ಝೆಲೆನ್ಸ್ಕಿಯನ್ನ ಕೊಲ್ಲಲ್ಲ ಅಂತ ಪುಟಿನ್‌ ಮಾತುಕೊಟ್ಟಿದ್ದಾರೆ: ಇಸ್ರೇಲ್‌ ಮಾಜಿ ಪ್ರಧಾನಿ

masthmagaa.com:

ಯುಕ್ರೇನ್‌ ಮೇಲೆ ಕಳೆದ 11 ತಿಂಗಳಿನಿಂದ ದಾಳಿ ಮಾಡ್ತಿರೊ ರಷ್ಯಾ ಅಧ್ಯಕ್ಷ ವ್ಲಾಡಿಮಿರ್‌ ಪುಟಿನ್‌, ಯುಕ್ರೇನ್‌ ಅಧ್ಯಕ್ಷ ವೊಲೊಡಿಮಿರ್‌ ಝೆಲೆನ್ಸ್ಕಿ ಅವ್ರನ್ನ ಹತ್ಯೆ ಮಾಡಲ್ಲ ಅಂತ ಹೇಳಿರೋದು ಈಗ ತಿಳಿದು ಬಂದಿದೆ. ಈ ಮಾಹಿತಿಯನ್ನ ಇಸ್ರೇಲ್‌ನ ಮಾಜಿ ಪ್ರಧಾನಿ ನೆಫ್ತಾಲಿ ಬೆನ್ನೆಟ್‌ ತಿಳಿಸಿದ್ದಾರೆ. 2022ರ ಮಾರ್ಚ್‌ನಲ್ಲಿ ಪುಟಿನ್‌ರನ್ನ ಭೇಟಿಯಾದಾಗ, ಝೆಲೆನ್ಸ್ಕಿ ಅವ್ರನ್ನ ಕೊಲ್ಲೋಕೆ ಪ್ಲ್ಯಾನ್‌ ಮಾಡ್ತಿದಿರಾ ಅಂತ ಪ್ರಶ್ನಿಸಿದ್ದೆ. ಆಗ ಝೆಲೆನ್ಸ್ಕಿಯನ್ನ ಕೊಲ್ಲಲ್ಲ ಅಂತ ಪುಟಿನ್ ಹೇಳಿದ್ರು. ಅಷ್ಟೇ ಅಲ್ದೇ ಈ ಬಗ್ಗೆ ಅವರು ನಂಗೆ ಮಾತುಕೊಟ್ಟಿದ್ದಾರೆ ಅಂತ ಬೆನ್ನೆಟ್‌ ತಿಳಿಸಿದ್ದಾರೆ.‌ ಅಂದ್ಹಾಗೆ ಕಳೆದ ವರ್ಷ ರಷ್ಯಾ ಯುಕ್ರೇನ್‌ ಮೇಲೆ ಆಕ್ರಮಣ ಮಾಡಿದಾಗ ಉಭಯ ದೇಶಗಳ ನಡುವೆ ಬೆನ್ನೆಟ್‌ ಮಧ್ಯಸ್ಥಿಕೆ ವಹಿಸಿದ್ರು. ಆ ವೇಳೆ ಪುಟಿನ್‌ ತಮಗೆ ಮಾತು ಕೊಟ್ಟಿರೊ ಬಗ್ಗೆ ಬೆನ್ನೆಟ್‌ ಹೇಳಿದ್ದಾರೆ

-masthmagaa.com

Contact Us for Advertisement

Leave a Reply