ಪ್ಯಾನ್‌ ಇಂಡಿಯಾ ಸೇಲ್ಸ್‌ಗಾಗಿ ಫಂಡ್‌ ರೈಸಿಂಗ್‌ನತ್ತ PURE EV

masthmagaa.com:

ಹೈದ್ರಾಬಾದ್‌ ಮೂಲದ ಫೇಮಸ್ EV ತಯಾರಿಕಾ ಕಂಪನಿ PURE EV, ತನ್ನ ಮೊದಲ ಹಂತದ ಫಂಡ್‌ ರೈಸಿಂಗ್‌ನಲ್ಲಿ ಸುಮಾರು $8 ಮಿಲಿಯನ್‌ ಡಾಲರ್‌ ಬಂಡವಾಳ ರೈಸ್‌ ಮಾಡಿದೆ. ಬೆಂಗಳೂರು ಮೂಲದ ಬೆನೆಟ್‌ ಕೋಲೆಮನ್‌ ಅಂಡ್‌ ಕಂಪನಿ, ಹಿಂದುಸ್ಥಾನ್‌ ಟೈಮ್ಸ್‌ ಹಾಗೂ ಯುಶೋದಯ ಎಂಟರ್‌ಪ್ರೈಸಸ್‌ಗಳ ಲೈಡರ್‌ಶಿಪ್‌ನ ಫಂಡಿಂಗ್‌ ರೌಂಡ್‌ನಲ್ಲಿ, ಪ್ಯೂರ್‌ ಇವಿ ಬಂಡವಾಳ ಸಂಗ್ರಹಿಸಿದೆ. ಈ ಮೂಲಕ ಇನ್ನು 6 ತಿಂಗಳಲ್ಲಿ ದೇಶಾದ್ಯಂತ ಇರೋ ಡೀಲರ್‌ಶಿಪ್‌ಗಳನ್ನ 140ರಿಂದ 300ಕ್ಕೇ ಏರಿಸೋಕೆ ಪ್ಲಾನ್‌ ಮಾಡಿದೆ. ಅಲ್ಲದೆ ಎರಡನೇ ಸುತ್ತಿನ ಫಂಡ್‌ ರೈಸಿಂಗ್‌ ಪ್ರಕ್ರಿಯೆಯಲ್ಲಿ, ವಿದೇಶಿ ಕಂಪನಿಗಳಿಂದ್ಲೂ ಬಂಡವಾಳ ಸಂಗ್ರಹ ಮಾಡೋ ಬಗ್ಗೆ ಕಂಪನಿ ಯೋಚಿಸಿದೆ. ಅಂದ್ಹಾಗೆ ಕಳೆದ ವರ್ಷ ಪ್ಯೂರ್‌ ಇವಿ ಹಲವು ಮೋಡೆಲ್‌ಗಳನ್ನ ರಿಲೀಸ್‌ ಮಾಡಿದೆ. ಅದ್ರಲ್ಲೂ 200 ಕಿಲೋ ಮೀಟರ್‌ ರೇಂಜ್‌ ನೀಡೋ ePluto 7G Max ಸ್ಕೂಟರ್‌ ಬಹಳ ಪಾಪುಲರ್‌ ಆಗಿದೆ.

-masthmagaa.com

Contact Us for Advertisement

Leave a Reply