ಮಾರಿಯೋಪಾಲ್‌ ಇನ್ನೂ ರಷ್ಯಾ ವಶವಾಗಿಲ್ಲ: ಯುಕ್ರೇನ್‌ ಅಧ್ಯಕ್ಷ

masthmagaa.com:

ಮಾರಿಯೋಪಾಲ್‌ನ ಸ್ವತಂತ್ರಗೊಳಿಸಿದ್ದೀವಿ ಅಂದ್ರೆ ಅವ್ರ ಅರ್ಥದಲ್ಲಿ ವಶಪಡಿಸಿಕೊಂಡಿದ್ದೀವಿ ಅಂತ ಹೇಳಿದ್ದ ರಷ್ಯಾ ಮಾತನ್ನ ಯುಕ್ರೇನ್‌ ಅಲ್ಲಗಳೆದಿದೆ. ದಕ್ಷಿಣ ಮತ್ತು ಪೂರ್ವದಲ್ಲಿ ಯುದ್ಧ ಮುಂದುವರೆದಿದೆ ಅಂತ ಯುಕ್ರೇನ್‌ ಅಧ್ಯಕ್ಷ ವೊಲೊದಿಮಿರ್‌ ಜೆಲನ್‌ಸ್ಕಿ ಹೇಳಿದ್ದಾರೆ. ಎಂದಿನಂತೆ ವೀಡಿಯೋ ಮಾಡಿ ಮಾತಾಡಿರೋ ಅವ್ರು, ಶತ್ರುಗಳ ಸ್ವಲ್ಪನಾದ್ರು ವಿಜಯದ ಬಗ್ಗೆ ಜನ ಮಾತಾಡ್ಲಿ ಅಂತ ಏನೇನ್‌ ಬೇಕೋ ಎಲ್ಲ ಮಾಡ್ತಿದ್ದಾರೆ. ಆದ್ರೆ ಅವ್ರು ಮಾರಿಯೋಪಾಲ್‌ನ ಬಿಟ್ಟು ಓಡಿಹೋಗೋದನ್ನ ಬರೀ ಡಿಲೇ ಮಾಡ್ತಿದ್ದಾರೆ ಅಷ್ಟೇ ಅಂತ ಹೇಳಿದ್ದಾರೆ. ನೆನ್ನೆ ಪುಟಿನ್‌ ಮಾರಿಯೋಪಾಲ್‌ನ ಸ್ವತಂತ್ರಗೊಳಿಸಿದ್ದೀವಿ, ಅಜೋವ್‌ಸ್ಟಲ್‌ ಐರನ್‌ & ಸ್ಟೀಲ್‌ ಪ್ಲಾಂಟ್‌ನಲ್ಲಿ ಮಾತ್ರ ಸುಮಾರು ಸಾವಿರ ಜನ ಯುಕ್ರೇನ್‌ ಸೈನಿಕರು ಇದ್ದಾರೆ ಅಂತ ಹೇಳಿದ್ರು. ಜೊತಗೆ ಅಲ್ಲಿಂದ ಒಂದು ನೊಣ ಕೂಡ ಹೊರಹೋಗದಂತೆ ತಡೆಯಿರಿ ಅಂತ ತಮ್ಮ ಸೇನೆಗೆ ಆದೇಶಿಸಿದ್ರು.

-masthmagaa.com

Contact Us for Advertisement

Leave a Reply