ರಷ್ಯಾ ಈ ರೀತಿ ಮಾಡಿದ್ರೆ ನಾವು ಯುದ್ಧಕ್ಕೆ ಎಂಟ್ರಿ ಕೊಡ್ಬೇಕಾಗುತ್ತೆ: ಅಮೆರಿಕ ವಾರ್ನಿಂಗ್​

masthmagaa.com:

ಯುಕ್ರೇನ್‌ ಯುದ್ಧದ ಹಿನ್ನಡೆಗಳಿಂದ ಹತಾಶಗೊಂಡಿರೋ ಪುಟಿನ್‌ ಒಡ್ಡುತ್ತಾ ಇರೋ ಪರಮಾಣು ಬೆದರಿಕೆಗಳನ್ನ ಲೈಟ್‌ ಆಗಿ ತಗೋಳೋ ಹಾಗಿಲ್ಲ ಅಂತ ಅಮೆರಿಕದ CIA ಡೈರೆಕ್ಟರ್‌ ವಿಲಿಯಮ್‌ ಬರ್ನ್ಸ್‌ ಹೇಳಿದ್ದಾರೆ. ಅಟ್ಲಾಂಟದಲ್ಲಿ ಈ ಸಂಬಂಧ ಮಾತಾಡಿರೋ ಅವ್ರು, ಇದುವರೆಗೂ ರಷ್ಯಾ ಸೇನೆ ಅನುಭವಿಸ್ತಾ ಇರೋ ಹಿನ್ನಡೆಗಳಿಂದ ಪುಟಿನ್‌ ಮತ್ತು ರಷ್ಯಾದ ನಾಯಕತ್ವ ಹತಾಶೆಗೊಂಡಿದೆ. ಇದನ್ನ ನೋಡಿದ್ರೆ ಅವ್ರು ಒಡ್ಡುತ್ತಾ ಇರೋ ಪರಮಾಣು ಆಯುಧ ಬಳಕೆಯ ಬೆದರಿಕೆಗಳನ್ನ ಅಷ್ಟು ಸುಲಭವಾಗಿ ತಗೋಳೋ ಹಾಗಿಲ್ಲ ಎಂದಿದ್ದಾರೆ. ಜೊತೆಗೆ ರಷ್ಯಾ ಪರಮಾಣು ಶಸ್ತ್ರಾಸ್ತ್ರಕ್ಕೆ ಸಂಬಂಧಿಸಿದಂತೆ, ‘ಎಸ್ಕಲೇಟ್‌ ಟು ಡಿಎಸ್ಕಲೇಟ್‌’ ತತ್ವ ಪಾಲಿಸುತ್ತೆ. ಇದ್ರ ಪ್ರಕಾರ ರಷ್ಯಾದ ಭದ್ರತೆಗೆ ಅಪಾಯ ಎದುರಾದಾಗ ರಷ್ಯಾ ಎಷ್ಟೇ ಚಿಕ್ಕ ಯುದ್ಧ ಅಥವಾ ಸಂಘರ್ಷ ಅಂತ ನೊಡದೇ ತಾನೇ ಮೊದ್ಲು ಪರಮಾಣು ಅಸ್ತ್ರವನ್ನ ಬಳಸಬಹುದು. ಸೋ ಈ ಥಿಯರಿ ಪ್ರಕಾರ ರಷ್ಯಾ ನಡ್ಕೊಂಡ್ರೆ, ನ್ಯಾಟೋ ಯುಕ್ರೇನ್‌ ಯುದ್ಧದಲ್ಲಿ ಭಾಗಿಯಾಗ್ಬೇಕಾಗುತ್ತೆ. ಮುಂದೆ ಅದು ಮೂರನೇ ವಿಶ್ವಯುದ್ಧ ಆಗುತ್ತೋ ಅನ್ನೋ ಕಳವಳ ಅಧ್ಯಕ್ಷ ಬೈಡನ್‌ಗೆ ಇರುವುದು ನನಗೆ ಅರ್ಥ ಆಗುತ್ತೆ ಅಂತ ಬರ್ನ್ಸ್‌ ಹೇಳಿದ್ದಾರೆ. ನಿನ್ನೆ ತಾನೆ ಸ್ವೀಡನ್‌ ಮತ್ತು ಫಿನ್ಲೆಂಡ್‌ ದೇಶಗಳನ್ನ ನ್ಯಾಟೋಗೆ ಸೇರಿಸಿಕೊಂಡ್ರೆ ಬಾಲ್ಟಿಕ್‌ನ್ನ ಪರಮಾಣು ಮುಕ್ತ ಮಾಡಕ್ಕಾಗಲ್ಲ ಅಂತ ರಷ್ಯಾ ಎಚ್ಚರಿಸಿತ್ತು. ಇದೀಗ ಅಮೆರಿಕ ಕೂಡ ಅದಕ್ಕೆ ಪ್ರತಿಕ್ರಿಯೆ ಕೊಟ್ಟಿದ್ದು, ರಷ್ಯಾ ಪರಮಾಣು ಅಸ್ತ್ರ ಬಳಸಿದ್ರೆ ನ್ಯಾಟೋ ಈ ಯುದ್ಧದಲ್ಲಿ ಭಾಗವಹಿಸುತ್ತೆ ಅಂತೇಳಿದೆ.

-masthmagaa.com

Contact Us for Advertisement

Leave a Reply