ಯುಕ್ರೇನ್‌ ಕೈ ತಪ್ಪುತ್ತಾ ಮಾರಿಯೋಪೋಲ್‌? ಷರತ್ತಿಲ್ಲದೇ ಮಾತುಕತೆಗೆ ಸೈ ಅಂದ ಯುಕ್ರೇನ್‌!

masthmagaa.com:

ಯುಕ್ರೇನ್‌ನ ಪೂರ್ವ ಹಾಗು ದಕ್ಷಿಣ ಪ್ರದೇಶಗಳನ್ನ ಕಿತ್ತುಕೊಂಡು ರಷ್ಯಾ ತನ್ನ ಸುತ್ತ ರಕ್ಷಣಾ ಗೋಡೆ ರೀತಿ ಬಳಸಿಕೊಳ್ಳುತ್ತೆ, ಯುಕ್ರೇನ್‌ಗೆ ಕಪ್ಪು ಸಮುದ್ರ ಅಥ್ವಾ ಕರಾವಳಿನೇ ಇಲ್ಲದ ಹಾಗೆ ಮಾಡೋಕೆ ರಷ್ಯಾ ಪ್ರಯತ್ನ ಮಾಡ್ತಿದೆ, ಅದಕ್ಕಾಗಿ ಅದು ಮಾರಿಯೋಪೋಲ್‌ ಅನ್ನ ಬಿಟ್ಟುಕೊಡ್ತಿಲ್ಲ ಅನ್ನೋ ಸುದ್ದಿಗಳು ಹುಟ್ಟಿಕೊಳ್ಳೊತ್ತಿದ್ದಂತೆ ಈಗ ಯುಕ್ರೇನ್‌ಗೂ ಅದು ನಿಜವಾಗುತ್ತಾ? ಮಾರಿಯೋಪೋಲ್‌ ನಮ್ಮ ಕೈ ತಪ್ಪುತ್ತಾ ಅನ್ನೋ ಭೀತಿ ಶುರುವಾಗಿದೆ. ಯಾಕಂದ್ರೆ ಯುಕ್ರೇನ್‌ ಎಷ್ಟೇ ಪ್ರಬಲ ಪ್ರತಿಸ್ಪರ್ಧೆಯನ್ನ ಒಡ್ಡಿದ್ರೂ ಕೂಡ ರಷ್ಯಾ ಮಾತ್ರ ಮಾರಿಯೋಪೋಲ್‌ ಬಿಟ್ಟು ಹೋಗ್ತಾಯಿಲ್ಲ. ಸ್ಟಾಟಜಿಕಲೀ ತುಂಬಾ ಇಂಪಾರ್ಟೆಂಟ್‌ ಪಾಯಿಂಟ್‌ ಆಗಿರೋ ಮಾರಿಯೋಪೋಲ್‌ನ್ನ ಸದ್ಯ ರಷ್ಯಾ ಕಂಟ್ರೋಲ್‌ ಮಾಡ್ತಿದೆ ಅಂತ ಹೇಳಲಾಗ್ತಾಯಿದೆ. ಅದೂ ಅಲ್ದೇ ರಷ್ಯಾ ವಿದೇಶಾಂಗ ಸಚಿವ ಸರ್ಜೇವ್‌ ಲಾವ್ರೋವ್‌ ಕೂಡ ನಾವು ವಶಪಡಿಸಿಕೊಂಡಿರೋ ಪ್ರದೇಶವನ್ನ ಹಿಂದಿಗಿರೋಸೋದಿಲ್ಲ ಅಂತ ಹೇಳಿರೋದಾಗಿ ವರದಿಯಾಗಿದೆ. ಇನ್ನು ರಷ್ಯಾದ ಈ ಎಲ್ಲಾ ತಯಾರಿಗಳಿಂದ ಭಯಗೊಂಡಿರೋ ಯುಕ್ರೇನ್‌, ರಷ್ಯಾ ಜೊತೆಗೆ ರಾಜಿ ಸಂಧಾನಕ್ಕೆ ಮುಂದಾಗಿದ್ದು ಯಾವುದೇ ಕಂಡಿಷನ್‌ ಇಲ್ಲ ಅಂತ ಹೇಳಿದೆ. ಈ ಬಗ್ಗೆ ಟ್ವೀಟ್‌ ಮಾಡಿರೋ ಯುಕ್ರೇನ್‌ನ ಸಂಧಾನ ಕಾರ ಮಿಕಾಯ್ಲೋ ಪೊಡೋಲ್ಯಾಕ್‌ “ಮಾರಿಯೋಪೋಲ್‌ ವಿಷಯದಲ್ಲಿ ನಾವು ವಿಶೇಷ ಸಂಧಾನ ಮಾತುಕತೆಯನ್ನ ನಡೆಸೋಣ, ಇದಕ್ಕೆ ನಮ್ಮ ಕಡೆಯಿಂದ ಯಾವುದೇ ರೀತಿಯ ಪ್ರತಿಬಂಧಕಗಳಾಗಲೀ, ಷರತ್ತುಗಳಾಗಲೀ ಇಲ್ಲ, ನಾವು ಮಾತುಕತೆಗೆ ರೆಡಿ ಇದ್ದೀವಿ” ಅಂತ ಹೇಳಿದ್ದಾರೆ.

-masthmagaa.com

Contact Us for Advertisement

Leave a Reply