ಭಾರೀ ಬೆಲೆತೆರಬೇಕಾಗುತ್ತೆ, ಫಿನ್ಲೆಂಡ್‌-ಸ್ವೀಡನ್‌ಗೆ ಪುಟಿನ್‌ ಎಚ್ಚರಿಕೆ!

masthmagaa.com:

ಫಿನ್‌ಲ್ಯಾಂಡ್‌ ಮತ್ತು ಸ್ವೀಡನ್‌ ತಮ್ಮ ಮಿಲಿಟರಿ ಮೂಲಸೌಕರ್ಯವನ್ನ ವಿಸ್ತರಿಸಿಕೊಂಡ್ರೆ ರಷ್ಯಾ ತಕ್ಕ ಪ್ರತಿಕ್ರಿಯೆ ನೀಡಬೇಕಾಗುತ್ತೆ ಅಂತ ರಷ್ಯಾ ಅಧ್ಯಕ್ಷ ವ್ಲಾಡಿಮಿರ್‌ ಪುಟಿನ್‌ ಹೇಳಿದ್ದಾರೆ. ಫಿನ್‌ಲ್ಯಾಂಡ್‌ ಮತ್ತು ಸ್ವೀಡನ್‌ಗಳಿಂದ ನಮಗೆ ಯಾವುದೇ ಸಮಸ್ಯೆಯಿಲ್ಲ. ಆದ್ರೆ ನಾರ್ಡಿಕ್‌ ದೇಶಗಳು ನ್ಯಾಟೋ ಸೇರೋಕೆ ಹತ್ರ ಆಗ್ತಿರೋದು ಮತ್ತು ನ್ಯಾಟೋದ ವಿಸ್ತರಣೆ ರಷ್ಯಾಕ್ಕೆ ಸಮಸ್ಯೆ ಆಗಿದೆ ಅಂತ ಹೇಳಿದ್ದಾರೆ. ಅಲ್ದೆ ತನ್ನ ಜಾಗತಿಕ ಪ್ರಭಾವ ಹೆಚ್ಚಿಸೋಕೆ ಇದು ನ್ಯಾಟೋದ ಪ್ರಯತ್ನ ಅಂತ ಹೇಳಿದ್ದಾರೆ. ಮತ್ತೊಂದ್‌ ಕಡೆ ಪುಟಿನ್‌ ಯುಕ್ರೇನ್‌ ಯುದ್ದದಲ್ಲಿ ಒಬ್ಬ ಕರ್ನಲ್‌ ಅಥ್ವಾ ಬ್ರಿಗೇಡಿಯರ್‌ ಹಂತದಲ್ಲಿ ಇನ್‌ವಾಲ್ವ್‌ ಆಗಿದಾರೆ ಅಂತ ಪಾಶ್ಚಿಮಾತ್ಯ ಮಿಲಿಟರಿ ಅಧಿಕಾರಿಯೊಬ್ರು ಹೇಳಿದ್ದಾರೆ. ಕಾರ್ಯಾಚರಣೆ ಮತ್ತು ಯುದ್ಧತಂತ್ರದ ನಿರ್ಧಾರಗಳನ್ನು ಪುಟಿನ್‌ ಸ್ವತಃ ತೆಗೆದುಕೊಳ್ತಾರೆ. ಡಾನ್‌ಬಾಸ್‌ಲ್ಲಿ ಪಡೆಗಳ ಚಲನವಲನಗಳಿಗೂ ಕೂಡ ಪುಟಿನ್‌ ಸಹಾಯ ಮಾಡ್ತಿದಾರೆ ಅಂತ ಅವ್ರು ಹೇಳಿದ್ದಾರೆ.

-masthmagaa.com

Contact Us for Advertisement

Leave a Reply