ರಷ್ಯಾ-ಯುಕ್ರೇನ್‌ ಯುದ್ಧ ಹೆಚ್ಚಾಗಲು ಅಮೆರಿಕ ಕಾರಣ: ಪುಟಿನ್‌

masthmagaa.com:

ರಷ್ಯಾ-ಯುಕ್ರೇನ್‌ ಯುದ್ಧ ಸ್ಟಾರ್ಟ್‌ ಆದಾಗಿನಿಂದ ಇದೇ ಮೊದಲ ಬಾರಿಗೆ ರಷ್ಯಾ ಅಧ್ಯಕ್ಷ ವ್ಲಾಡಿಮಿರ್‌ ಪುಟಿನ್‌ ಇಂಟರ್‌ವ್ಯೂ ಒಂದ್ರಲ್ಲಿ ಕಾಣಿಸಿಕೊಂಡಿದ್ದಾರೆ. ಅಮೆರಿಕದ ಪ್ರಸಿದ್ಧ ನ್ಯೂಸ್‌ ಚ್ಯಾನೆಲ್‌ ನಡೆಸಿರೋ ಈ ಇಂಟರ್‌ವ್ಯೂನಲ್ಲಿ ಪುಟಿನ್‌ ಅಮೆರಿಕ ವಿರುದ್ದ ಕಿಡಿಕಾರಿದ್ದಾರೆ. ʻಅಮೆರಿಕ ಮತ್ತು ಇತರೆ ಪಾಶ್ಚಿಮಾತ್ಯ ರಾಷ್ಟ್ರಗಳಿಂದ ರಷ್ಯಾ-ಯುಕ್ರೇನ್‌ ಯುದ್ಧ ಇನ್ನಷ್ಟು ಹೆಚ್ಚಾಗ್ತಾನೆ ಹೋಯ್ತು…ವಿಸ್ತಾರವಾಗ್ತಲೇ ಹೋಯ್ತು. ಆದ್ರಿಂದ ಅಮೆರಿಕ ಯುಕ್ರೇನ್‌ಗೆ ಶಸ್ತ್ರಾಸ್ತ್ರ ನೆರವು ನೀಡೋದನ್ನ ಸ್ಟಾಪ್‌ ಮಾಡ್ಬೇಕು. ಹೀಗೆ ಮಾಡಿದ್ರೆ ಮಾತ್ರ ಯುದ್ಧ ನಿಲ್ಲೋಕೆ ಸಾಧ್ಯ. ಕೆಲ ವಾರಗಳ ಒಳಗೇನೆ ಎಲ್ಲವೂ ಮುಗಿದ್ಬಿಡುತ್ತೆʼ ಅಂತ ಹೇಳಿದ್ದಾರೆ. ಅಲ್ದೇ ಈ ಹಿಂದೆ ಯುದ್ಧದಿಂದ ಹಿಂದೆ ಸರಿಯೋಕೆ ಸಾಧ್ಯಾನೇ ಇಲ್ಲ ಅಂತಿದ್ದ ಪುಟಿನ್‌ ಈ ಇಂಟರ್‌ವ್ಯೂನಲ್ಲಿ ಮಾತ್ರ ಬೇರೇನೆ ಹೇಳಿದ್ದಾರೆ. ʻವಿವಿಧ ಏಜೆನ್ಸಿಗಳ ಮೂಲಕ ಈಗಲೂ ಕೂಡ ರಷ್ಯಾ ಮತ್ತು ಅಮೆರಿಕ, ಯುಕ್ರೇನ್‌ ಸಂಘರ್ಷ ಎಂಡ್‌ ಮಾಡೋ ಬಗ್ಗೆ ಮಾತುಕತೆ ನಡೆಸ್ತಿವೆʼ ಅಂತ ಹೇಳಿದ್ದಾರೆ.

-masthmagaa.com

Contact Us for Advertisement

Leave a Reply