ಫೈಟರ್‌ಜೆಟ್‌ನಲ್ಲಿ ಹಾರಾಟ ನಡೆಸಿದ ಪುಟಿನ್, ಬೈಡೆನ್-ನಾವಲ್ನಿ ಪತ್ನಿ ಭೇಟಿ!

masthmagaa.com:

ರಷ್ಯಾ ಅಧ್ಯಕ್ಷ ವ್ಲಾಡಿಮಿರ್‌ ಪುಟಿನ್‌, ಆಧುನಿಕ Tu-160M ಅಣ್ವಸ್ತ್ರ ಸಾಮರ್ಥ್ಯದ ಸೂಪರ್‌ಸಾನಿಕ್ ಸ್ಟ್ರಾಟರ್ಜಿಕ್ ಯುದ್ದ ವಿಮಾನದಲ್ಲಿ ಹಾರಾಟ ನಡೆಸಿದ್ದಾರೆ. ಮುಂಬರೋ ರಷ್ಯನ್ ಪ್ರೆಸಿಡೆನ್ಸಿಯಲ್‌ ಚುನಾವಣೆ ಮುನ್ನ ತಮ್ಮ ಇಮೇಜ್‌ ಬಿಲ್ಡ್‌ ಮಾಡ್ಕೊಳ್ಳಲು‌, ಪುಟಿನ್‌ ಈ ಯುದ್ದ ವಿಮಾನದಲ್ಲಿ ಕೋ-ಪೈಲಟ್‌ ಆಗಿ ಸಂಚರಿಸಿದ್ದಾರೆ ಅಂತೇಳಲಾಗ್ತಿದೆ.

ಮತ್ತೊಂದೆಡೆ ಪುಟಿನ್‌ ವಿರೋಧಿ, ಮೃತ ಅಲೆಕ್ಸಿ ನಾವಲ್ನಿ ಕುಟುಂಬವನ್ನ ಅಮೆರಿಕನ್‌ ಪ್ರೆಸಿಡೆಂಟ್‌ ಜೊ ಬೈಡನ್‌ ಮೀಟ್‌ ಮಾಡಿದ್ದಾರೆ. ಅಲೆಕ್ಸಿ ಅವ್ರ ಪತ್ನಿ ಯುಲಿನಾ ಹಾಗೂ ಪುತ್ರಿ ದಾಶಾ ಅವ್ರನ್ನ ಮೀಟ್‌ ಮಾಡಿ, ಅಲೆಕ್ಸಿ ಸಾವಿನ ಬಗ್ಗೆ ಕಂಬನಿ ಮಿಡಿದ್ದಾರೆ. ಇನ್ನೊಂದೆಡೆ ರಷ್ಯಾ ತನಿಖಾಧಿಕಾರಿಗಳು ಅಲೆಕ್ಸಿ ಅವ್ರ ಅಂತ್ಯಕ್ರಿಯೆಯನ್ನ ರಹಸ್ಯವಾಗಿ ಮಾಡೊಕೆ ಪ್ಲ್ಯಾನ್‌ ಮಾಡಿದ್ದಾರೆ ಅಂತ ಅಲೆಕ್ಸಿ ತಾಯಿ ಲ್ಯುಡ್ಮಿಲಾ ಆರೋಪಿಸಿದ್ದಾರೆ.

-masthmagaa.com

Contact Us for Advertisement

Leave a Reply