ಒಡೆಸ್ಸಾ ದಾಳಿ ʻಒಪ್ಪಂದದ ಮುಖದ ಮೇಲೆ ಉಗಳಿದಂತೆʼ ಎಂದ ಯುಕ್ರೇನ್!

masthmagaa.com:

UN ಮತ್ತು ಟರ್ಕಿ ನೇತೃತ್ವದಲ್ಲಿ ರಷ್ಯಾ ಮತ್ತು ಯುಕ್ರೇನ್‌ ಧಾನ್ಯಗಳ ರಫ್ತನ್ನ ಪುನಃ ಸ್ಟಾರ್ಟ್‌ ಮಾಡೋಕೆ ಸಹಿ ಮಾಡಿದ್ವು. ಇದಾದ ಕೆಲವೇ ಗಂಟೆಗಳಲ್ಲೇ ರಷ್ಯಾ ಯುಕ್ರೇನ್‌ನ ಒಡೆಸ್ಸಾ ಬಂದರಿನ ಮೇಲೆ ಕ್ಷಿಪಣಿ ದಾಳಿ ಮಾಡಿದೆ. ಇದಕ್ಕೆ ತೀವ್ರವಾಗಿ ಆಕ್ರೋಶ ವ್ಯಕ್ತಪಡಿಸಿದ ಯುಕ್ರೇನ್‌ ʻಇದು ಒಪ್ಪಂದದ ಮುಖದ ಮೇಲೆ ಉಗಳಿದಂತೆʼ ಅಂತ ಕಿಡಿಕಾರಿದೆ. ರಷ್ಯಾ ಬರಿ ಮಾತಿಗೆ ಅಷ್ಟೇ ಪ್ರಾಮಿಸ್‌ ಮಾಡುತ್ತೆ. ಅದ್ಯಾವುದನ್ನ ಅನುಸರಿಸಲ್ಲ ಅಂತ ಅಧ್ಯಕ್ಷ ವೊಲೊಡಿಮಿರ್‌ ಝೆಲೆನ್ಸ್ಕಿ ಆರೋಪಿಸಿದ್ದಾರೆ. ಇತ್ತ ಅಮೆರಿಕ ಕೂಡ ರಷ್ಯಾದ ದಾಳಿಯನ್ನ ತೀವ್ರವಾಗಿ ಖಂಡಿಸಿದೆ. ಧಾನ್ಯಗಳ ರಫ್ತು ಒಪ್ಪಂದಕ್ಕೆ ರಷ್ಯಾ ಬದ್ದವಾಗಿದೆಯಾ ಅನ್ನೊದ್ರ ಬಗ್ಗೆ ನಮಗೆ ಅನುಮಾನವಿದೆ ಅಂತ ಹೇಳಿದೆ. ವಿಶ್ವಸಂಸ್ಥೆ ಮುಖ್ಯಸ್ಥ ಅಂಟಾನಿಯೋ ಗುಟರೆಸ್‌ ಕೂಡ ದಾಳಿಯನ್ನ ಖಂಡಿಸಿದ್ದಾರೆ. ಆದ್ರೆ ರಷ್ಯಾ ಮಾತ್ರ ಈ ದಾಳಿಗೂ ನಮಗೂ ಯಾವುದೇ ಸಂಬಂಧವಿಲ್ಲ ಅಂತ ಹೇಳಿದೆ ಅಂತ ಟರ್ಕಿ ರಕ್ಷಣಾ ಸಚಿವ ಹೇಳಿದ್ದಾರೆ. ಜೊತೆಗೆ ಈ ದಾಳಿಯನ್ನ ರಷ್ಯಾ ತುಂಬಾ ಹತ್ತಿರದಿಂದ, ಫುಲ್‌ ಡಿಟೇಲಾಗಿ ಪರಿಶೀಲಿಸ್ತಿದೆ ಅಂತಾನೂ ರಕ್ಷಣಾ ಸಚಿವ ಹುಲಿಸಾಯ್‌ ಅಕಾರ್‌ ಹೇಳಿದ್ದಾರೆ.

-masthmagaa.com

Contact Us for Advertisement

Leave a Reply