ರಷ್ಯಾ-ಬೆಲಾರುಸ್‌ ಗುಪ್ತಚರ್ಚೆ, ರಷ್ಯಾ ಜೊತೆ ಬಲಿ ಕಾ ಬಕ್ರಾ ಆಯ್ತಾ ಬೆಲಾರುಸ್?

masthmagaa.com:

ಪಾಶ್ಚೀಮಾತ್ಯರ ಸಾಂಕ್ಷನ್‌ ಅಸ್ತ್ರಕ್ಕೆ ರಷ್ಯಾ ಜೊತೆಗೆ ಅದರ ಐರನ್‌ ಬ್ರದರ್‌ ಬೆಲಾರಸ್‌ ಕೂಡ ಬಲಿಯಾಗಿರೋದು ನಿಮ್ಗೆಲ್ಲಾ ಗೊತ್ತೇ ಇದೆ. ಅದರಲ್ಲೂ ರಷ್ಯಾಗೆ ಅಂತರಾಷ್ಟ್ರೀಯವಾಗಿ ಯಾವ್ಯಾವಾ ಸಂಘಟನೆಗಳು ನಿರ್ಬಂಧ ಹೇರಿದ್ವೋ ಅವೆಲ್ಲಾ ಬೆಲಾರಸ್‌ಅನ್ನ ಕೂಡ ದೂರ ಇಟ್ಟಿವೆ. ಇನ್ನು ಹೇಳ್ಬೇಕಂದ್ರೆ ಯೂರೋಪಿಯನ್ನರ ಕಣ್ಣಿಗಂತೂ ಬೆಲಾರಸ್ ಅನ್ನೋದು ಮತ್ತೊಂದು ರಷ್ಯಾ ಆಗೋಗಿದೆ.ಈ ನಡುವೆಯೇ
ತಮ್ಮ ಮೇಲೆ ಹೇರಿರುವ ಸ್ಯಾಂಕ್ಷನ್‌ಗಳಿಗೆ ಟಕ್ಕರ್‌ ಕೊಡೋಕೆ ರಷ್ಯಾ ಅಧ್ಯಕ್ಷ ವ್ಲಾಡಿಮಿರ್‌ ಪುಟಿನ್‌ ಹಾಗು ಬೆಲಾರಸ್‌ ಅಧ್ಯಕ್ಷ ಅಲೆಂಕ್ಸಾಡರ್‌ ಲುಕಶಂಕೋ ಇಬ್ಬರೂ ಬ್ಲಗೋವೆಶ್ಚೆಂಕ್‌ ಎಂಬ ರಷ್ಯನ್‌ ನಗರದಲ್ಲಿ ಭೇಟಿಯಾಗಿ ಮಾತುಕತೆ ನಡೆಸಿದ್ದಾರೆ. ಈ ಬಗ್ಗೆ ಅಲ್ಲಿನ ಮಾಧ್ಯಮಗಳು ವರದಿ ಮಾಡಿದ್ದು ಯಕ್ರೇನ್‌ ದಾಳಿಯಿಂದ ಪಾಶ್ಚೀಮಾತ್ಯರು ಹೇರಿರೋ ನಿರ್ಬಂಧಗಳಿಗೆ ಪ್ರತಿಯಾಗಿ ತಾವು ಕೂಡ ಯಾವ್‌ ರೀತಿ ರೀಯಾಕ್ಷನ್‌ ಕೊಡ್ಬೋದು, ಹಾಗು ಈಗಾಗಲೇ ಇರೋ ಸ್ಯಾಂಕ್ಷನ್‌ಗಳಿಂದ ಬಚಾವಗೋದು ಹೇಗೆ ಅನ್ನೋ ಬಗ್ಗೆ ಚರ್ಚೆ ನಡೆಸಿದ್ದಾರೆ ಅಂತ ವರದಿಯಾಗಿದೆ.

-masthmagaa.com

Contact Us for Advertisement

Leave a Reply