ರಷ್ಯಾ ಮೂರನೇ ಮಹಾಯುದ್ಧ ಶುರು ಮಾಡುತ್ತೆ: ಜರ್ಮನಿ ಭೀತಿ

masthmagaa.com:

ಇಸ್ರೇಲ್‌-ಹಮಾಸ್‌, ಯುಕ್ರೇನ್‌-ರಷ್ಯಾ ಘೋರ ಯುದ್ಧಗಳು ನಡೀತಿರೋ ಮಧ್ಯದಲ್ಲಿ ಇದೀಗ ಜರ್ಮನಿ ಹೊಸ ಬಾಂಬ್‌ ಸಿಡಿಸಿದೆ. ರಷ್ಯಾ ಸದ್ಯದಲ್ಲೇ ಮೂರನೇ ಮಹಾಯುದ್ಧಕ್ಕೆ ನಾಂದಿ ಹಾಡುತ್ತೆ ಅನ್ನೋ ಶಾಕಿಂಗ್‌ ಹೇಳಿಕೆಯನ್ನ ಜರ್ಮನಿ ರಿವೀಲ್‌ ಮಾಡಿದೆ. ಅಲ್ದೇ ಜರ್ಮನ್‌ ಸೇನೆ ಯುದ್ಧಕ್ಕೆ ಸಿದ್ಧತೆ ಬೇರೆ ಮಾಡ್ಕೊಳ್ತಿದೆ ಅಂತಾನೂ ಹೇಳ್ಕೊಂಡಿದೆ. ಹೀಗಂತ ಜರ್ಮನ್‌ ರಕ್ಷಣಾ ಸಚಿವಾಲಯದ ಸೂಕ್ಷ್ಮ ದಾಖಲೆಗಳನ್ನ ʻಬಿಲ್ಡ್‌ʼ (BILD) ಅನ್ನೋ ಅಲ್ಲಿನ ಪತ್ರಿಕೆಯೊಂದು ಪ್ರಕಟಿಸಿ ಮಾಹಿತಿ ನೀಡಿದೆ. ಈ ಡಾಕ್ಯುಮೆಂಟ್‌ನಲ್ಲಿ ಯುಕ್ರೇನ್‌ಗೆ ಪಾಶ್ಚಿಮಾತ್ಯ ನೆರವು ಕಡಿಮೆಯಾಗ್ತಿರೋ ಬೆನ್ನಲ್ಲೇ ಮುಂಬರೋ ಫೆಬ್ರುವರಿಯಲ್ಲೇ ರಷ್ಯಾ ʻಅಲಾಯನ್ಸ್‌ ಡಿಫೆನ್ಸ್‌ 2025ʼರನ್ನ ಲಾಂಚ್‌ ಮಾಡಲಿದೆ. ಅಂದ್ರೆ ಇದ್ರಲ್ಲಿ ಹೆಚ್ಚುವರಿ 2 ಲಕ್ಷ ಸೈನಿಕರನ್ನ ನಿಯೋಜನೆ ಮಾಡಲಿದೆ. ಈ ವೇಳೆ ಯುಕ್ರೇನ್‌ನಲ್ಲಿ ಭಾರೀ ಯುದ್ಧ ನಡೆಯಲಿದೆ. ಇದಾದ್ಮೇಲೆ ರಷ್ಯಾ ಮುಂದಿನ ಜುಲೈನಲ್ಲಿ ಬಾಲ್ಟಿಕ್‌ ರಾಷ್ಟ್ರಗಳ ಸಂಘರ್ಷ ಸೃಷ್ಟಿಯಾಗೋ ಹಾಗೆ ಮಾಡುತ್ತೆ. ಅಂದ್ರೆ ಬಾಲ್ಟಿಕ್‌ ರಾಷ್ಟ್ರಗಳಾದ ಎಸ್ಟೋನಿಯಾ, ಲಾಟ್ವಿಯಾ ಮತ್ತು ಲಿಥುವೇನಿಯಾ ವಿರುದ್ಧ ಸೈಬರ್‌ ದಾಳಿ ನಡೆಸೋದು. ಜೊತೆಗೆ ಅಲ್ಲಿನ ರಷ್ಯಾ ಮೂಲದ ಜನರನ್ನ ಪ್ರಚೋದಿಸೋ ಕೆಲಸ ಮಾಡುತ್ತೆ. ಯುಕ್ರೇನ್‌ ಥರ ಅಲ್ಲಿನ ರಷ್ಯಾ ಮೂಲದ ಜನರಿಗೆ ಆತಂಕ ಇದೆ, ಭೀತಿ ಇದೆ ಅನ್ನೋ ವಾತಾವರಣವನ್ನ ಸೃಷ್ಟಿ ಮಾಡುತ್ತೆ. ನಂತ್ರ ಸೆಪ್ಟೆಂಬರ್‌ ಒಳಗೆ ಈ ಸಂಘರ್ಷ ಒಂದು ಹದಕ್ಕೆ ಬಂದಾಗ ʻಜಾಪಡ್‌ 2024ʼ (Zapad 2024) ಅನ್ನೋ ದೊಡ್ಡ ಮಿಲಿಟರಿ ಅಭ್ಯಾಸ ನಡೆಸುತ್ತೆ. ಇದ್ರಲ್ಲಿ ಸುಮಾರು 50 ಸಾವಿರ ರಷ್ಯನ್‌ ಸೈನಿಕರು ಪಶ್ಚಿಮ ರಷ್ಯಾ ಮತ್ತು ಬೆಲರೂಸ್‌ ಭಾಗದಲ್ಲಿ ಮಿಲಿಟರಿ ಅಭ್ಯಾಸ ನಡೆಸ್ತಾರೆ. ಆದ್ರೆ ಈ ಅಭ್ಯಾಸದ ಮುಖ್ಯ ಕೆಲಸ ಸೇನೆಯನ್ನ ಹಾಗೆ ಮಿಡ್‌ ರೇಂಜ್‌ ಮಿಸೈಲ್‌ಗಳನ್ನ ರಷ್ಯಾ ಆಡಳಿತ ಇರೋ ಕಲಿನಿನ್‌ಗ್ರಾಡ್‌ಗೆ ಮೂವ್‌ ಮಾಡೋದು. ಈ ಕಲಿನಿನ್‌ಗ್ರಾಡ್‌ ನ್ಯಾಟೋ ರಾಷ್ಟ್ರಗಳಾದ ಲಿಥುವೇನಿಯಾ ಮತ್ತು ಪೊಲೆಂಡ್‌ ಮಧ್ಯ ಬರುತ್ತೆ. ಸೋ ಈ ಜಾಗಕ್ಕೆ ರಷ್ಯಾ ಸೈನ್ಯ ಜಮಾವಣೆ ಮಾಡುತ್ತೆ. ಜೊತೆ ಇದೇ ವೇಳೆ ನ್ಯಾಟೋ ತಮ್ಮ ಮೇಲೆ ದಾಳಿ ಮಾಡ್ತಿದೆ ಅನ್ನೋ ವಾತಾವರಣವನ್ನ ಸೃಷ್ಟಿ ಮಾಡುತ್ತೆ. ನಂತ್ರ ನಿಧಾನಕ್ಕೆ ಬೆಲರೂಸ್‌ ಮತ್ತು ಕಲಿನಿನ್‌ ನಡುವೆ ಸಂಪರ್ಕ ಸಾಧಿಸೋಕೆ, ಸುವಲ್ಕಿ ಗ್ಯಾಪ್‌ನ್ನ ವಶಪಡಿಸಿಕೊಳ್ಳೋಕೆ ಹೊಂಚು ಹಾಕಿ ಕೂರುತ್ತೆ. ಈ ಸುವಲ್ಕಿ ಗ್ಯಾಪ್‌ ಸಧ್ಯ ಪೊಲೆಂಡ್‌ ಹಾಗು ಲಿಥುವೇನಿಯಾ ಮಧ್ಯದಲ್ಲಿ ಇದೆ. ಇದೇ ವೇಳೆ ಅತ್ತ ಡಿಸೆಂಬರ್‌ ಅನ್ನೋವಷ್ಟರಲ್ಲಿ, ಅಮೆರಿಕ ಅಧ್ಯಕ್ಷೀಯ ಚುನಾವಣೆ ಮುಗಿದು ಅಧಿಕಾರ ಹಸ್ತಾಂತರದ ಅವಧಿ ಬರುತ್ತೆ. ಅಮೆರಿಕದಲ್ಲಿ ಸ್ಪಷ್ಟ ಸರ್ಕಾರ ಅಥವ ಪೂರ್ಣ ಪ್ರಮಾಣದ ಸರ್ಕಾರ ಇನ್ನೂ ಬಂದಿರಲ್ಲ. ಸೋ ಇದೇ ಸಮಯವನ್ನ ಅಡ್ವಾಂಟೇಜ್‌ ಆಗಿ ತಗೊಂಡು ಸುವಲ್ಕಿ ಗ್ಯಾಪ್‌ನಲ್ಲಿ ಗಡಿ ಗಲಾಟೆ, ದಂಗೆಗಳನ್ನ ಸೃಷ್ಟಿಸುತ್ತೆ. ಇದಕ್ಕೆ ಪ್ರತಿಯಾಗಿ ಜರ್ಮನಿ ತಯಾರಾಗಿ ಇರ್ಬೇಕು ಬೆಲರೂಸ್‌ನಲ್ಲಿ ರಷ್ಯಾ ನಿಯೋಜಿಸೋ 70 ಸಾವಿರ ಸೈನಿಕರ ವಿರುದ್ಧ ಜರ್ಮನಿ ಕೂಡ 50 ಸಾವಿರ ಸೈನಿಕರನ್ನ ರೆಡಿ ಮಾಡಿ ಇಟ್ಕೋಬೇಕು ಅಂತ ಈ ಡಾಕ್ಯೂಮೆಂಟ್‌ ಹೇಳಿದೆ. ಅಲ್ಲದೇ 2025ರ ಮೇ ಅನ್ನೋವಷ್ಟರಲ್ಲಿ ರಷ್ಯಾದ ಈ ಕ್ರಮಗಳಿಗೆ ಪ್ರತಿಯಾಗಿ ನ್ಯಾಟೋ ಕಾರ್ಯಾಚರಣೆಗೆ ಇಳೀಬಹುದು. ಇದು ರಷ್ಯಾ ಮತ್ತು ನ್ಯಾಟೋ ನಡುವಿನ ನೇರ ಯುದ್ಧಕ್ಕೆ ದಾರಿಯಾಗ್ಬಹುದು ಅಂತ ಜರ್ಮನಿಯ ದಾಖಲೆಗಳು ಹೇಳ್ತಿವೆ. ಒಟ್ಟಾರೆಯಾಗಿ ರಷ್ಯಾ ಹಂತ ಹಂತವಾಗಿ, ಯಾವ ರೀತಿಯಲ್ಲಿ, ಮುಂದಿನ ವರ್ಷ ನ್ಯಾಟೋ ರಾಷ್ಟ್ರಗಳ ಮೇಲೆ ದಾಳಿ ನಡೆಸೋಕೆ ಸ್ಟ್ರಾಟಜಿ ಬಳಸಲಿದೆ ಅಂತ ಜರ್ಮನ್‌ ಗೆಸ್‌ ವರ್ಕ್‌ ಮಾಡಿದೆ.

