ಮಾಸ್ಕೊ ದಾಳಿಯಲ್ಲಿ ಇಸ್ಲಾಮಿಕ್‌ ಉಗ್ರರು, ಯುಕ್ರೇನ್‌ ಪಾತ್ರ: ಪುಟಿನ್!

masthmagaa.com:

ಮಾರ್ಚ್‌ 23ರಂದು ರಷ್ಯಾದ ಮಾಸ್ಕೋದ ಕನ್ಸರ್ಟ್‌ ಹಾಲ್‌ನಲ್ಲಿ ನಡೆದ ಭೀಕರ ದಾಳಿಯನ್ನ ಇಸ್ಲಾಮಿಕ್‌ ಉಗ್ರರೇ ಮಾಡಿದ್ದಾರೆ ಅಂತ ರಷ್ಯಾಧ್ಯಕ್ಷ ಪುಟಿನ್‌ ಸ್ಪಷ್ಟಪಡಿಸಿದ್ದಾರೆ. ಜೊತೆಗೆ ʻ139 ಜನರ ಸಾವಿನಲ್ಲಿ ಯುಕ್ರೇನ್‌ ಪಾತ್ರವು ಇದೆ. ಅಲ್ದೇ ಉಗ್ರರು ದಾಳಿ ಮಾಡಿದ ಬಳಿಕ ಯುಕ್ರೇನ್‌ನತ್ತ ತೆರಳಿ ಎಸ್ಕೇಪ್ ಆಗಲು ಪ್ರಯತ್ನಿಸಿದ್ರುʼ ಅಂತ ಪುಟಿನ್‌ ಯುಕ್ರೇನ್‌ ವಿರುದ್ದದ ತಮ್ಮ ನಿಲುವನ್ನ ಮತ್ತೆ ಪುನರುಚ್ಚರಿಸಿದ್ದಾರೆ.‌ ʻಈ ದಾಳಿಯಿಂದ ಯಾರಿಗೆ ಲಾಭ ಆಗಿದೆ…ಇದ್ರ ಹಿಂದೆ ಯಾರಿದ್ದಾರೆ ಅನ್ನೊದನ್ನ ನಮ್ಮ ತನಿಖಾಧಿಕಾರಿಗಳು ಪತ್ತೆ ಮಾಡ್ತಿದ್ದಾರೆ. ಇದ್ರಲ್ಲಿ ಯುಕ್ರೇನ್‌ನ ನವ ನಾಜಿ ಆಡಳಿತದ ಲಿಂಕ್‌ ಇರೋ ಸಾಧ್ಯತೆ ಇದೆʼ ಅಂತ ಇಂಡೈರೆಕ್ಟಾಗಿ ಯುಕ್ರೇನ್‌ ಆಡಳಿತವನ್ನ ಟಾರ್ಗೆಟ್‌ ಮಾಡಿದ್ದಾರೆ.

-masthmagaa.com

Contact Us for Advertisement

Leave a Reply