ಬರುವ ಚುನಾವಣೆಯಲ್ಲಿ ಪ್ರಧಾನಿ ಮೋದಿ ಗೆದ್ದು ಬರ್ಬೇಕು: ಪುಟಿನ್

masthmagaa.com:

ಐದು ದಿನಗಳ ರಷ್ಯಾ ಪ್ರವಾಸದಲ್ಲಿರೋ ವಿದೇಶಾಂಗ ಸಚಿವ ಎಸ್ ಜೈಶಂಕರ್‌ ಬುಧವಾರ ರಷ್ಯಾ ಅಧ್ಯಕ್ಷ ವ್ಲಾಡಿಮಿರ್‌ ಪುಟಿನ್‌ರನ್ನ ಭೇಟಿ ಮಾಡಿದ್ದಾರೆ.‌ ಈ ಭೇಟಿ ವೇಳೆ ಪುಟಿನ್‌ ಪ್ರಧಾನಿ ಮೋದಿಗೆ ಸಚಿವ ಜೈಶಂಕರ್‌ ಮೂಲಕ ವಿಷ್‌ ಮಾಡಿದ್ದಾರೆ. ಬರುವ ಎಲೆಕ್ಷನ್‌ನಲ್ಲಿ ನಮ್ಮ ಸ್ನೇಹಿತರು ಗೆಲ್ಬೇಕು. ಅಂದ್ರೆ ಪ್ರಧಾನಿ ಮೋದಿಗೆ ಸಕ್ಸಸ್‌ ಸಿಗ್ಬೇಕು ಅಂತ ಪುಟಿನ್‌ ಹೇಳಿದ್ದಾರೆ. ಸಾಮಾನ್ಯವಾಗಿ ಅಲ್ಲಿನ ಪ್ರೊಟೊಕಾಲ್‌ ಪ್ರಕಾರ ಪುಟಿನ್‌ ಯಾವ ದೇಶದ ನಾಯಕರನ್ನೂ ಮೀಟ್‌ ಮಾಡಲ್ಲ. ಅದ್ರಲ್ಲೂ ಯುಕ್ರೇನ್‌ ಯುದ್ಧ ಶುರುವಾದ್ಮೇಲೆ ಪುಟಿನ್‌ ದ್ವಿಪಕ್ಷೀಯ ಸಂಬಂಧಗಳ ವಿಚಾರದಲ್ಲಿ ತುಂಬಾ ಸೆಲೆಕ್ಟಿವ್‌ ಆಗಿದ್ದಾರೆ. ಅದೂ ಅಲ್ದೇ ಅಂತರಾಷ್ಟ್ರೀಯ ನ್ಯಾಯಾಲಯ ಅಥ್ವಾ ICC ಪುಟಿನ್‌ ಮೇಲೆ ಅರೆಸ್ಟ್‌ ವಾರೆಂಟ್‌ ಇಶ್ಯೂ ಮಾಡಿದ್ಮೇಲೆ ಪುಟಿನ್‌ ಗಡಿ ದಾಟಿರೋದೆ ಕಮ್ಮಿ. ಒಮ್ಮೆ ಸೌದಿಗೆ ಭೇಟಿ ನೀಡಿದ್ರು ಅಷ್ಟೆ. ಉತ್ತರ ಕೊರಿಯಾದ ಕಿಮ್‌ ಜಾಂಗ್‌ ಉನ್‌, ಚೀನಾ ಅಧ್ಯಕ್ಷ ಷಿ ಜಿನ್‌ಪಿಂಗ್‌ ಬಿಟ್ರೆ ಭಾರತದ ಅಧಿಕಾರಿಗಳ್ನ ಮೀಟ್‌ ಮಾಡಿದ್ದಾರೆ ಅಷ್ಟೆ. ಈ ಹಿಂದೆ ಭಾರತದ ರಕ್ಚಣಾ ಸಲಹೆಗಾರ ಅಜಿತ್‌ ದೋವಲ್‌ರನ್ನ ಮೀಟ್‌ ಮಾಡಿದ್ರು. ಇದೀಗ ವಿದೇಶಾಂಗ ಸಚಿವ ಜೈಶಂಕರ್‌ರನ್ನ ಮೀಟ್‌ ಮಾಡಿ ಭಾರತ ರಷ್ಯಾಗೆ ಎಂಥಾ ಇಂಪಾರ್ಟೆಂಟ್‌ ಪಾರ್ಟ್‌ನರ್‌ ಅನ್ನೋದನ್ನ ಪುಟಿನ್‌ ನಿರೂಪಿಸಿದ್ದಾರೆ. ಮಂಗಳವಾರ ಜೈಶಂಕರ್‌ ಕೂಡ ಭಾರತ ರಷ್ಯಾಗಳ ಲಾಂಗ್‌ ಸ್ಟಾಂಡಿಂಗ್‌ ಸಂಬಂಧದ ಬಗ್ಗೆ ಮಾತ್ನಾಡಿದ್ರು. ರಷ್ಯಾಗೋಗೋಕು ಮುಂಚೆ ಪುಟಿನ್‌ ಮೀಟ್‌ ಮಾಡೋ ವಿಚಾರ ಕನ್ಫರ್ಮ್‌ ಆಗಿರ್ಲಿಲ್ಲ. ಆದ್ರೆ ಇದೀಗ ಈ ಇಂಪಾರ್ಟೆಂಟ್‌ ಮೀಟಿಂಗ್‌ ನಡೆದಿದೆ. ಮೀಟಿಂಗ್‌ನಲ್ಲಿ ಪ್ರಧಾನಿ ಮೋದಿಯವ್ರ ಪರ್ಸನಲ್ ಮೆಸೇಜ್‌ ಒಂದನ್ನ ಪುಟಿನ್‌ಗೆ ತಲುಪಿಸಿದ್ದೀನಿ ಅಂತ ಜೈಶಂಕರ್‌ ಹೇಳಿದ್ದಾರೆ. ಇನ್ನು ಮಾತುಕತೆ ವೇಳೆ ಪುಟಿನ್‌ ʻನಮ್ಮ ಸ್ನೇಹಿತ ಪ್ರೈಮ್‌ ಮಿನಿಸ್ಟರ್‌ ಮೋದಿಯವ್ರನ್ನ ಆದಷ್ಟು ಬೇಗ ರಷ್ಯಾದಲ್ಲಿ ಮೀಟ್‌ ಮಾಡೋಕೆ ಎದುರು ನೋಡ್ತಿದ್ದೇನೆ… ಬರುವ ವರ್ಷ ಬಿಡುವಿಲ್ಲದ ಪೊಲಿಟಿಕಲ್‌ ಶೆಡ್ಯೂಲ್‌ ಇರತ್ತೆ ಅಂತ ಗೊತ್ತು. ಆದ್ರೂ ಅವ್ರಿಗೆ ವೆಯ್ಟ್‌ ಮಾಡ್ತಿದ್ದೇನೆ ಅಂದಿದ್ದಾರೆ. ಅಲ್ಲದೆ ಯುಕ್ರೇನ್‌ ಸಿಚುಯೇಶನ್‌ ತರದ ಕಾಂಪ್ಲಿಕೇಟೆಡ್‌ ಪ್ರಾಬ್ಲಂಗಳಿಗೆ ಮೋದಿಯವ್ರ ನಿಲುವು ಏನಿದೆ ಅಂತ ನಮಗೆ ಗೊತ್ತು. ಈ ಬಗ್ಗೆ ನಾವು ಹಲವು ಬಾರಿ ಮಾತನಾಡಿದ್ದೇವೆ. ಈ ಸಂಘರ್ಷದ ಪರಿಸ್ಥಿತಿ ಬಗ್ಗೆ ನಾನು ಅವ್ರಿಗೆ ಮಾಹಿತಿ ಕೊಡ್ತಾನೆ ಇದೀನಿ. ಮೋದಿಯವ್ರು ಈ ಸಮಸ್ಯೆಯನ್ನ ಶಾಂತಿ ಮಾತುಕತೆಯಿಂದ ಪರಿಹಾರ ಮಾಡ್ಬೇಕು ಅಂತ ಬಯಸ್ತಾರೆ. ಅದಕ್ಕಾಗಿ ಅವ್ರು ಶ್ರಮಿಸ್ತಿದ್ದಾರೆ ಕೂಡʼ ಅಂತ ಪುಟಿನ್‌ ಹೇಳಿದ್ದಾರೆ. ಈ ವೇಳೆ ಪುಟಿನ್‌ ಭಾರತ ರಷ್ಯಾ ಸಂಬಂಧಕ್ಕೆ ಯುಕ್ರೇನ್‌ ವಿಚಾರ ಇಂಪ್ಯಾಕ್ಟ್‌ ಮಾಡಿಲ್ಲ. ನಮ್ಮ ವ್ಯಾಪಾರ ಸಂಬಂಧಗಳು ಇಂಪ್ರೂವ್‌ ಆಗ್ತಾನೆ ಇವೆ. ಅದ್ರಲ್ಲೂ ಕಚ್ಚಾ ತೈಲ ವ್ಯಾಪಾರ ಹಾಗೂ ಟೆಕ್ನಾಲಜಿ ಕ್ಷೇತ್ರಗಳಲ್ಲಿ ಈ ಸಂಬಂಧ ಒಂದು ಹೆಜ್ಜೆ ಮುಂದೆ ಹೋಗಿದೆ ಅಂದಿದ್ದಾರೆ. ಅಂದ್ಹಾಗೆ ರಷ್ಯಾ ಭಾರತ ನಡುವೆ ಹಲವು ವರ್ಷಗಳಿಂದ ವಾರ್ಷಿಕ ಸಮ್ಮೇಳನಗಳು ನಡೀತಿವೆ. ಇದುವರೆಗೆ 21 ದ್ವಿಪಕ್ಷೀಯ ಆ್ಯನುವಲ್‌ ಸಮಿಟ್‌ಗಳಲ್ಲಿ ಉಭಯ ದೇಶಗಳ ನಾಯಕರು ಭೇಟಿ ಮಾಡಿದ್ದಾರೆ. ಆಲ್ಟರ್ನೇಟಿವ್‌ ಆಗಿ ಒಮ್ಮೆ ರಷ್ಯಾದಲ್ಲಿ, ಒಮ್ಮೆ ಭಾರತದಲ್ಲಿ ಮೀಟಿಂಗ್‌ ನಡೆಯುತ್ತೆ. 2021ರಲ್ಲಿ ಕೊನೇದಾಗಿ ದೆಹಲಿಯಲ್ಲಿ ಮೀಟಿಂಗ್‌ ನಡೆದಿತ್ತು. ಆಮೇಲೆ ಕೋವಿಡ್‌, ಯುಕ್ರೇನ್‌ ಸಂಘರ್ಷದಿಂದ ಈ ಮೀಟಿಂಗ್‌ಗೆ ಬ್ರೇಕ್‌ ಬಿದ್ದಿದೆ.

ಇನ್ನು ಪುಟಿನ್‌ ಭೇಟಿ ಮಾಡಿದ ನಂತ್ರ ಸಚಿವ ಜೈಶಂಕರ್‌ ರಷ್ಯನ್‌ ಫಾರಿನ್‌ ಮಿನಿಸ್ಟರ್‌ ಸರ್ಗೆ ಲಾವ್ರೋವ್‌ ಜೊತೆ ಮಾತುಕತೆ ನಡೆಸಿದ್ದಾರೆ. ಈ ವೇಳೆ ಮೇಕ್‌ ಇನ್‌ ಇಂಡಿಯಾ ಇನಿಷಿಯೇಟಿವ್‌ ಅಡಿಯಲ್ಲಿ ಆಧುನಿಕ ಶಸ್ತ್ರಾಸ್ತ್ರಗಳ ಪ್ರೊಡಕ್ಷನ್‌ ಸ್ಟಾರ್ಟ್‌ ಮಾಡೋಕೆ ರಷ್ಯಾ ರೆಡಿ ಇದೆ ಅಂತ ಲಾವ್ರೋವ್‌ ಹೇಳಿದ್ದಾರೆ. ಈ ಮೀಟಿಂಗ್‌ನಲ್ಲಿ ಉಭಯ ದೇಶಗಳ ಮಿಲಿಟರಿ ತಾಂತ್ರಿಕ ಸಹಕಾರದ ಬಗ್ಗೆ ಡಿಸ್ಕಸ್‌ ಮಾಡಲಾಯ್ತು. ಈ ನಿಟ್ಟಿನಲ್ಲಿ ಒಳ್ಳೇ ಬೆಳವಣಿಗೆ ಕಂಡು ಬಂದಿದೆ ಅಂತ ಲಾವ್ರೋವ್‌ ಹೇಳಿದ್ದಾರೆ. ಇದೇ ವೇಳೆ ಉಭಯ ದೇಶಗಳನ್ನ ಕನೆಕ್ಟ್‌ ಮಾಡೋ ನಾರ್ತ್-ಸೌತ್‌ ಅಂತರಾಷ್ಟ್ರೀಯ ಟ್ರಾನ್ಸ್‌ಪೋರ್ಟ್‌ ಕಾರಿಡಾರ್‌ ಪ್ರಾಜೆಕ್ಟ್‌ನ್ನ ಸಧ್ಯದಲ್ಲೇ ಸ್ಟಾರ್ಟ್‌ ಮಾಡಲಿದ್ದೇವೆ ಅಂತ ಲಾವ್ರೋವ್‌ ಹೇಳಿದ್ದಾರೆ. ಅಂದ್ಜಾಗೆ 2000ನೇ ಇಸವಿಯಲ್ಲೇ ಭಾರತ, ಇರಾನ್‌, ರಷ್ಯಾಗಳು ಈ ನಾರ್ತ್-ಸೌತ್‌ ಕಾರಿಡಾರ್ ಪ್ರಾಜೆಕ್ಟ್‌ ಅನೌನ್ಸ್‌ ಮಾಡಿದ್ವು. ಆನಂತ್ರ ಇನ್ನೂ 11 ದೇಶಗಳು ಈ ಮಲ್ಟಿಮೋಡಲ್‌ ಕಾರಿಡಾರ್‌ ಯೋಜನೆಗ ಸೈನ್‌ ಮಾಡಿದ್ವು.‌ ಆದ್ರೆ ಈ ಯೋಜನೆ ಹಲವು ಕಾರಣಗಳಿಂದ ಇಂಪ್ಲಿಮೆಂಟ್‌ ಆಗಿಲ್ಲ. ಈಗ ಇದಕ್ಕೆ ಮತ್ತೆ ಜೀವ ಕೊಡೋ ಸಿಗ್ನಲನ್ನ ಲಾವ್ರೋವ್‌ ನೀಡಿದ್ದಾರೆ. ಜೊತೆಗೆ ಚೆನ್ನೈ-ವ್ಲಾಡಿಯೋಸ್ಟಾಕ್‌ ಸೀ ರೂಟ್‌ ಬಗ್ಗೇನೂ ಮಾತನಾಡಿದ್ದಾರೆ. ಇದ್ರಲ್ಲಿ ಸುಯೇಜ್‌ ಕಾಲುವೆ ಮುಖಾಂತರ ಯುರೋಪ್‌ ಬಳಸಿ ಹೋಗೋದರ ಬದಲು ಮಲಕ್ಕಾ ಜಲಸಂಧಿ, ಚೀನಾ, ಜಪಾನ್ ಸಮುದ್ರ ಮಾರ್ಗವಾಗಿ‌ ರಷ್ಯಾ ತಲುಪೋದು. ಇದು ಸಾಧ್ಯ ಆದ್ರೆ 40 ದಿನಗಳ ಪ್ರಯಾಣದ ಅವಧಿ 24 ದಿನಕ್ಕೆ ಇಳಿಯುತ್ತೆ. ಸೋ ಈ ಪ್ಲಾನ್‌ ಬಗ್ಗೆ ಕೂಡ ಮಾತುಕತೆ ನಡೆಸಲಾಗಿದೆ ಅಂತ ತಿಳಿದು ಬಂದಿದೆ. ಇನ್ನು ಜೈಶಂಕರ್‌ ಕೂಡ ಗ್ಲೋಬಲ್‌ ಸೌತ್‌ನ ಪ್ರಾಬ್ಲಂಗಳು ಹಾಗೂ ಬಹು ನಾಯಕತ್ವದ ಪ್ರಪಂಚ ಇರ್ಬೇಕು ಅನ್ನೋ ಆಯಾಮಗಳ ಬಗ್ಗೆ ಡಿಸ್ಕಸ್‌ ಮಾಡಿದ್ದೇವೆ ಅಂತೇಳಿದ್ದಾರೆ.

-masthmagaa.com

Contact Us for Advertisement

Leave a Reply