ಜರ್ಮನಿ ಸೇನೆಯ ಈ ಭೀತಿಯನ್ನ ಅಮೆರಿಕದ ಮಾಜಿ ಸೇನಾ ಕಮಾಂಡರ್‌ ಲೆಫ್ಟಿನೆಂಟ್‌ ಜನರಲ್‌ ಬೆನ್‌ ಹಾಡ್ಜಸ್‌ ಕೂಡ ಪುಷ್ಟೀಕರಿಸಿದ್ದಾರೆ. ನ್ಯಾಟೋ ಅನ್‌ಪ್ರಿಪೇರ್ಡ್‌ ಆಗಿದೆ, ಯುದ್ಧಕ್ಕೆ ರೆಡಿ ಇಲ್ಲ ಅಂತ ಏನಾದ್ರು ಅನ್ನಿಸಿದ್ರೆ, ಪುಟಿನ್‌ ಈ ರೀತಿ ಡ್ರಾಸ್ಟಿಕ್‌ ಸ್ಟೆಪ್‌ಗಳನ್ನ ತಗೋಳೋಕೆ ಹಿಂಜರಿಯಲ್ಲ. 18 ತಿಂಗಳಲ್ಲೇ ವಿಶ್ವಯುದ್ಧ ಶುರುವಾಗಬಹುದು. ಹಾಗಾಗಿ ಜರ್ಮನಿಯ ಆತಂಕ ಸುಳ್ಳಲ್ಲ ಅಂದಿದ್ದಾರೆ.

ಇನ್ನೊಂದ್ಕಡೆ ಪಿಎಂ ನರೇಂದ್ರ ಮೋದಿ ರಷ್ಯಾ ಅಧ್ಯಕ್ಷ ವ್ಲಾಡಿಮಿರ್‌ ಪುಟಿನ್‌ಗೆ ಕಾಲ್‌ ಮಾಡಿ ಮಾತುಕತೆ ನೆಡಿಸಿದ್ದಾರೆ. ಈ ವೇಳೆ ಉಭಯ ದೇಶಗಳು ತಮ್ಮ ಸ್ಟ್ರಾಟಜಿಕ್‌ ಪಾರ್ಟನರ್‌ಶಿಪ್‌ನ ಪಾಸಿಟಿವ್‌ ಬೆಳವಣಿಗೆಗಳ ಬಗ್ಗೆ ಡಿಸ್‌ಕಸ್‌ ಮಾಡಿದ್ದಾರೆ. ಜೊತೆಗೆ ಮುಂದಿನ ದಿನಗಳಲ್ಲಿ ಎರಡು ದೇಶಗಳು ಒಟ್ಟಾಗಿ ಕೈಗೊಳ್ಳೋ ಕಾರ್ಯಗಳಿಗೆ ಪ್ಲಾನ್‌ ಮಾಡೋ ಬಗ್ಗೆ ಚರ್ಚಿಸಿದ್ದಾರೆ. ಅಲ್ದೇ ಪ್ರಾದೇಶಿಕ ಮತ್ತು ಜಾಗತಿಕ ಸಮಸ್ಯೆಗಳ ಬಗ್ಗೇನೂ ಮಾತುಕತೆ ನಡೆಸಿದ್ದಾರೆ. ಜೊತೆಗೆ ಮುಂಬರೋ ಚುನಾವಣೆ ಎದುರಿಸೋಕೆ ಒಬ್ರಿಗೊಬ್ರು ವಿಶ್‌ ಮಾಡಿಕೊಂಡಿದ್ದೀವಿ ಅಂತ ಪಿಎಂ ಮೋದಿ ಪೋಸ್ಟ್‌ ಮಾಡಿದ್ದಾರೆ.

-masthmagaa.com

Contact Us for Advertisement

Leave a Reply