ಯುಕ್ರೇನ್‌ನಿಂದ ಗೆದ್ದ ಪ್ರದೇಶಗಳು ಶೀಘ್ರದಲ್ಲೇ ರಷ್ಯಾಗೆ ಸೇರ್ಪಡೆ! ಪುಟಿನ್‌ರಿಂದ ಅಧಿಕೃತ ಘೋಷಣೆ?

masthmagaa.com:

ಇನ್ನೊಂದ್ಕಡೆ ಈಗ ಯುಕ್ರೇನ್‌ನಿಂದ ರಷ್ಯಾ ಆಕ್ರಮಿಸಿಕೊಂಡಿರೋ ಡಾನ್‌ಬಾಸ್‌ ಪ್ರದೇಶದಲ್ಲಿ ರಷ್ಯಾ ನಡೆಸ್ತಿರೋ ಜನಮತ ಸಂಗ್ರಹ ಮುಕ್ತಾಯವಾಗಿದೆ. ಪ್ರಾಥಮಿಕ ಮಾಹಿತಿಯ ಪ್ರಕಾರ ಇಲ್ಲಿರೋ ಜನರೂ ಕೂಡ ರಷ್ಯಾಗೆ ಸೇರಿಕೊಳ್ಳೋಕೆ ಬಯಸ್ತಿದ್ದಾರೆ ಅಂತ ಹೇಳಲಾಗ್ತಿದೆ. ಇದರ ಬೆನ್ನಲ್ಲೇ ಈ ಕುರಿತು ಅಮೆರಿಕ ಹಾಗೂ ಯುಕ್ರೇನ್‌ಗಳು ಈ ಕ್ರಮದ ವಿರುದ್ದ ಆಕ್ರೋಶ ಹೊರ ಹಾಕಿವೆ. ಇದೆಲ್ಲ ಸುಳ್ಳು ರಷ್ಯಾ ನಡೆಸಿರೋದು ನಕಲಿ ಜನಮತ ಅಂತ ಯುಕ್ರೇನ್‌ ಹೇಳಿದೆ. ಇನ್ನು ಇದೇ ಶುಕ್ರವಾರ ಪುಟಿನ್‌ ಸಂಸತ್‌ನಲ್ಲಿ ಭಾಷಣ ಮಾಡಲಿದ್ದಾರೆ. ಇದೇ ಸಂದರ್ಭದಲ್ಲಿ ಈ ವಶಪಡಿಸಿಕೊಂಡಿರೋ ಪ್ರದೇಶಗಳನ್ನ ಪುಟಿನ್‌ ರಷ್ಯಾಗೆ ಸೇರಿಸುವ ಕುರಿತು ಅಧಿಕೃತ ಘೋಷಣೆ ಮಾಡಲಿದ್ದಾರೆ. ಈ ಬಗ್ಗೆ ನಮಗೆ ಮಾಹಿತಿ ಇದೆ ಅಂತ ಬ್ರಿಟನ್‌ ಹೇಳಿದೆ.

-masthmagaa.com

Contact Us for Advertisement

Leave a Reply