ಸೈನ್ಯ ಸಜ್ಜುಗೊಳಿಸಲು ಆದೇಶಿಸಿದ ಪುಟಿನ್‌, ಅಣ್ವಸ್ತ್ರ ಬಳಸೋಕು ಹಿಂಜರಿಯಲ್ವಂತೆ!

masthmagaa.com:

ಇತ್ತೀಚೆಗೆ ತಾನೆ ಯುಕ್ರೇನ್‌ ಯುದ್ದದಲ್ಲಾದ ಹಿನ್ನಡೆಯಿಂದ ಕಂಗೆಟ್ಟಿರೋ ರಷ್ಯಾ ಅಧ್ಯಕ್ಷ ವ್ಲಾಡಿಮಿರ್ ಪುಟಿನ್ ಇದೀಗ ರಷ್ಯಾ ಸೇನೆಯನ್ನ ಭಾಗಶಃ ಸಜ್ಜುಗೊಳಿಸುವಿಕೆಗೆ ಆದೇಶಿಸಿದ್ದಾರೆ. ರಷ್ಯಾವನ್ನ ಉದ್ದೇಶಿಸಿ ಟಲಿವಿಷನ್‌ನಲ್ಲಿ ಮಾತಾಡಿರೋ ಪುಟಿನ್‌ ಈ ರೀತಿ ಹೇಳಿದಾರೆ. ಜೊತೆಗೆ ಯುಕ್ರೇನ್‌ ಭಾಗಗಳನ್ನ ರಷ್ಯಾಗೆ ಸೇರಿಸಿಕೊಳ್ಳೋ ಬಗ್ಗೆ ಮಾತಾಡಿದ್ದು, ರಷ್ಯಾ ರಕ್ಷಣೆಗೆ ನ್ಯೂಕ್ಲಿಯರ್‌ ಅಸ್ತ್ರಗಳನ್ನ ಬಳಸೋಕು ಹಿಂಜರಿಯಲ್ಲ, ನಾನು ತಮಾಷೆ ಮಾಡ್ತಿಲ್ಲ ಅಂತ ಹೇಳಿದ್ದಾರೆ. ಇನ್ನು ಸೇನೆಯನ್ನ ಮೊಬೈಲೈಸ್‌ ಮಾಡೋಕೆ ಆದೇಶಿಸುವ ಮೂಲಕ ಎರಡನೇ ಮಹಾಯುದ್ಧದ ನಂತರ ರಷ್ಯಾ ಅಧ್ಯಕ್ಷರೊಬ್ಬರು ಈ ರೀತಿ ಆದೇಶ ನೀಡಿದಂತೆ ಆಗಿದೆ. ಇನ್ನು ಪಾಶ್ಚೀಮಾತ್ಯ ದೇಶಗಳು ರಷ್ಯಾನ ನಾಶಪಡಿಸೋಕೆ ನೋಡ್ತಿವೆ. ʻನ್ಯೂಕ್ಲಿಯರ್‌ ಬ್ಲ್ಯಾಕ್‌ಮೇಲ್‌ʼ ಮಾಡ್ತಿವೆ. ಆದ್ರೆ ಗಾಳಿ ಅವ್ರ ಕಡೆಗೂ ಕೂಡ ತಿರುಗಬಹುದು ಅನ್ನೋ ಅರಿವಿರಬೇಕು ಅಂತ ಎಚ್ಚರಿಸಿದ್ದಾರೆ. ಇನ್ನು ಸೈನ್ಯ ಸಜ್ಜುಗೊಳಿಸೋದ್ರ ಭಾಗವಾಗಿ ರಷ್ಯಾದ ಒಟ್ಟು ಸಾಮರ್ಥ್ಯ 2.5 ಕೋಟಿ ಸೈನಿಕರಲ್ಲಿ, ಅಂದ್ರೆ ಮೀಸಲಾತಿ ಎಲ್ಲ ಸೇರಿ… ಸೋ ಅದ್ರಲ್ಲಿ 3 ಲಕ್ಷ ಸೈನಿಕರನ್ನ ಸೇನೆಗೆ ಸೇರಿಸಿಕೊಳ್ಳಬಹುದು ಅಂತ ರಷ್ಯಾ ಪ್ರಧಾನಿ ಸೆರ್ಗೆ ಶೋಯಿಗು ಹೇಳಿದ್ದಾರೆ. ಇನ್ನು ಇದಕ್ಕೆ ರಷ್ಯಾದ ವಿರೋಧ ಪಕ್ಷಗಳು ಭಾರೀ ವಿರೋಧ ವ್ಯಕ್ತಪಡಿಸಿದ್ದು, ಪ್ರತಿಭಟನೆಗೆ ಕರೆ ನೀಡಿವೆ. ಅತ್ತ ಈ ಟೆಲಿವಿಷನ್‌ ಭಾಷಣ ಮಾಡೋಕ್ಕಿಂತ ಮುಂಚೆ ಪುಟಿನ್‌ ಕಫಿಂಗ್‌ ಫಿಟ್ಸ್‌ ಅಂದ್ರೆ ಈ ಹೊಟ್ಟೆಯೆಲ್ಲ ನೋವೊ ಹಾಗೆ ಕೆಮ್ತಾರಲ್ಲ ಆ ರೀತಿ ಯಾತನೆ ಅನುಭವಿಸಿದ್ರು, ಎದೆ ನೋವು ಕೂಡ ಬಂದಿತ್ತು. ಅದಕ್ಕೆ ಈ ವಿಡಿಯೋ ಬರೋದು ಲೇಟ್‌ ಆಯ್ತು ಅಂತ ಹೇಳಲಾಗಿದೆ.

-masthmagaa.com

Contact Us for Advertisement

Leave a Reply