‌ರಷ್ಯಾ: ಪರಸ್ಪರ ರೈಫಲ್‌ಗಳನ್ನ ಗಿಫ್ಟ್‌ ನೀಡಿರೊ ಪುಟಿನ್‌-ಕಿಮ್

masthmagaa.com:

ಅಧಿಕಾರಿಗಳು ಮೀಟ್‌ ಆದಾಗ ತಮ್ಮ ದೇಶದ ಆರ್ಟ್‌ನ್ನ ಅಥ್ವಾ ಯಾವುದೇ ಕಲ್ಚರಲ್‌ ವಸ್ತುವನ್ನ ಗಿಫ್ಟ್‌ ಆಗಿ ನೀಡ್ತಾರೆ. ಆದ್ರೆ ರಷ್ಯಾ ಪ್ರವಾಸದಲ್ಲಿರೊ ಉತ್ತರ ಕೊರಿಯಾ ಸರ್ವಾಧಿಕಾರಿ ಕಿಮ್‌ ಜಾಂಗ್‌ ಉನ್‌ ಹಾಗೂ ರಷ್ಯಾ ಅಧ್ಯಕ್ಷ ವ್ಲಾಡಿಮಿರ್‌ ಪುಟಿನ್‌ ಪರಸ್ಪರ ರೈಫಲ್‌ಗಳನ್ನ ಗಿಫ್ಟ್‌ ಆಗಿ ಎಕ್ಸ್‌ಚೇಂಜ್‌ ಮಾಡಿಕೊಂಡಿದ್ದಾರೆ. ರಷ್ಯಾದ ಸ್ಪೇಸ್‌ ಸೆಂಟರ್‌ನಲ್ಲಿ ಗಿಫ್ಟ್‌ ಎಕ್ಸ್‌ಚೇಂಜ್‌ ಕಾರ್ಯಕ್ರಮ ನಡೆದಿದೆ. ರಷ್ಯಾ ನಿರ್ಮಿತ ಹೈ ಕ್ವಾಲಿಟಿ ರೈಫಲ್‌ ಹಾಗೂ ರಷ್ಯಾದ ಸ್ಪೇಸ್‌ ಸೂಟ್‌ನ ಕೈಗೆ ಧರಿಸುವ ಗ್ಲೋವ್‌ನ್ನ ಕಿಮ್ಮಣ್ಣನಿಗೆ ಪುಟಿನ್‌ ಗಿಫ್ಟ್‌ ಆಗಿ ನೀಡಿದ್ದಾರೆ. ಹಾಗೆ ಉತ್ತರ ಕೊರಿಯಾ ನಿರ್ಮಿತ ಗನ್‌ ಒಂದನ್ನ ಕಿಮ್‌ ಪುಟಿನ್‌ಗೆ ರಿಟರ್ನ್‌ ಗಿಫ್ಟ್‌ ಆಗಿ ಕೊಟ್ಟಿದ್ದಾರೆ ಅಂತ ಕ್ರೆಮ್ಲಿನ್‌ ಹೇಳಿದೆ.

-masthmagaa.com

Contact Us for Advertisement

Leave a Reply