆಚ್ಚಾಗಿ ಸದ್ದಾಗ್ತಿರೋದು ಪಂಜಾಬ್ ಜನರ ಮಹಾಪಲಾಯನದ ಕಥೆ. ಯಾಕಂದ್ರೆ, ಪಂಜಾಬ್‌ ಜನ್ರು ದೇಶ ವಿದೇಶಗಳಿಗೆ ಹೋಗೋಕೆ ಕಳೆದ 30 ವರ್ಷಗಳಲ್ಲಿ 14 ಸಾವಿರ ಕೋಟಿ ಸಾಲ ಮಾಡಿದ್ದಾರೆ. ಅಲ್ಲದೆ ಐದು ವರೇ ಸಾವಿರ ಕೋಟಿ ಮೌಲ್ಯದ ಆಸ್ತಿಗಳನ್ನ ಮಾರಿ ಡಂಕಿ ಫ್ಲೈಟ್‌ ಹತ್ತಿದ್ದಾರೆ ಅನ್ನೋ ಮಾಹಿತಿ ಬಂದಿದೆ. ಪಂಜಾಬ್‌ನ ಕೃಷಿ ವಿವಿ ಮಾಡಿರೋ ಸ್ಟಡಿ ಒಂದ್ರಲ್ಲಿ ಈ ವಿಚಾರ ಬೆಳಕಿಗೆ ಬಂದಿದೆ.

-masthmagaa.com

Contact Us for Advertisement

Leave a Reply