‘ಈ ಜಾಗದಲ್ಲೇ ಮಾತಾಡೋಣ ಬನ್ನಿ’: ರಷ್ಯಾಗೆ ಯುಕ್ರೇನ್ ಆಹ್ವಾನ!

masthmagaa.com:

ಯುಕ್ರೇನ್‌ ತನ್ನ ಸ್ಟ್ರಾಟಜಿಕ್‌ ಪೋರ್ಟ್‌ ಸಿಟಿಯಲ್ಲಿ ರಷ್ಯಾ ಜೊತೆ ಮಾತಾಡೋಕೆ ಕರೆದಿದೆ. ಮರಿಯೊಪೋಲ್‌ನಲ್ಲಿರುವ ಅಜೋವ್‌ಸ್ಟಾಲ್‌ ಸ್ಥಾವರದ ಬಳಿ ರಷ್ಯಾ ಜೊತೆ ಮಾತುಕತೆ ನಡೆಸೋಕೆ ಕೇಳಿಕೊಂಡಿದೆ. ಈ ಜಾಗ ಯುಕ್ರೇನ್‌ ಸೇನೆಯ ಅಜೋವ್‌ ರೆಜಿಮೆಂಟ್‌ನ ಕೊನೆಯ ಭದ್ರಕೋಟೆಯಾಗಿದೆ. ಈಗ ಆಲ್ರೆಡಿ ಈ ಒಂದು ಜಾಗ ಬಿಟ್ಟು ಇಡೀ ಮರಿಯೊಪೋಲ್‌ ರಷ್ಯಾದ ನಿಯಂತ್ರಣದಲ್ಲಿದೆ. ಜೊತೆಗೆ ಸ್ಥಾವರದಲ್ಲಿ ಅಜೋವ್‌ ರೆಜಿಮೆಂಟ್‌ನ ಸಾವ್ರಾರು ಯೋಧರು ಮತ್ತು ನಾಗರಿಕ್ರು ಸಿಲುಕಿದ್ದಾರೆ. ಅಲ್ದೆ ಇದ್ರ ಜೊತೆಗೆ ರಷ್ಯಾ ಅಧ್ಯಕ್ಷ ವ್ಲಾಡಿಮಿಯರ್‌ ಪುಟಿನ್‌ ತಮ್ಮ ಸೈನಿಕ್ರಿಗೆ ‘ಈ ವಾರ ಸ್ಥಾವರದ ಮೇಲೆ ದಾಳಿ ಮಾಡ್ಬೇಡಿ, ಆದ್ರೆ ಸಂಪೂರ್ಣವಾಗಿ ಮುತ್ತಿಗೆ ಹಾಕಿ ಫುಲ್ ಬ್ಲಾಕ್ ಮಾಡಿ. ಒಂದು ನೊಣವೂ ಹೊರಗೆ ಬರಬಾರದು’ ಅಂತ ಹೇಳಿದಾರೆ.

-masthmagaa.com

Contact Us for Advertisement

Leave a Reply